Advertisement

ಮಾನಭಂಗ ಮಾಡಿ ಜೀವಬೆದರಿಕೆ: ಮಹಿಳೆಯಿಂದ ಠಾಣೆಗೆ ದೂರು

10:58 PM Feb 26, 2023 | Team Udayavani |

ಮಂಗಳೂರು: ಮಾನಭಂಗ ಮಾಡಿ ಜೀವಬೆದರಿಕೆ ಹಾಕಿದ ಬಗ್ಗೆ ಬಂದರು ಕಂದಕ್‌ನ ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಮಹಿಳೆ ಬಂದರಿನಲ್ಲಿ ಸ್ವ ಉದ್ಯೋಗದ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದು ಅದೇ ಸಂಸ್ಥೆಯಲ್ಲಿ ಬಶೀರ್‌ ಎಂಬಾತ ಕರೆಸ್ಪಾಂಡೆಂಟ್‌ ಕೆಲಸ ನಿರ್ವಹಿಸುತ್ತಿದ್ದ. ಮಹಿಳೆ ತರಬೇತಿ ಬಗ್ಗೆ ಬೇರೆ ಬೇರೆ ಕಡೆಗೆ ಹೋಗುತ್ತಿದ್ದಾಗ ಬಶೀರ್‌ ಸಹಕರಿಸುತ್ತಿದ್ದ. ಇದನ್ನೇ ದುರ್ಬಳಕೆ ಮಾಡಿ ಆಕೆಯ ಖಾತೆಯಿಂದ ಸುಮಾರು 2.10 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದ. ಅದನ್ನು ವಾಪಸ್‌ ನೀಡಿರಲಿಲ್ಲ.

2022ರ ನ.29ರಂದು ಮತ್ತು 2023ರ ಫೆ.16ರಂದು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಮಹಿಳೆಯ ಮನೆಗೆ ಬಂದು ಮಾನಭಂಗ ಮಾಡಿದ್ದಾನೆ. ಅಲ್ಲದೆ ಅದನ್ನು ಮನೆಯವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next