Advertisement
ಕರಾವಳಿ ಕೃಷಿಕರಿಗೆ ಮಾವು ಪ್ರಮುಖ ಆದಾಯದ ಬೆಳೆಯಲ್ಲದಿದ್ದರೂ, ಹಲವು ವರ್ಷಗಳಿಂದ ದೊಡ್ಡ ಮತ್ತು ಸಣ್ಣ ರೈತರು ಇಷ್ಟ ಪಟ್ಟು ಮಾವು ಬೆಳೆಯುತ್ತಿದ್ದಾರೆ. ಸಮಗ್ರ ಕೃಷಿ ಪದ್ಧತಿಯಲ್ಲಿ ಕಿರು ಆದಾಯದ ಮೂಲವಾಗಿಯೂ ಮಾವು ಗುರುತಿಸಿಕೊಂಡಿದೆ. ನಗರ ಪ್ರದೇಶದ ಮನೆಯಿಂದ ಹಿಡಿದು ಗ್ರಾಮೀಣ ಭಾಗ ದಲ್ಲಿಯೂ ಮಾವು ಬೆಳೆಯುತ್ತಾರೆ.
ಉಡುಪಿ ತೋಟಗಾರಿಕೆ ಕ್ಷೇತ್ರದಲ್ಲಿ ಪುನಶ್ಚೇತನ ಕಾರ್ಯದ ಮೂಲಕ ಮಾವು ಬೆಳೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಇಲಾಖೆಗೆ ಇಲ್ಲಿನ ಮಾವಿನ ಮರಗಳು ಉತ್ತಮ ಆದಾಯ ಮೂಲವಾಗಿದೆ. 2021ಕ್ಕಿಂತ ಆದಾಯ ಹೆಚ್ಚು ಬಂದಿದೆ. ಜಿಲ್ಲೆಯ 4 ತೋಟಗಾರಿಕೆ ಕ್ಷೇತ್ರದಲ್ಲಿ 2021ರ ಆದಾಯ 4.37 ಲಕ್ಷ ರೂ., ಇದ್ದರೆ ಈ ಸಾಲಿನ ಆದಾಯ 4.85 ಲಕ್ಷ ರೂ. ಬಂದಿದೆ. 2022ರ ಸಾಲಿನಲ್ಲಿ ಉಡುಪಿ ಶಿವಳ್ಳಿ ದೊಡ್ಡಣಗುಡ್ಡೆ 1.74 ಲಕ್ಷ ರೂ., ಕಾರ್ಕಳ ರಾಮಸಮುದ್ರ 71 ಸಾವಿರ ರೂ., ಕುಕ್ಕುಂದೂರು 1.10 ಲಕ್ಷ ರೂ., ಕುಂದಾಪುರ ಕುಂಭಾಸಿ 73 ಸಾವಿರ ರೂ., ಕೇದೂರು ತೋಟಗಾರಿಕೆ ಕ್ಷೇತ್ರದಲ್ಲಿ 56 ಸಾವಿರ ರೂ., ಆದಾಯ ಬಂದಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ ನಿದೀಶ್ ತಿಳಿಸಿದ್ದಾರೆ.
Related Articles
Advertisement
ಮರಗಳ ಗುತ್ತಿಗೆ ಜಿಲ್ಲೆಯಲ್ಲಿ ಹೆಚ್ಚಾಗಿ ಬೆನೆಟ್ ಅಪೂಸ್ ಮಾವು ಬೆಳೆಯಲಾಗುತ್ತದೆ. ಅದರ ಹೊರತಾಗಿ ತೋತಾಪುರಿ ಹಣ್ಣಿಗೆ ಸ್ಥಾನವಿದೆ. ಎಪ್ರಿಲ…, ಮೇ ತಿಂಗಳಲ್ಲಿ ಮಾವು ಕಟಾವಿಗೆ ಜನ ಸಿಗುವುದಿಲ್ಲ. ಬಹುತೇಕ ಮಾವು ತೋಪುಗಳಲ್ಲಿ ಬೆಳೆಗಾರರೆ ಕಟಾವು ಪ್ರಕ್ರಿಯೆ ನಡೆಸುತ್ತಾರೆ, ಇನ್ನೊಂದೆಡೆ ಮಾರುಕಟ್ಟೆ ಸಮಸ್ಯೆ ರೈತರಿಗೆ ಕಾಡುತ್ತಿದೆ. ದÇÉಾಳಿಗಳೆ ನೇರವಾಗಿ ಬಂದು ಮಾವು ಕೊಡುವಂತೆ ಬೇಡಿಕೆ ಇಡುತ್ತಾರೆ. ಸಾಗಾಟ ಇನ್ನಿತರೆ ಸಮಸ್ಯೆ ಬೇಡವೆಂದು ಹೆಚ್ಚಿನ ಬೆಳೆಗಾರರು ನೇರವಾಗಿ ಮಾರಾಟ ಮಾಡದೆ ದÇÉಾಳಿಗಳಿಗೆ ಮರಗಳನ್ನೇ ಗುತ್ತಿಗೆ ವಹಿಸಿಕೊಡುತ್ತಾರೆ. ಈ ಪ್ರಕ್ರಿಯೆಯಲ್ಲಿ ತಳಿಗಳ ಆಧಾರದಲ್ಲಿ ಬೆಳೆಗಾರರಿಗೆ ಕೆಜಿಗೆ 15ರಿಂದ 20 ರೂ. ಸಿಗುತ್ತದೆ. ಅಥವಾ ಒಂದು ಕಾಯಿಗೆ ದರವನ್ನು ನಿಗದಿ ಮಾಡಲಾಗುತ್ತದೆ. ಬೆಲೆ, ಬೇಡಿಕೆ ನಿರೀಕ್ಷೆಯಷ್ಟಿಲ್ಲ
ಈ ಹಿಂದೆ ಮಾವು ಬೆಳೆಯುತ್ತಿದ್ದೆವು, ಹೂಬಿಟ್ಟು ಕಾಯಿ ಬಂದಾಗ ಈ ನಡುವೆ ಮಳೆಯಾದರೆ ಹುಳವಾಗಿ ಹಣ್ಣುಗಳು ಉದುರುತ್ತಿದ್ದವು. ಮಾವು ಬೆಳೆಗೆ ಬೇಡಿಕೆ, ಉತ್ತಮ ದರವು ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿರಲಿಲ್ಲ. ಪ್ರಸ್ತುತ ಮಾವು ತೆಗೆದು ಅಡಿಕೆಯನ್ನು ಹಾಕಿದ್ದೇವೆ. ಕೆಲವು ಗಿಡಗಳನ್ನಷ್ಟೇ ಉಳಿಸಿಕೊಂಡಿದ್ದೇವೆ.
– ನಾಗಯ್ಯ ಶೆಟ್ಟಿ, ಚಾರ ಹೆಬ್ರಿ, ಕೃಷಿಕರು