ಮಂಗಳೂರು: ಭಾರತಕ್ಕೆ 21ನೇ ಶತಮಾನದಲ್ಲಿ ಉಜ್ವಲ ಅವಕಾಶವಿದ್ದು, ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶವಾಗಿ ಮೂಡಿಬರಲಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ ಯುವಜನರು ನಾಗರಿಕ ಸೇವೆ, ರಕ್ಷಣಾ ಕ್ಷೇತ್ರ ಸಹಿತ ಉದ್ಯಮ ಮತ್ತಿತರ ರಂಗ ಗಳಲ್ಲಿ ಕ್ರೀಯಾಶೀಲವಾಗಿ ಸಮಾಜ ಹಾಗೂ ಈದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್‌ನ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಹೇಳಿದರು.
ಮಂಗಳೂರು ವಿ.ವಿ. ಸಮೀಪದಲ್ಲಿ ರುವ ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ನಡೆದ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಬಿಐಟಿ) 11ನೇ ಹಾಗು ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್‌ನ (ಬೀಡ್ಸ್) ನಾಲ್ಕನೇ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾರೀಸ್ ಸಮೂಹ ವೈದ್ಯಕೀಯ ವಿಜ್ಞಾನ ಸಹಿತ ವಿಜ್ಞಾನದ ಆಧುನಿಕ ಕ್ಷೇತ್ರಗಳಲ್ಲಿ ಶಿಕ್ಷಣ ನೀಡುವ ಯೋಜನೆ ಯಿದೆ. ಮುಂದೆ ಬ್ಯಾರೀಸ್ ಗ್ಲೋಬಲ್ ಯುನಿವರ್ಸಿಟಿ ಫಾರ್ ಸೊಸೈಟಲ್ ಹ್ಯಾಪಿನೆಸ್ ಸ್ಥಾಪಿಸುವುದು ನಮ್ಮ ಗುರಿ ಎಂದರು.
ಮಾನವ ಸಂಪನ್ಮೂಲ ತಜ್ಞ ಹಾಗು ಲೀಡರ್‌ಶಿಪ್ ಕೋಚ್ ಡಾ| ಸಂಪತ್ ಜೆ.ಎಂ. ದಿಕ್ಸೂಚಿ ಭಾಷಣ ಮಾಡಿದರು. ಕಣ್ಣೂರು ಹಾಗೂ ಕ್ಯಾಲಿಕಟ್ ವಿವಿಗಳ ಮಾಜಿ ಉಪಕುಲಪತಿ ಪ್ರೊ| ಅಬ್ದುಲ್ ರಹ್ಮಾನ್, ಮಂಗಳೂರು ವಿ.ವಿ. ಕುಲಪತಿ ಡಾ| ಜಯರಾಜ್ ಅಮೀನ್, ಬೆಂಗಳೂರಿನ ಆರ್ಕಿಟೆಕ್ಚರ್ ಪ್ಯಾರಾ ಡೈಮ್‌ನ ಸ್ಥಾಪಕ ಪಾಲುದಾರ ಸಂದೀಪ್ ಜಗದೀಶ್ ಹಾಗೂ ಆಟಂ 360 ಸಹ ಸ್ಥಾಪಕಿ ಹಾಗೂ ಬಿಐಟಿ ಹಳೆ ವಿದ್ಯಾರ್ಥಿನಿ ರಿಜ್ಮಾ ಬಾನು ನೂತನ ಪದವೀಧರರನ್ನು ಉದ್ದೇಶಿಸಿ ಮಾತನಾಡಿದರು.
ಸಮ್ಮಾನ
ಮಾಸ್ಟರ್ ಶೆಫ್ ಇಂಡಿಯಾ ಪ್ರಶಸ್ತಿ ಗೆದ್ದ ಪ್ರಥಮ ದಕ್ಷಿಣ ಭಾರತೀಯ ಮಂಗಳೂರಿನ ಮೊಹಮ್ಮದ್ ಆಶಿಕ್ ಅವರನ್ನು ಸಮ್ಮಾನಿಸಲಾಯಿತು. ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಎಮರ್ಜಿನ್ಸ್ ಸಯನ್ಸಸ್‌ನ ಪ್ರಾಂಶು ಪಾಲ ಡಾ| ಅಝೀಝ್ ಮುಸ್ತಫಾ ಪದವೀಧರರಿಗೆ ಪ್ರತಿಜ್ಞೆ ಬೋಧಿಸಿದರು. ಸಾಧಕ ಹಳೆ ವಿದ್ಯಾರ್ಥಿಗಳನ್ನು ಪಿಎಚ್‌ಡಿ ಪದವಿ ಪಡೆದವರನ್ನು ಗೌರವಿಸಲಾಯಿತು.
ಬಿಐಟಿ ಪ್ರಾಂಶುಪಾಲ ಡಾ| ಎಸ್.ಐ ಮಂಜೂರ್ ಬಾಷಾ ಸ್ವಾಗತಿಸಿ, ಬೀಡ್ಸ್ ಪ್ರಾಂಶುಪಾಲ ಖಲೀಲ್ ಶೇಖ್ ವಂದಿಸಿದರು.