Advertisement
ನಗರದ 36 ವರ್ಷದ ವ್ಯಕ್ತಿಯೊಬ್ಬರು ಹೇರ್ ಕೇರ್ ಕ್ಲಿನಿಕ್‌ಗೆ 2021ರ ನವೆಂಬರ್‌ನಲ್ಲಿ ಭೇಟಿ ನೀಡಿದ್ದರು. ಈ ವೇಳೆ ತನಗೆ ಸರಿಹೊಂದುವ ಪ್ರೀಮಿಯಂ ಹೇರ್ ವಿಗ್ ಬೇಡಿಕೆ ಇಟ್ಟಿದ್ದಾರೆ. ಅವರ ಮನವಿ ಸ್ಪಂದಿಸಿದ ಸಂಸ್ಥೆಯು ಪ್ರೀಮಿಯಂ ಗುಣಮಟ್ಟದ ವಿಗ್ ನೀಡುವುದಾಗಿ ಭರವಸೆ ನೀಡಿತ್ತು. ಅದಕ್ಕಾಗಿ 3 ಲಕ್ಷ ವೆಚ್ಚವಾಗುವುದಾಗಿ ತಿಳಿಸಿತ್ತು. ಅದರಂತೆ ದೂರುದಾರ ಪಾವತಿ ಮಾಡಿದ್ದಾರೆ. ನಿಗದಿತ ಸಮಯಕ್ಕೆ ನೈಜ ಹೇರ್ ವಿಗ್ ಬದಲಾಗಿ ಸಾಮಾನ್ಯ ದರ್ಜೆ ವಿಗ್ ನೀಡಿದೆ. ಇದರಿಂದ ಬೇಸೆತ್ತ ಗ್ರಾಹಕ ಬೆಂಗಳೂರು ಒಂದನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ಕೋರ್ಟ್‌ಗೆ ದೂರು ನೀಡಿದ್ದರು. ವಾದ ವಿವಾದ ಪರಿಶೀಲನೆ ನಡೆಸಿದ ನ್ಯಾಯಾಲಯವು, 4 ಲಕ್ಷ ರೂ. ಪಾವತಿಸುವಂತೆ ತೀರ್ಪು ನೀಡಿದೆ. Advertisement
Bengaluru: 3 ಲಕ್ಷ ರೂ.ನ ಪ್ರೀಮಿಯಂ ವಿಗ್ ಕೊಡದ ಕ್ಲಿನಿಕ್‌ಗೆ 4 ಲಕ್ಷ ರೂಪಾಯಿ ದಂಡ
11:01 AM Nov 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.