Advertisement
ಈಗಾಗಲೇ ಒಂದು ಹಂತದಲ್ಲಿ ಬೂತ್ ಮಟ್ಟದ ಪ್ರಚಾರ ಕಾರ್ಯ ಮುಗಿದಿದೆ. ಎಲ್ಲ ಮೋರ್ಚಾ ಸಭೆಗಳು ಪೂರ್ತಿಯಾಗಿವೆ. ವಿಜಯ ಸಂಕಲ್ಪ ಯಾತ್ರೆಯೂ ಆಗಿದೆ. ಬೂತ್ ಪ್ರಮುಖ್, ಪೇಜ್ ಪ್ರಮುಖ್ ವ್ಯವಸ್ಥೆಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳು, ರಾಷ್ಟ್ರೀಯ ವಿಚಾರಧಾರೆ ಮತ್ತು ಪಕ್ಷ ಸಂಘಟನೆಯ ಆಧಾರದಲ್ಲಿ ಈ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ರಾಜ್ಯದ ಪರಿಶಿಷ್ಟ ಸಮುದಾಯದ 3 ದಶಕಗಳ ಮೀಸಲಾತಿ ಬೇಡಿಕೆ ಈಡೇರಿಸುವುದರೊಂದಿಗೆ ಬಸವರಾಜ ಬೊಮ್ಮಾಯಿ ಸರಕಾರ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ಈ ಹಿಂದಿನ ಎಲ್ಲ ಸರಕಾರಗಳು ಮೀಸಲಾತಿ ಭರವಸೆ ನೀಡಿದ್ದರೂ ಈಡೇರಿಸಿಲ್ಲ. ಈಗ ಬಿಜೆಪಿ ಸರಕಾರ ಕೈಗೊಂಡಿರುವ ನಿರ್ಧಾರವನ್ನು ರಾಜ್ಯದ ಜನತೆ ಸ್ವಾಗತಿಸಿದ್ದಾರೆ ಎಂದರು. ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಏರಿಕೆ ಮಾಡಿದ್ದರೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಏರಿಸಿ ನಿರ್ಣಯ ಕೈಗೊಳ್ಳಲಾಗಿದೆ. ಪರಿಶಿಷ್ಟ ಸಮುದಾಯದೊಳಗೆ ಬಲ ಪಂಗಡಕ್ಕೆ ಶೇ. 5.5 ಒಳ ಮೀಸಲಾತಿ ನೀಡಿದ್ದರೆ, ಎಡ ಪಂಗಡಕ್ಕೆ ಶೇ. 6, ಲಂಬಾಣಿ-ಬೋವಿ ಸಮುದಾಯಕ್ಕೆ ಶೇ. 4.5, ಅಲೆಮಾರಿ ಅರೆ ಅಲೆಮಾರಿ ಸಮುದಾಯಕ್ಕೆ ಶೇ. 1 ಒಳ ಮೀಸಲಾತಿ ಕಲ್ಪಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Related Articles
Advertisement
ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ಜಗದೀಶ ಶೇಣವ ಇದ್ದರು.
ಟಿಕೆಟ್ ವರಿಷ್ಠರ ತೀರ್ಮಾನಮೂಡುಬಿದಿರೆ ಕ್ಷೇತ್ರದಲ್ಲಿ ತನ್ನ ಸ್ಪರ್ಧಾಕಾಂಕ್ಷೆಯ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸುದರ್ಶನ್ ಮೂಡುಬಿದಿರೆ, ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಅಭ್ಯರ್ಥಿಗಳ ಬದಲಾವಣೆ ಸೇರಿದಂತೆ ಎಲ್ಲ ತೀರ್ಮಾನಗಳನ್ನು ವರಿಷ್ಠ ನಾಯಕರು ಕೈಗೊಳ್ಳಲಿದ್ದಾರೆ ಎಂದರು.