ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy Case) ಷರತ್ತು ಬದ್ಧ ಜಾಮೀನು ಪಡೆದು ನಟ ದರ್ಶನ್ (Darshan) ಬುಧವಾರ (ಅ.30ರಂದು) ಸಂಜೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
131 ದಿನಗಳ ಬಳಿಕ ದರ್ಶನ್ ಜೈಲುವಾಸದಿಂದ 6 ವಾರಗಳಿಗಾಗಿ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ.
ಬಳ್ಳಾರಿ ಸೆಂಟ್ರಲ್ ಜೈಲಿನಿಂದ ಕಾರಿನಲ್ಲಿ ತನ್ನ ಪತ್ನಿ ವಿಜಯಲಕ್ಷ್ಮೀ ಜತೆ ಬೆಂಗಳೂರಿನತ್ತ ದರ್ಶನ್ ಹೊರಟಿದ್ದಾರೆ. ಅವರ ಕಾರಿನ ಹಿಂದೆ ನೂರಾರು ಅಭಿಮಾನಿಗಳು ಬೈಕ್ನಲ್ಲಿ ಮೆರವಣಿಗೆ ರೀತಿಯಲ್ಲಿ ಸಾಗಿದ್ದಾರೆ. ಪರಿಣಾಮ ಕೆಲ ಕಾಲ ಟ್ರಾಫಿಕ್ನಲ್ಲಿ ದರ್ಶನ್ ಕಾರು ಸಿಲುಕಿಕೊಂಡಿದೆ.
ದರ್ಶನ್ ಕಾರನ್ನು ಸುತ್ತು ಹಾಕಿ ಅವರ ಅಪಾರ ಅಭಿಮಾನಿಗಳ ಜೈ ಡಿಬಾಸ್ ಎಂದು ಜೈಕಾರ ಹಾಕಿ ಅಭಿಮಾನ ಮೆರೆದಿದ್ದಾರೆ.
ಬೆಂಗಳೂರಿಗೆ ತೆರಳಿ ಅಲ್ಲಿಂದ ದರ್ಶನ್ ತಮ್ಮ ನಿವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ನಾಳೆ ದರ್ಶನ್ ಪುತ್ರ ವಿನೀಶ್ ಅವರ ಹುಟ್ಟುಹಬ್ಬವಿದೆ. ಹೀಗಾಗಿ ದರ್ಶನ್ ತಮ್ಮ ಪುತ್ರ ಜತೆ ಹುಟ್ಟುಹಬ್ಬವನ್ನು ಆಚರಿಸುವ ಸಾಧ್ಯತೆಯಿದೆ.