ಮಂಗಳೂರು: ಸರಕಾರಿ ವೆನ್ಲಾಕ್ ಆಸ್ಪತ್ರೆಗೆ 176 ಹಾಸಿಗೆ ಸಾಮರ್ಥ್ಯದ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಅದಕ್ಕಾಗಿ ನಬಾರ್ಡ್‌ನಿಂದ 10.06 ಕೋ. ರೂ.ಅನುದಾನ ಬಿಡುಗಡೆಗೊಂಡಿದೆ.
ಶನಿವಾರ ವೆನ್ಲಾಕ್ ಆಸ್ಪತ್ರೆಯ ಆರ್‌ಎಪಿಸಿಸಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿಯ ಮಹಾಸಭೆಯಲ್ಲಿ ಈ ವಿಚಾರ ತಿಳಿಸಲಾಯಿತು. ಒಟ್ಟು 15.16 ಕೋ. ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದ್ದು, ಆರೋಗ್ಯ ರಕ್ಷಾ ಸಮಿತಿಯ ಕ್ಲಿನಿಕಲ್ ಶುಲ್ಕ 5.10 ಕೋ. ರೂ.ನಿಂದ ಈಗಾಗಲೇ ನೆಲಮಾಳಿಗೆಯ ಕಾಮ
ಗಾರಿ ಪೂರ್ಣಗೊಂಡಿದೆ. ನಬಾರ್ಡ್‌ನ ಅನುದಾನದಿಂದ ಉಳಿದ ಕಾಮಗಾರಿ ನಡೆಯಲಿದೆ.
ಆಸ್ಪತ್ರೆಯ ದುರಸ್ತಿ ಕಾರ್ಯವನ್ನು ಕೆಎಂಸಿ ಆಸ್ಪತ್ರೆಯವರು ನಿರ್ವಹಿಸುವುದಾಗಿ ತಿಳಿಸಿರುವುದರಿಂದ ಅದಕ್ಕಾಗಿ ಬಿಡುಗಡೆಗೊಂಡ ಮೊತ್ತದಲ್ಲಿ 10 ಹಾಸಿಗೆಗಳ ಜೀರಿಯಾಟ್ರಿಕ್ ವಾರ್ಡ್, 10 ಹಾಸಿಗೆಗಳ ಕೈದಿ ಸೆಲ್, 50 ಹಾಸಿಗೆಗಳ ಮಾನಸಿಕ ರೋಗಿಗಳ ವಾರ್ಡ್ ಹಾಗೂ ಐಸೋಲೇಶನ್ ವಾರ್ಡ್ ನಿರ್ಮಿಸಲು ಅಂದಾಜು ಪಟ್ಟಿ ತಯಾರಿಸಲು ಕೆಎಚ್‌ಎಸ್‌ಡಿಆರ್‌ಪಿ ಅವರಿಗೆ ತಿಳಿಸಲಾಗಿದೆ ಎಂದು ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ| ರಾಜೇಶ್ವರಿ ದೇವಿ ಸಭೆಗೆ ತಿಳಿಸಿದರು.
ಆಸ್ಪತ್ರೆಯಲ್ಲಿ ರೋಗಿಗಳ ಮರಣ ಪ್ರಮಾಣ ಹೆಚ್ಚಳವಾಗುವ ಕುರಿತು ವಿವರ ಕೇಳಿದಾಗ, ರೋಗಿಗಳನ್ನು ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ದಾಖಲಿಸುತ್ತಾರೆ. ಆ ಸಂದರ್ಭ ಅವರ ಸ್ಥಿತಿ ಶೋಚನೀಯವಾಗಿರುತ್ತದೆ ಎಂದು ಶಸ್ತ್ರಚಿಕಿತ್ಸಕಿ ಉತ್ತರಿಸಿದರು. ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿ’ಸೋಜಾ, ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್, ಜಿ.ಪಂ. ಸಿಇಒ ಡಾ| ಎಂ.ಆರ್. ರವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್, ಮನಪಾ ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್ ಮೊದ ಲಾದವರು ಉಪಸ್ಥಿತರಿದ್ದರು.