Advertisement
ಪಟಾಕಿಗಳು ಸೂಕ್ಷ್ಮವಾಗಿರುವ ಕಾರಣದಿಂದಾಗಿ ಬೇಕಾಬಿಟ್ಟಿ ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡಲು ಅವಕಾಶವಿಲ್ಲ. ಈ ಕಾರಣದಿಂದಾಗಿ ನಗರ ವ್ಯಾಪ್ತಿಯಲ್ಲಿ ಪಾಲಿಕೆ ಗೊತ್ತು ಮಾಡಿದ ಸ್ಥಳಗಳಲ್ಲೇ ವ್ಯಾಪಾರ ನಡೆಸುವಂತೆ ನಿರ್ದೇಶಿಸಿದೆ. ಈ ಪೈಕಿ ನೆಹರೂ ಮೈದಾನದಲ್ಲಿ ಅತ್ಯಧಿಕ ಸ್ಟಾಲ್‌ಗಳಿಗೆ ಅವಕಾಶ ಕಲ್ಪಿಸಲು ಪಾಲಿಕೆ ಮುಂದಾಗಿದೆ. ದೀಪಾವಳಿ ಹಾಗೂ ತುಳಸಿ ಪೂಜೆಯ ಸಂದರ್ಭದಲ್ಲಿ ತಾತ್ಕಾಲಿಕ ಚಿಲ್ಲರೆ ಪಟಾಕಿ ಮಾರಾಟಕ್ಕೆ ಗುರುತಿಸಲಾಗಿರುವ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅನುಮತಿ ಸಿಗಲಿದೆ.
ಪಾಲಿಕೆಯ ಮೊದಲ ವಲಯದಲ್ಲಿ ಕೃಷ್ಣಪುರ ಪ್ಯಾರಡೈಸ್ ಮೈದಾನ, ಎ.ಪಿ.ಎಂ.ಸಿ. ಕಟ್ಟಡದ ಮುಂಭಾಗದ ತೆರೆದ ಜಾಗ, ಆದರ್ಶ ಯುವಕ ಮಂಡಲ ಮಹಿಳಾ ಸಮಿತಿ ಗಣೇಶಪುರ ಕೈಕಂಬಗಳಲ್ಲಿ ಒಟ್ಟು 15 ಸ್ಟಾಲ್‌ಗಳಿವೆ. ಎರಡನೇ ವಲಯದಲ್ಲಿ 8 ಸ್ಥಳಗಳಿದ್ದು 89 ಸ್ಟಾಲ್‌ಗಳಿಗೆ ಅನುಮತಿ ನೀಡಲು ಪಾಲಿಕೆ ಮುಂದಾಗಿದೆ. ಕದ್ರಿ ಕ್ರಿಕೆಟ್ ಮೈದಾನ, ಪದವು ಹೈಸ್ಕೂಲ್ ಮೈದಾನ, ಬೊಂದೇಲ್ ಕ್ರಿಕೆಟ್ ಮೈದಾನ, ಪಚ್ಚನಾಡಿ ಮೈದಾನ, ನೆಹರು ಮೈದಾನ, ಅತ್ತಾವರ ನಾಯಕ ಮೈದಾನ, ಎಮ್ಮೆಕೆರೆ ಮೈದಾನ, ಉರ್ವ ಕ್ರಿಕೆಟ್ ಮೈದಾನ ಸೇರಿದೆ. ವಲಯ ಮೂರರಲ್ಲಿ ಪಂಪ್‌ವೆಲ್ ಬಸ್ ನಿಲ್ದಾಣಕ್ಕೆ ನಿಗದಿ ಪಡಿಸಿದ ಜಾಗ ಹಾಗೂ ಶಕ್ತಿನಗರ ಮೈದಾನ ಆಯ್ಕೆ ಮಾಡಲಾಗಿದ್ದು 10 ಮಂದಿಗೆ ವ್ಯಾಪಾರಕ್ಕೆ ಅವಕಾಶ ಸಿಗಲಿದೆ.
Related Articles
ಮನಸ್ಸಿಗೆ ಮುದ ನೀಡುವ ಹಿನ್ನೆಲೆ ಪಟಾಕಿ ಸಿಡಿಸಲು ಮಕ್ಕಳು ಯುವಕರು ಮುಂದಾಗುತ್ತಾರೆ. ಆದರೆ, ಪಟಾಕಿ ಸಿಡಿಸುವ ವೇಳೆ ಎಚ್ಚರ ಅಗತ್ಯ.ಹಿಂದೆ ಅನೇಕ ಅನಾಹುತಗಳು ಸಂಭವಿಸಿರುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಪಟಾಕಿ ಸಿಡಿಸುವ ವೇಳೆ ಮಕ್ಕಳನ್ನು ದೂರ ನಿಲ್ಲಿಸುವುದನ್ನು ಮರೆಯಬಾರದು. ಕೈಯಲ್ಲಿ ಹಿಡಿದುಕೊಂಡು ಪಟಾಕಿ ಸಿಡಿಸಬಾರದು. ಅಸ್ತಮಾ, ಆಲರ್ಜಿ ಸಹಿ ತ ಅನಾರೋಗ್ಯ ಇರುವವರು ಪಟಾಕಿಯಿಂದ ದೂರವಿರಬೇಕು. ವಾಹನಗಳನ್ನು ದೂರವಿಟ್ಟು ಪಟಾಕಿ ಸಿಡಿ ಸುವುದು ಉತ್ತಮ. ಮಕ್ಕಳು ಹಿರಿಯರಿರುವ ವೇಳೆ ಕಡಿಮೆ ಶಬ್ಧದ ಪಟಾಕಿ ಬಳಸುವುದರಿಂದ ಆರೋಗ್ಯ ಹಾಗೂ ಪರಿಸರಕ್ಕೂ ಪೂಕರವಾಗಿರಲಿದೆ.
Advertisement
-ಸಂತೋಷ್ ಮೊಂತೇರೊ