Advertisement
ಪುಟ್ಟ ಜಾಗದಲ್ಲಿ ಹಸುರ ಹಾಸಿನ ನಡುವೆ ಇರುವ ಈ ಸ್ಮಾರಕದ ಮೇಲುಸ್ತುವಾರಿಯನ್ನು ಮಾಜಿ ಸೈನಿಕರ ಸಂಘದವರು ಹೊತ್ತಿದ್ದಾರೆ. ಪ್ರತಿ ವರ್ಷವೂ ಕಾರ್ಗಿಲ್ ವಿಜಯ ದಿವಸ್, ವಿಜಯ ದಿವಸ್ ಇತ್ಯಾದಿ ಕಾರ್ಯಕ್ರಮಗಳೂ ಇಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ. ಅವರಿಗೆಲ್ಲ ಅವಕಾಶ ಕೊಡುವ ನಿಟ್ಟಿನಲ್ಲಿ ವಿಸ್ತರಣೆಯೊಂದಿಗೆ ಹೊಸ ರೂಪ ನೀಡಲು ನಿರ್ಧರಿಸಲಾಗಿತ್ತು.
Related Articles
ಪ್ರಸ್ತುತ ಇಲ್ಲಿ ಸ್ಮಾರಕ ಹಾಗೂ ಅದಕ್ಕೆ ಸುತ್ತ ಬೇಲಿ ಬಿಟ್ಟರೆ ಬೇರ್ಯಾವುದೇ ಸವಲತ್ತು ಇಲ್ಲ. ಮೇಲ್ಛಾವಣಿ ಇಲ್ಲದೆ ಮಳೆಗಾಲದಲ್ಲಿ ಕಾರ್ಯಕ್ರಮ ನಡೆಸಲು ಕಷ್ಟವಾಗುತ್ತಿತ್ತು. ಈಗಿನ ಪ್ರಸ್ತಾವನೆ ಪ್ರಕಾರ, ಸ್ಮಾರಕದ ಅಂದ ಹೆಚ್ಚಿಸುವುದರ ಜತೆಗೆ ಸುತ್ತಲೂ ಮೂರು ಸಾಲಿನ ಗ್ಯಾಲರಿ, ಅದಕ್ಕೆ ಮೇಲ್ಚಾವಣಿ, ನೆಲಕ್ಕೆ ನೆಲಹಾಸು ಇಂಟರ್ಲಾಕ್ ಅಳವಡಿಸಲಾಗುವುದು. ಅಲ್ಲದೆ ಪುರುಷರು, ಮಹಿಳೆಯರ ಪ್ರತ್ಯೇಕ ಶೌಚಾಲಯವನ್ನೂ ನಿರ್ಮಿಸಲಾಗುವುದು. ಮಂಗಳೂರು ಮಹಾನಗರ ಪಾಲಿಕೆಯ ನಿಧಿಯಿಂದ 25 ಲಕ್ಷ ರೂ. ಮೀಸಲಿರಿಸಲಾಗಿದೆ.
Advertisement
ಮಾಜಿ ಯೋಧರ ಸ್ಮಾರಕಗಳುಮಾಜಿ ಯೋಧ ಹುತಾತ್ಮರಾಗಿರುವ ಮಂಗಳೂರಿನ ಕ್ಯಾ| ಪ್ರಾಂಜಲ್ ಅವರ ನೆನಪಿನಲ್ಲಿ ಕೊಟ್ಟಾರ ಚೌಕಿಯಲ್ಲಿ ಸ್ಮಾರಕ ನಿರ್ಮಿಸಲು 15 ಲಕ್ಷ ರೂ. ಇರಿಸಲಾಗಿದೆ. ಅಲ್ಲದೆ ದಶಕದ ಹಿಂದೆ ಮೃತಪಟ್ಟ ವಾಯುಸೇನೆ ಯೋಧ ಫ್ಲೈಟ್ ಕೆವಿನ್ ರೊನಾಲ್ಡ್ ಸೆರಾವೊ ಅವರಿಗೆ ಗೌರವಾರ್ಥ ಕುಲಶೇಖರದಲ್ಲಿ ಸ್ಮಾರಕ ನಿರ್ಮಾಣ ಮಾಡುವುದಕ್ಕೆ 15 ಲಕ್ಷ ರೂ. ಮೊತ್ತವನ್ನು ಇಡಲಾಗಿದ್ದು, ಬೇಗನೆ ಕೆಲಸ ಶುರುವಾಗಲಿದೆ. 31 ಲಕ್ಷ ರೂ. ವೆಚ್ಚ
ಕದ್ರಿ ಹಿಲ್ಸ್ ಹುತಾತ್ಮರ ಸ್ಮಾರಕಕ್ಕೆ 2021-22ರ ಸಾಲಿನ ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನವನ್ನು ಶಾಸಕ ವೇದವ್ಯಾಸ ಕಾಮತ್ ಮಂಜೂರುಗೊಳಿಸುವಲ್ಲಿ ಶ್ರಮಿಸಿದ್ದಾರೆ. ಅಲ್ಲದೆ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯನಿಧಿಯಿಂದ 5 ಲಕ್ಷ ರೂ. ಸೇರಿದಂತೆ ಒಟ್ಟು 31 ಲಕ್ಷ ರೂ. ಒದಗಿಸಲಾಗಿದೆ. ಇಂಡೋ-ಪಾಕ್ ಯುದ್ಧ ವಿಜಯ್ ದಿವಸ್ ಆಚರಣೆ
ಮಹಾನಗರ, ಡಿ. 16: ಭಾರತ- ಪಾಕಿಸ್ಥಾನ ನಡುವೆ 1971ರಲ್ಲಿ ನಡೆದ ಇಂಡೋ-ಪಾಕ್ ಯುದ್ಧದಲ್ಲಿ ಭಾರತ ಸಾಧಿಸಿದ ವಿಜಯದ ಸಂಭ್ರಮವನ್ನು ವಿಜಯ್ ದಿವಸ್ ರೂಪದಲ್ಲಿ ಸೋಮವಾರ ಮಂಗಳವಾರ ಆಚರಿಸಲಾಯಿತು. ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಕದ್ರಿ ಹಿಲ್ಸ್ನಲ್ಲಿರುವ ಯೋಧರ ಯುದ್ಧ ಸ್ಮಾರಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಮಾರ್ಗದರ್ಶಕ ಕರ್ನಲ್ ಐ.ಎನ್. ರೈ ಅವರು ಇಂಡೋ-ಪಾಕ್ ಯುದ್ಧದ ದಿನಗಳನ್ನು ನೆನಪಿಸಿಕೊಂಡರು.
-ಸಿ.ಎಲ್. ಆನಂದ್, ಕಮಿಷನರ್, ಮಂಗಳೂರು ಮಹಾನಗರ ಪಾಲಿಕೆ