Advertisement
ಪೀಕ್ ಅವರ್‌ನಲ್ಲಾದರೂ ರೈಲು ಸಂಚಾರವನ್ನು ನಿಲ್ಲಿಸಿರೈಲು ಈ ಭಾಗದಲ್ಲಿ ಬಹಳ ನಿಧಾನವಾಗಿ ಸಂಚರಿಸುತ್ತದೆ, ಹಾಗಾಗಿ ಯಾವುದೇ ಅಪಾಯವಿರುವುದಿಲ್ಲ, ಅವರು ರೈಲು ಬರುವುದಕ್ಕೆ ಐದು ನಿಮಿಷ ಮೊದಲೇ ಗೇಟ್ ಹಾಕುತ್ತಾರೆ, ರೈಲು ಹೋಗಿ ಮೂರ್‍ನಾಲ್ಕು ನಿಮಿಷದ ಅನಂತರವೇ ಗೇಟ್ ತೆರೆಯುತ್ತಾರೆ, ಇದು ಮುಖ್ಯವಾಗಿ ಸಮಸ್ಯೆಗೆ ಕಾರಣ.
Related Articles
ರೈಲನ್ನು ಗೂಡ್ಸ್‌ಶೆಡ್ ಯಾರ್ಡ್‌ಗೆ ತಂದು ನಿಲ್ಲಿಸುವುದಾದರೆ, ಆ ರೈಲು ಮರುದಿನ ಹೋಗುವುದಾದರೆ ರಾತ್ರಿಯೇ ತರುವುದು ಉತ್ತಮ. ಹಗಲಿನಲ್ಲಿ ಜನಸಂಚಾರ ಹೆಚ್ಚಿರುವಾಗ ತರಬಾರದು, ವಿರಳ ಸಂಚಾರವಿರುವಾಗ ತರಲಿ. ಮಂಗಳೂರು ಸೆಂಟ್ರಲ್‌ನಿಂದ ಬರುವ ರೈಲು ಹಾಗೂ ಯಾರ್ಡ್‌ನಿಂದ ತೆರಳುವ ರೈಲುಗಳು ಹೆಚ್ಚಿನ ವೇಗದಲ್ಲಿ ಸಂಚರಿಸಬಹುದು, ಆಗ ಗೇಟ್ ಬಳಿ ದಟ್ಟಣೆ ಹೆಚ್ಚುವುದಿಲ್ಲ. ಈಗ ರೈಲು ಬರುವುದಕ್ಕೆ ತೀರಾ ನಿಧಾನ ಮಾಡುತ್ತಿರುವುದು ಸಮಸ್ಯೆ ಜಟಿಲಕ್ಕೆ ಕಾರಣ. ಸಾಮಾನ್ಯವಾಗಿ ಪ್ರಯಾಣಿಕರ ರೈಲಿನ 21 ಬೋಗಿಗಳು ಗೇಟ್ ದಾಟಿ ಹೋಗಲು ಬಹಳ ಸಮಯ ತಗಲುತ್ತದೆ. ಇದರ ಒಂದು ತುದಿ ಹೊಗೆ ಬಜಾರ್, ಇನ್ನೊಂದು ಪಾಂಡೇಶ್ವರದಲ್ಲಿರುತ್ತದೆ, ಎರಡೂ ಕಡೆ ಬ್ಲಾಕ್ ಆಗುತ್ತದೆ.
Advertisement
ರೈಲು ದಾಟಿ ಹೋದ ಕೂಡಲೇ ಗೇಟನ್ನೂ ತೆಗೆಯದಿರುವುದು ಮತ್ತೂಂದು ಸಮಸ್ಯೆ. ಇನ್ನು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಜನರೂ ಸ್ವಯಂ ಶಿಸ್ತು ಅನುಸರಿಸಬೇಕು.– ಹನುಮಂತ ಕಾಮತ್, ಡೈಲಿ ರೈಲ್ವೇ ಯೂಸರ್ಸ್ ಕಮಿಟಿ ಸದಸ್ಯರು, ಪಾಲ್ಘಾಟ್ ವಿಭಾಗ ಗೂಡ್ಸ್‌ಶೆಡ್ ಪ್ರದೇಶವನ್ನುತೆರವುಗೊಳಿಸುವುದೇ ಉತ್ತಮ
ಈ ಮೊದಲು ಗೂಡ್ಸ್ ರೈಲುಗಳು ಬಂದರ್‌ನ ಗೂಡ್ಸ್‌ಶೆಡ್ ಪ್ರದೇಶಕ್ಕೆ ಸಂಚರಿಸುತ್ತಿದ್ದಾಗ ಪಾಂಡೇಶ್ವರ ಮತ್ತು ಹೊಗೆ ಬಜಾರ್ ಲೆವೆಲ್ ಕ್ರಾಸಿಂಗ್‌ನಲ್ಲಿ ಗೇಟ್ ಬಂದ್ ಮಾಡಿ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ಹಲವು ಮನವಿಗಳು, ಹೋರಾಟಗಳ ಬಳಿಕ ಗೂಡ್ಸ್ ರೈಲುಗಳನ್ನು ಉಳ್ಳಾಲಕ್ಕೆ ಶಿಫ್ಟ್ ಮಾಡಲಾಯಿತು. ಆದರೆ ಈಗ ಪ್ಯಾಸೆಂಜರ್ ರೈಲುಗಳನ್ನು ಗೂಡ್ಸ್ ಶೆಡ್‌ಗೆ ಕಳುಹಿಸುತ್ತಿರುವುದರಿಂದ ಮತ್ತೆ ಸಮಸ್ಯೆ ಉಂಟಾಗುತ್ತಿದೆ. ಈಬಗ್ಗೆ ಈಗಾಗಲೇ ರೈಲ್ವೇ ಸಚಿವರು, ಸಂಸದರು, ರೈಲ್ವೇ ಇಲಾಖೆಯ ಉನ್ನತ ಅಧಿಕಾರಿಗಳು ಇದ್ದಂತಹ ಸಭೆಯಲ್ಲಿ ವಿಷಯ ಪ್ರಸ್ತಾವಿಸಿ, ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗಿದೆ. ಅಂಡರ್‌ಪಾಸ್- ಓವರ್‌ಪಾಸ್ ನಿರ್ಮಾಣವೂ ಈ ಸಮಸ್ಯೆಗೆ ತತ್‌ಕ್ಷಣದ ಪರಿಹಾರ ಕೊಡುವುದಿಲ್ಲ. ಆದ್ದರಿಂದ ಗೂಡ್ಸ್ ಶೆಡ್ ಅನ್ನೇ ಇಲ್ಲಿಂದ ಸ್ಥಳಾಂತರಿಸಿ, ಜನ ವಸತಿ ಪ್ರದೇಶದಿಂದ ದೂರದಲ್ಲಿ ನಿರ್ಮಾಣ ಮಾಡುವುದು ಉತ್ತಮ. ಆದ್ದರಿಂದ ಈ ನಿಟ್ಟಿನಲ್ಲಿ ಇರುವ ಅವಕಾಶಗಳನ್ನು ಪರಿಶೀಲಿಸಲಾಗುವುದು.
– ಸುಧೀರ್ ಶೆಟ್ಟಿ ಕಣ್ಣೂರು, ಮೇಯರ್ ಸರಕಾರ, ಜಿಲ್ಲಾಡಳಿತ, ಪಾಲಿಕೆಮೂಲಕ ಪರ್ಯಾಯ ಹುಡುಕಾಟ
ರೈಲ್ವೇ ಸಚಿವ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಗಿದೆ. ಪರ್ಯಾಯ ಜಮೀನು ಒದಗಿಸಿದರೆ ಗೂಡ್ಸ್‌ಶೆಡ್ ಸ್ಥಳಾಂತರಕ್ಕೆ ಸಿದ್ಧವಿರುವುದಾಗಿ ರೈಲ್ವೇ ಅಧಿಕಾರಿಗಳು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಆದರೆ ಉಳ್ಳಾಲ, ಮಂಗಳೂರು, ಕಂಕನಾಡಿ ಭಾಗದಲ್ಲಿ ಭಾಗದಲ್ಲಿ ರಾಜ್ಯ ಸರಕಾರಕ್ಕೆ ಸಂಬಂಧಪಟ್ಟು ಅಷ್ಟು ಜಮೀನು ಇಲ್ಲ. ಫರಂಗಿಪೇಟೆಯ ಬಳಿ ಸ್ವಲ್ಪ ಜಮೀನು ಇದೆಯಾದರೂ ಅಲ್ಲಿಂದ ರೈಲುಗಳನ್ನು ವಿವಿಧ ರೂಟ್‌ಗಳಿಗೆ ಬದಲಾವಣೆ ಮಾಡಿ ಓಡಿಸುವುದು ತುಂಬಾ ಕಷ್ಟ. ಪಾಂಡೇಶ್ವರದಲ್ಲಿ ಫ್ಲೈ ಓವರ್ – ಅಂಡರ್‌ಪಾಸ್ ನಿರ್ಮಾಣವೂ ಸುಲಭವಿಲ್ಲ. ಏನು ಮಾಡಬಹುದು ಎಂದು ಸರಕಾರ, ಜಿಲ್ಲಾಡಳಿತ, ಪಾಲಿಕೆ ಸೇರಿ ಯೋಜನೆ ರೂಪಿಸಿಕೊಡಿ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಸಾರ್ವಜನಿಕರ ಬೇಡಿಕೆಯಂತೆ ಗೂಡ್ಸ್ ರೈಲನ್ನು ಆಗಿನ ಸಂಸದ ನಳಿನ್ ಕುಮಾರ್ ಅವರ ಪ್ರಯತ್ನದ ಮೇರೆಗೆ ಉಳ್ಳಾಲಕ್ಕೆ ಸ್ಥಳಾಂತರಿಸಲಾಯಿತು. ಈಗ ಪ್ಯಾಸೆಂಜರ್ ರೈಲಿನಿಂದ ಸಮಸ್ಯೆಯಾಗುತ್ತಿದೆ. ಸಂಸದ ಕ್ಯಾ| ಬ್ರಿಜೇಶ್ ಚೌಟರ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿ, ಸೂಕ್ತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು.
– ಡಿ. ವೇದವ್ಯಾಸ ಕಾಮತ್, ಶಾಸಕರು