Advertisement

ಮಂಗಳೂರು: ಹಣ ದ್ವಿಗುಣ ಆಮಿಷ, 5.52 ಲಕ್ಷ ರೂ. ಮೋಸ ಹೋದ ವ್ಯಕ್ತಿ

10:47 PM Apr 15, 2023 | Team Udayavani |

ಮಂಗಳೂರು: ಟೆಲಿಗ್ರಾಂ ಮೂಲಕ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ 5,52,800 ರೂ. ಮೋಸ ಮಾಡಿರುವ ಪ್ರಕರಣ ಸೆನ್‌ ಠಾಣೆಯಲ್ಲಿ ದಾಖಲಾಗಿದೆ.

Advertisement

ಜ. 24ರಂದು ಅಪರಿಚಿತ ಮೊಬೈಲ್‌ ನಂಬರ್‌ನಿಂದ ಪಾರ್ಟ್‌ ಟೈಂ ಕೆಲಸದ ಕುರಿತು ಸಂದೇಶ ಬಂದಿದೆ. ಅನಂತರ ಆರೋಪಿಗಳು ಟೆಲಿಗ್ರಾಮ್‌ ಲಿಂಕ್‌ ಕಳುಹಿಸಿ ಪೇಮೆಂಟ್‌ ಕೋಡ್‌ ನಂಬರ್‌ ಕೊಟ್ಟಿದ್ದು, ಅದರಲ್ಲಿ ಹಣ ತೊಡಗಿಸಿ ಆನ್‌ಲೈನ್‌ ಮೂಲಕ ದ್ವಿಗುಣ ಮಾಡಲು ಟಾಸ್ಕ್ ಕಂಪ್ಲೀಟ್‌ ಮಾಡಲು ತಿಳಿಸಿದ್ದಾರೆ. ಪ್ರತೀ ಟಾಸ್ಕ್ ಗೆ 70 ರೂ. ಹಾಕುವುದಾಗಿಯೂ ನಂಬಿಸಿದ್ದಾರೆ. 2-3 ದಿನ ಬಳಿಕ ಆರೋಪಿಗಳು ಇನ್ನೊಂದು ಟಾಸ್ಕ್ನಲ್ಲಿ 2000 ರೂ. ಪಾವತಿಸಿದರೆ ಶೇ. 20 ಲಾಭವಿದೆ ಎಂದು ಆಮಿಷ ಒಡ್ಡಿದ್ದು, ಅದರಂತೆ 2,400 ರೂ. ಖಾತೆಗೆ ವಾಪಸು ಹಾಕಿದ್ದಾರೆ.

ಅನಂತರ ಹಂತ ಹಂತವಾಗಿ 68,000 ರೂ., 86,800 ರೂ., 2,30,000 ರೂ. ಮತ್ತು 1,68,000 ರೂ. ಬ್ಯಾಂಕ್‌ ಮೂಲಕ ವರ್ಗಾಯಿಸಿದ್ದಾರೆ. ಮತ್ತಷ್ಟು ಹಣವನ್ನು ವರ್ಗಾಯಿಸಲು ತಿಳಿಸಿದ್ದು, ಆಗ ಮೋಸ ಹೋಗಿರುವುದು ತಿಳಿದು ಬಂದಿದೆ. ಆರೋಪಿ ಹಂತ ಹಂತವಾಗಿ ಒಟ್ಟು 5,52,800 ರೂ. ಖಾತೆಯಿಂದ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next