ತೋಟಬೆಂಗ್ರೆ ಹಿಂದೂ ರುದ್ರಭೂಮಿಯ ಬಳಿ ಸುಮಾರು 6 ಎಕ್ರೆ ಮೀನುಗಾರಿಕಾ ಇಲಾಖೆಗೆ ಬಂದರು ಇಲಾಖೆಯಿಂದ ಹಸ್ತಾಂತರವಾಗಿದೆ. ಜೆಟ್ಟಿ ನಿರ್ಮಾಣ ಉದ್ದೇಶಕ್ಕೆ ಇದನ್ನು ನೀಡಲಾಗಿದ್ದು, ಬಾಕಿ ಉಳಿದ ಜಾಗದಲ್ಲಿ ಹಾಗೆಯೇ ಎಷ್ಟೋ ವರ್ಷಗಳಿಂದ ಮರಳು ಇದೆ. ಅದನ್ನು ತೆರವು ಮಾಡುವಂತಿಲ್ಲ.
Advertisement
ಆದರೆ ಮೂರ್‍ನಾಲ್ಕು ತಿಂಗಳ ಹಿಂದಿನಿಂದಲೇ ಇಲ್ಲಿಂದ ಯಾರೋ ಕೆಲವರು ಮರಳು ಒಯ್ಯುತ್ತಿದ್ದಾರೆ. ರಾತ್ರಿ ಜೆಸಿಬಿ ಹಾಗೂ ಟಿಪ್ಪರ್ ಬಳಸಿ ಮರಳು ಕೊಂಡೊಯ್ಯಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮೌಖೀಕವಾಗಿ ದೂರು ಕೊಟ್ಟು ತಕ್ಷಣ ಬರಬೇಕೆಂದರೆ ಕಷ್ಟ, ನಾವು ಬೇರೆ ಕೆಲಸದಲ್ಲಿರುತ್ತೇವೆ, ಆದರೆ ಲಿಖೀತವಾಗಿ ದೂರು ಕೊಟ್ಟರೆ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದು ಎಂದು ಗಣಿ ಇಲಾಖೆ ಹಿರಿಯ ಜಿಯೊಲಜಿಸ್ಟ್ ತಿಳಿಸಿದ್ದಾರೆ.