Advertisement

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

07:45 PM Nov 05, 2024 | Team Udayavani |

ಮಂಗಳೂರು: ಪಿಲಿಕುಳ ಮೃಗಾಲಯಕ್ಕೆ ಒಡಿಶಾದಿಂದ ಪ್ರಾಣಿಗಳು ಆಗಮಿಸಿವೆ. ಪ್ರಾಣಿ ವಿನಿಮಯ ಕಾರ್ಯಕ್ರಮದ ಮೂಲಕ ಒಡಿಶಾದ ನಂದನ್‌ ಕಾನನ್‌ ಮೃಗಾಲಯದಿಂದ ಪ್ರಾಣಿಗಳನ್ನು ಪಿಲಿಕುಳಕ್ಕೆ ತರಲಾಗಿದೆ.

Advertisement

ವಿನಿಮಯದಲ್ಲಿ ಪಿಲಿಕುಳದಿಂದ ರವಾನೆ ಆಗುತ್ತಿರುವ ಪ್ರಾಣಿಗಳು ಪಿಲಿಕುಳ ಮೃಗಾಲಯದಲ್ಲೇ ಜನಿಸಿದವುಗಳಾಗಿದೆ.

ಆರು ವರ್ಷದ “ಏಷ್ಯಾಟಿಕ್‌ ಗಂಡು ಸಿಂಹ’, “ತೋಳ’, ಎರಡು “ಘರಿಯಲ್‌ ಮೊಸಳೆ’ ಮತ್ತು ಅಪರೂಪದ ಪಕ್ಷಿಗಳಾದ ಎರಡು “ಸಿಲ್ವರ್‌ ಫೆಸೆಂಟ್‌’ ಎರಡು “ಯೆಲ್ಲೋ ಗೋಲ್ಡನ್‌ ಫೆಸೆಂಟ್‌’ಗಳು ಕೇಂದ್ರ ಮೃಗಾಲಯದ ಒಪ್ಪಿಗೆ ಪಡೆದು ಪಿಲಿಕುಳ ಮೃಗಾಲಯಕ್ಕೆ ತರಲಾಗಿದೆ.

ಪಿಲಿಕುಳದಿಂದ ನಾಲ್ಕು “ಕಾಡು ನಾಯಿ/ ಧೋಲ್‌’, ಅಪರೂಪದ ನಾಲ್ಕು “ರೇಟಿಕುಲೆಟೆಡ್‌ ಹೆಬ್ಟಾವು’, ಎರಡು “ಬ್ರಾಹಿಣಿ ಗಿಡುಗಗಳು’, ಮೂರು “ಏಶಿಯನ ಪಾಮ್‌ ಸಿವೇಟ’, ಎರಡು “ಲಾರ್ಜ್‌ ಇಗರೇಟ್‌ಗಳನ್ನು’ ನಂದನ್‌ ಕಾನನ್‌ ಮೃಗಾಲಯಕ್ಕೆ ನೀಡಲಾಗುವುದು.

ಮೃಗಾಲಯದಲ್ಲಿ ಜತೆಯಿಲ್ಲದ ಪ್ರಾಣಿಗಳಿಗೆ ಜತೆಗಾಗಿ ಮತ್ತು ಶುದ್ಧ ರಕ್ತ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಾಣಿ ವಿನಿಮಯ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಪಿಲಿಕುಳದಲ್ಲಿ ಮೂರು ಸಿಂಹಗಳಿದ್ದು, ಜತೆಗಾರನಾಗಿ ಒಂದು ಗಂಡು ಏಷ್ಯಾಟಿಕ್‌ ಸಿಂಹವನ್ನು ತರಿಸಲಾಗಿದೆ. ಏಷ್ಯಾಟಿಕ್‌ ಗಂಡು ಸಿಂಹಗಳ ಸಂಖ್ಯೆ ಭಾರತದ ಮೃಗಾಲಯಗಳಲ್ಲಿ ಅತೀ ಕಡಿಮೆ ಇರುವುದರಿಂದ ದೂರದ ಒಡಿಶಾದ ನಂದನ್‌ ಕಾನನ್‌ ಮೃಗಾಲಯದಿಂದ ತರಿಸಲಾಗಿದೆ.

Advertisement

ಒಡಿಶಾದ ನಂದನ್‌ ಕಾನನ್‌ ಮೃಗಾಲಯದಿಂದ ಎರಡು ಪಶು ವೈದ್ಯಾಧಿಕಾರಿ ಮತ್ತು ಎಂಟು ಪ್ರಾಣಿ ಪರಿಪಾಲಕರು, ಪ್ರಾಣಿಗಳೊಡನೆ ಅವುಗಳ ಆರೈಕೆ ನೋಡಿಕೊಂಡು ಆಗಮಿಸಿದ್ದರು. ಹೊಸದಾಗಿ ಆಗಮಿಸಿದ ಪ್ರಾಣಿ, ಉರಗ, ಪಕ್ಷಿಗಳನ್ನು ಅಗತ್ಯ ಚುಚ್ಚುಮದ್ದು ಮತ್ತು ಚಿಕಿತ್ಸೆ ನೀಡಿ ಇಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಸುಮಾರು 15 ದಿನಗಳವರೆಗೆ ಆರೈಕೆ ಕೇಂದ್ರದಲ್ಲಿ ಇರಿಸಿ ಆನಂತರ ಸಾರ್ವಜನಿಕ ವೀಕ್ಷಣೆ ಅವಕಾಶ ನೀಡಲಾಗುತ್ತದೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಎಚ್‌. ಜಯಪ್ರಕಾಶ್‌ ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next