Advertisement
ಕಾಣಿಯೂರು- ಕಾಂಞಂಗಾಡ್ರೈಲುಮಾರ್ಗಕಾಣಿಯೂರು- ಕಾಂಞಂಗಾಡ್ ನಡುವೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸರ್ವೇ ಮುಕ್ತಾಯವಾಗಿದೆ. ಅಂದಾಜು ಪಟ್ಟಿ ಕಾರ್ಯ ಪ್ರಗತಿಯಲ್ಲಿದೆ. ಬಳಿಕ ರೈಲ್ವೇ ಯೋಜನಾ ಮಂಡಳಿಗೆ ವರದಿ ಸಲ್ಲಿಸಲಾಗುವುದು ಎಂದು ನೈಋತ್ಯ ರೈಲ್ವೇ ಮೈಸೂರು ವಿಭಾಗದ ವಿಭಾಗೀಯ ಪ್ರಬಂಧಕ ಎ.ಕೆ. ಸಿನ್ಹಾ ತಿಳಿಸಿದರು.
ಪುತ್ತೂರು ಎಪಿಎಂಸಿ ರೋಡ್, ಅಡ್ಯಾರ್‌ನಲ್ಲಿ ರೈಲ್ವೇ ಅಂಡರ್‌ಪಾಸ್ ಹಾಗೂ ಫರಂಗಿಪೇಟೆ ಹಾಗೂ ಪುತ್ತೂರು ವಿವೇಕಾನಂದ ಕಾಲೇಜು ರೋಡ್‌ನಲ್ಲಿ ರೈಲ್ವೇ ಓವರ್ ಬ್ರಿಡ್ಜ್ ಬಗ್ಗೆ ತತ್‌ಕ್ಷಣ ಸಮೀಕ್ಷೆ ನಡೆಸಿ ಪೂರಕ ಪ್ರಕ್ರಿಯೆಗೆ ಮತ್ತು ಬಂಟ್ವಾಳ, ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತವಾಗಿ ನಡೆಸಲು ನಳಿನ್ ಸೂಚಿಸಿದರು. ತಿರುಪತಿಗೆ ರೈಲು
ಮಂಗಳೂರಿನಿಂದ ಹಾಸನ -ಬೆಂಗಳೂರು ಮಾರ್ಗವಾಗಿ ತಿರುಪತಿಗೆ ವಾರಕ್ಕೆ ಎರಡು ಬಾರಿಯಾದರೂ ರೈಲು ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಸುಬ್ರಹ್ಮಣ್ಯ ನಿಲ್ದಾಣವನ್ನು ಪ್ರವಾಸಿ ರೈಲು ನಿಲ್ದಾಣವಾಗಿ ಅಭಿವೃದ್ಧಿ ಪಡಿಸಬೇಕು ಹಾಗೂ ಸಂಜೆಯ ಪುತ್ತೂರು ರೈಲನ್ನು ಸುಬ್ರಹ್ಮಣದವರೆಗೆ ವಿಸ್ತರಿಸಿ ಮರುದಿನ ಬೆಳಗ್ಗೆ ಹಿಂದಿರುಗಲು ಕ್ರಮ ಕೈಗೊಳ್ಳಬೇಕು ಎಂದು ಸುದರ್ಶನ್ ಪುತ್ತೂರು ಆಗ್ರಹಿಸಿದರು. ಫರಂಗಿಪೇಟೆ, ಬಂಟ್ವಾಳ ಸೇರಿದಂತೆ ಬಹಳಷ್ಟು ಕಡೆ ರೈಲು ಜಾಗ ಒತ್ತುವರಿಯಾಗಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಲಕ್ಷಿನಾರಾಯಣ ಒತ್ತಾಯಿಸಿದರು. ರೈಲ್ವೇ ಇಲಾಖೆಗೆ ಸೇರಿದ ಜಾಗ ಅತಿಕ್ರಮಣ ತೆರವಿಗೆ ಜಿಲ್ಲಾಧಿಕಾರಿ ನೆರವು ಪಡೆದು ಕ್ರಮ ಕೈಗೊಳ್ಳಲಾಗುವುದು. ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗ ದಲ್ಲಿ ಕೊಂಕಣ ರೈಲ್ವೇ ಮಾದರಿ ಸೈಡ್‌ಕಾಚಿಂಗ್ ನಿರ್ಮಾಣಕ್ಕೆ 200 ಕೋ.ರೂ.ಪ್ರಸ್ತಾವನೆ ರೈಲ್ವೇ ಮಂಡಳಿಗೆ ಸಲ್ಲಿಸಲಾಗಿತ್ತು. ಆದರೆ ಇದಕ್ಕೆ ಅನುಮೋದನೆ ಸಿಕ್ಕಿಲ್ಲ ಎಂದರು. ಶಾಸಕರಾದ ಡಾ| ಭರತ್ ಶೆಟ್ಟಿ, ಸಂಜೀವ ಮಠಂದೂರು, ರಾಜೇಶ್ ನಾೖಕ್ ಉಳಿಪಾಡಿ ಉಪಸ್ಥಿತರಿದ್ದರು.