Advertisement
ಈಗಾಗಲೇ ಸೇಟ್‌ಬ್ಯಾಂಕ್‌ನಿಂದ – ಗುರುಪುರ ಕೈಕಂಬಕ್ಕೆ ನರ್ಮ್ ಬಸ್ ಗಳು ಓಡಾಟವನ್ನು ನಡೆಸುತ್ತಿವೆ. ಆದರೆ ಈ ಬಸ್ ಅಡ್ಡೂರು, ಪೊಳಲಿ ದೇವಸ್ಥಾನವರೆಗೆ ಬರುವು ದಿಲ್ಲ. ಅಲ್ಲದೆ ಇಲ್ಲಿನಂದ ಮಂಗಳೂರಿಗೂ ನೇರ ಸಂಚರಿಸುವ ಬಸ್ ಗಳ ಕೊರತೆಯೂ ಇದೆ. ಬಿ.ಸಿ.ರೋಡ್ ಪೊಳಲಿಯಿಂದ ಗುರುಪುರ – ಕೈಕಂಬವಾಗಿ ಬಜಪೆ, ಕಟೀಲು, ಕಿನ್ನಿಗೋಳಿಗೆ ಹೆಚ್ಚು ಖಾಸಗಿ ಬಸ್‌ಗಳ ಓಡಾಟವಿದೆ. ಅದಕ್ಕೆ ತುಲನೆ ಮಾಡಿದರೆ ಪೊಳಲಿಯಿಂದ ಮಂಗಳೂರಿಗೆ ಖಾಸಗಿ ಬಸ್‌ಗಳ ಓಡಾಟ ಕಡಿಮೆ.
Related Articles
Advertisement
ಬೆಳಗ್ಗೆ ವಿದ್ಯಾರ್ಥಿಗಳು ಪ್ರಯಾಣಿಸುವ ಸಮಯದಲ್ಲಿ, ಮಧ್ಯಾಹ್ನ ಪೊಳಲಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಸಮಯ ಹಾಗೂ ಸಂಜೆ ವಿದ್ಯಾರ್ಥಿಗಳು ಶಾಲಾ-ಕಾಲೇಜಿನಿಂದ ಮತ್ತು ಕೂಲಿ ಕಾರ್ಮಿಕರು ವಾಪಸಾಗುವ ಸಮಯದಲ್ಲಿ
ನರ್ಮ್ ಬಸ್ ಬೇಕಾಗಿದೆ. ಈ ಸಮಯದಲ್ಲಿಯೇ ಖಾಸಗಿ ಬಸ್‌ಗಳ ಓಡಾಟವೂ ಕಡಿಮೆ ಇದೆ. ವಿಸ್ತರಣೆಗೆ ಬೇಡಿಕೆ
ಈಗಾಗಲೇ ಮಂಗಳೂರಿನಿಂದ ಗುರುಪುರ – ಕೈಕಂಬಕ್ಕೆ ಒಂದು ನರ್ಮ್ ಬಸ್ ಇದ್ದು, ಅದನ್ನು ಪೊಳಲಿ ಕ್ಷೇತ್ರಕ್ಕೆ ವಿಸ್ತರಣೆ ಮಾಡಬೇಕೆಂದು ಇಲ್ಲಿನ ಜನರ ಬೇಡಿಕೆ ಇದೆ. ಮಂಗಳೂರಿನಿಂದ ಉಳಾಯಿಬೆಟ್ಟು – ಪೊಳಲಿಗೆ ನರ್ಮ್ ಬಸ್ ಸಂಚರಿಸುತ್ತದೆ. ಕೆಎಸ್ಸಾರ್ಟಿಸಿ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ
ಮಂಗಳೂರು ಕೆಎಸ್ಸಾರ್ಟಿಸಿ ನಿಲ್ದಾಣದಿಂದ ಗುರುಪುರ -ಕೈಕಂಬದವರೆಗೆ ಈಗಾಗಲೇ ಒಂದು ಕೆಎಸ್ಸಾರ್ಟಿಸಿ ಬಸ್ ಸಂಚರಿಸುತ್ತಿದೆ. ಅದನ್ನು ಪೊಳಲಿ ದ್ವಾರ, ನೂಯಿ, ಅಡೂxರು ಆಗಿ ಪೊಳಲಿ ದೇವಸ್ಥಾನಕ್ಕೆ ಹಾಗೂ ಇದೇ ಮಾರ್ಗದಲ್ಲಿ ಇನ್ನೊಂದು ಹೆಚ್ಚುವರಿ ಬಸ್‌ಗೆ ಬೇಡಿಕೆ ಈ ಪ್ರದೇಶ ಜನರದ್ದಿದೆ. ಈ ಪ್ರದೇಶದ ಪ್ರಯಾಣಿಕರ ಸಮಸ್ಯೆ, ತೊಂದರೆಯನ್ನು ಗಮನಿಸಿದ್ದೇನೆ. ಈ ಮಾರ್ಗವಾಗಿ ಹೆಚ್ಚು ಭಕ್ತರು ಪೊಳಲಿ ದೇಗುಲಕ್ಕೆ ಹೋಗುವ ಕಾರಣ ಹಾಗೂ ನನ್ನ ಕ್ಷೇತ್ರ ವ್ಯಾಪ್ತಿಯ ಪ್ರದೇಶ ಬರುವಕಾರಣ ಈ ಬಗ್ಗೆ ಕೆಎಸ್ಸಾರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಲಾಗುವುದು.
ಡಾ| ಭರತ್ ಶೆಟ್ಟಿ ವೈ., ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ *ಸುಬ್ರಾಯ ನಾಯಕ್ ಎಕ್ಕಾರು