Advertisement

Mangaluru: ಸರಕಾರಿ ಶಾಲಾ ಶೌಚಾಲಯಗಳಿಗೆ ಹೊಸ ರೂಪ

03:39 PM Oct 21, 2024 | Team Udayavani |

ಮಹಾನಗರ: ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಸರಕಾರ ಅಷ್ಟಾಗಿ ಮುರ್ತುವರ್ಜಿ ತೋರಿಸದಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿಯೇ ಸಂಘ – ಸಂಸ್ಥೆಗಳ ನೆರವಿನಿಂದಲೇ ಬಹುತೇಕ ಕಡೆಗಳಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದೀಗ ಅಂತಹುದೇ ಕಾರ್ಯವೊಂದನ್ನು ಅಖೀಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕೈಗೆತ್ತಿಕೊಂಡಿದೆ.

Advertisement

ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬಡ ಮಕ್ಕಳ ಆರೋಗ್ಯ, ನೈರ್ಮಲ್ಯ ಮತ್ತು ಹಕ್ಕು ಸಂರಕ್ಷಣೆಯ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ‘ಶೌಚಾಲಯ’ಗಳನ್ನು ಸ್ವಯಂಪ್ರೇರಿತ ಶ್ರಮದಾನದ ಮೂಲಕ ಮತ್ತು ದುರಸ್ತಿಗೊಳಿಸಿ ನವೀಕರಿಸಿ ‘ಸ್ವಚ್ಛಾಲಯ’ಗಳನ್ನಾಗಿ ಪರಿವರ್ತಿಸುವ ವಿನೂತನ ಪರಿಕಲ್ಪನೆ ಇದಾಗಿದೆ.

ಮೊದಲು ಮತ್ತು ಅನಂತರ

 

1,000ಕ್ಕೂ ಹೆಚ್ಚು ಸರಕಾರಿ ಶಾಲೆಗಳ ಶೌಚಾಲಯ ಸ್ವತ್ಛತೆ
ಯೋಜನೆಯಂತೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸುಮಾರು 1,000ಕ್ಕೂ ಹೆಚ್ಚಿನ ಸರಕಾರಿ ಶಾಲೆಗಳ ಶೌಚಾಲಯಗಳನ್ನು ‘ಸ್ವಚ್ಛಾಲಯ’ಗಳನ್ನಾಗಿ ಪರಿವರ್ತಿಸುವ ಮೂಲಕ ಬಡಮಕ್ಕಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ನೆರವಾಗುವುದು ಈ ಅಭಿಯಾನದ ಉದ್ದೇಶ.

Advertisement

ಯೋಜನೆಯಡಿ ಶೌಚಾಲಯದ ಕಟ್ಟಡಕ್ಕೆ ಬಣ್ಣ ಬಳಿಯುವುದು, ಛಾವಣಿ, ನೆಲ ದುರಸ್ತಿ, ಕಮೋಡ್‌ಗಳ ಸ್ವತ್ಛತೆ, ನೀರಿನ ವ್ಯವಸ್ಥೆ ಸರಿಪಡಿಸುವುದು ಮೊದಲಾದ ಕೆಲಸಗಳನ್ನು ಕೈಗೊಳ್ಳಲಾಗುವುದು.

ಮೊದಲು

ಅನಂತರ

ಇಂದು ಉದ್ಘಾಟನೆ
ಅಭಿಯಾನದಡಿ ಸ್ವತ್ಛಗೊಳಿಸಿ ಸುಂದರಗೊಳಿಸಲಾದ ಶೌಚಾಲಯಗಳ ಉದ್ಘಾಟನೆ ಕಾರ್ಯಕ್ರಮ ಅ. 21ರಂದು ಆಯಾ ಶಾಲೆಗಳಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ, ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮನಪಾ ಸದಸ್ಯರು, ಶಿಕ್ಷಕರು, ಶಾಲೆಯ ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಸಂಸ್ಥಾಪಕಧ್ಯಕ್ಷ ಅಖೀಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್‌ನ ಪ್ರಮುಖರು ಸಹಿತ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ದ.ಕ. ಜಿಲ್ಲಾಧ್ಯಕ್ಷ ಸಂತೋಷ್‌ ಕೊಲ್ಯ ತಿಳಿಸಿದ್ದಾರೆ.

ಸಮಿತಿ ರಾಜ್ಯಾಧ್ಯಕ್ಷ ದೀಪಕ್‌ ಜಿ. ಬೆಳ್ತಂಗಡಿ ಅವರ ನೇತೃತ್ವದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ. ಮೂರು ಶಾಲಾ ಶೌಚಾಲಯ ಅಭಿವೃದ್ಧಿ ಅಭಿಯಾನದ ಆರಂಭಿಕ ಹಂತ ಈಗಾಗಲೇ ಆರಂಭವಾಗಿದೆ. ದಸರಾ ರಜಾ ಸಂದರ್ಭದಲ್ಲಿ ಮಂಗಳೂರಿನ ಹೊಯ್ಗೆಬಜಾರ್‌ನ ಶ್ರೀ ಜ್ಞಾನೋದಯ ಸರಕಾರಿ ಕಿ.ಪ್ರಾ. ಶಾಲೆ, ವೆಲೆನ್ಸಿಯಾ ಸೂಟರ್‌ಪೇಟೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾವೂರಿನ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯಗಳನ್ನು ಸ್ವತ್ಛ ಸುಂದರಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next