Advertisement
ನಗರದ ಮಾರಿಯನ್ ಇನ್‌ಫ್ರಾಸ್ಟ್ರಕ್ಚರ್ನ ಪಾಲುದಾರರಾಗಿರುವ ಉಜ್ವಲ ಡಿ’ಸೋಜಾ ಮತ್ತು ನವೀನ್ ಕಾರ್ಡೋಝಾ ಹಾಗೂ ಅವರೊಂದಿಗೆ ಡೆವಲಪ್‌ಮೆಂಟ್ ಪಾಲುದಾರರಾಗಿರುವ ವಿಲಿಯಂ ಸಾಲ್ಡಾನಾ, ಗಾಯತ್ರಿ ಮತ್ತು ಲೂಸಿ ಸಲ್ಡಾನಾ ಶಿಕ್ಷೆಗೆ ಒಳಗಾದವರು.
ಈ ಐವರು 2013ರಲ್ಲಿ ಗುಜ್ಜರೆಕೆರೆ ಬಳಿ ಬಹುಮಹಡಿ ಕಟ್ಟಡ ನಿರ್ಮಿಸಿ ಮಾರಾಟ ಮಾಡುತ್ತಿದ್ದರು. ಮಂಗಳೂರಿನ ಡಾ| ಲವೀನಾ ಇದರಲ್ಲಿ ಒಂದು ಫ್ಲಾಟನ್ನು ಕಾರ್ ಪಾರ್ಕಿಂಗ್ ಸೌಲಭ್ಯದ ಸಹಿತ 40 ಲಕ್ಷ ರೂ.ಗೆ ಖರೀದಿಸಲು ಒಪ್ಪಂದ ಮಾಡಿ ಹಣ ನೀಡಿದ್ದರು. ಆದರೆ ಕಾರ್ ಪಾರ್ಕಿಂಗ್ ಸ್ಥಳ ನೀಡಿರಲಿಲ್ಲ. ಈ ಬಗ್ಗೆ ವಿನಂತಿಸಿದಾಗ ನಿರಾಕರಿಸಿದ್ದರು. ಕೊನೆಗೆ ಲವೀನಾ 2014ರಲ್ಲಿ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ 2017ರ ಜೂ.24ರಂದು ಅಂತಿಮ ತೀರ್ಪು ಪ್ರಕಟಿಸಿ, ದೂರುದಾರರಿಗೆ ಕಾರ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದರೊಂದಿಗೆ 50,000 ರೂ. ಪರಿಹಾರ ಹಾಗೂ 10,000 ರೂ.ಪ್ರಕರಣದ ಖರ್ಚನ್ನು ನೀಡುವಂತೆ ಆದೇಶಿಸಿತ್ತು. ಆರೋಪಿಗಳು ಇದನ್ನು ಪ್ರಶ್ನಿಸಿ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಆದರೆ ರಾಜ್ಯ ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿ, ಮಂಗಳೂರು ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು.
ಆದರೂ ಆರೋಪಿಗಳು ದೂರುದಾರರಿಗೆ ಪಾರ್ಕಿಂಗ್ ಸೌಲಭ್ಯ ಕೊಟ್ಟಿರಲಿಲ್ಲ. ಹೀಗಾಗಿ ಲವೀನಾ ಮತ್ತೆ 2022ರಲ್ಲಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಆರೋಪಿಗಳು ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಕಾರಣ ಅವರಿಗೆ ಗ್ರಾಹಕ ರಕ್ಷಣ ಕಾಯ್ದೆ 2019ರ ಅನ್ವಯ ಶಿಕ್ಷ ವಿಧಿಸಬೇಕೆಂದು ವಿನಂತಿಸಿದ್ದರು.