Advertisement

ದ.ಕ.-ಉಡುಪಿ: ಪ್ರತೀ ರವಿವಾರ ಪೆಟ್ರೋಲ್‌ ಬಂಕ್‌ ಬಂದ್‌ ಇಲ್ಲ

12:23 PM Apr 14, 2017 | Team Udayavani |

ಮಂಗಳೂರು: ವಿವಿಧಕಾರಣ ಮುಂದಿಟ್ಟು ಮೇ 10ರ ಅನಂತರ ಪ್ರತೀ ರವಿವಾರ ಪೆಟ್ರೋಲ್‌ ಬಂಕ್‌ ಬಂದ್‌ ಮಾಡುವ ಕುರಿತು ಪೆಟ್ರೋಲ್‌ ಬಂಕ್‌ ಮಾಲಕರ ಸಂಘದ ನಿರ್ಧಾರಕ್ಕೆ ಕರ್ನಾಟಕ ಪೆಟ್ರೋ ಲಿಯಂ ವಿತರಕರ ಮಹಾಮಂಡಳ ಬೆಂಬಲ ವ್ಯಕ್ತಪಡಿಸಿಲ್ಲ. 

Advertisement

ಹೀಗಾಗಿ ಮೇ 10ರ ಬಳಿಕ ರವಿವಾರವೂ ರಾಜ್ಯದಬಹುತೇಕ ಪೆಟ್ರೋಲ್‌ ಪಂಪ್‌ಗ್ಳು ವಹಿವಾಟು ನಡೆಸಲಿವೆ. ಕಮಿಶನ್‌ ಹೆಚ್ಚಳಕ್ಕೆ ಆಗ್ರಹ, ಅಧಿಕಾರಿಗಳ ಕಿರುಕುಳಕ್ಕೆ ತಡೆ ಹಾಗೂ ಹೊಸ ಬಂಕ್‌ಗಳಿಗೆ ಲೈಸೆನ್ಸ್‌ ನೀಡದಂತೆ ಆಗ್ರಹಿಸಿ ಪ್ರತೀ ರವಿವಾರ ವಹಿವಾಟು ನಡೆಸದಿರಲು ಹರಿಯಾಣದಲ್ಲಿ ನಡೆದ ಪೆಟ್ರೋಲ್‌ ಬಂಕ್‌ ಮಾಲಕರ ಸಂಘ ನಿರ್ಧರಿಸಿತ್ತು. 

ಈ ಕುರಿತು ಪ್ರತಿಕ್ರಿಯಿಸಿದ, ಕರ್ನಾಟಕ ಪೆಟ್ರೋಲಿಯಂ ವಿತರಕರ ಮಹಾ ಮಂಡಳ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿ ವಿಶ್ವಾಸ್‌ ಶೆಣೈ, ರವಿವಾರ ಬಂದ್‌ ನಡೆಸುವುದು ನ್ಯಾಯ ಸಮ್ಮತವಲ್ಲ, ಖಾಸಗಿ ಪೆಟ್ರೋಲ್‌ ಕಂಪೆನಿಗಳು ವ್ಯವಹಾರ ನಡೆಸಿ, ನಾವು ಬಂದ್‌ ಮಾಡಿದರೆ ಯಾವುದೇ ಪ್ರಯೋ ಜನವಿಲ್ಲ. ಕಮಿಶನ್‌ ಹೆಚ್ಚಳ ಆಗಬೇಕು ಸೇರಿದಂತೆ ನಮ್ಮ ಎಲ್ಲ ಬೇಡಿಕೆಗಳಿಗೆ ಸರಕಾರ ಗಮನಹರಿಸಬೇಕಿದೆ. ಅದಕ್ಕಾಗಿ ರವಿವಾರ ಬಂಕ್‌ ಬಂದ್‌ ಮಾಡುವುದು ಪರಿಹಾರವಲ್ಲ ಎಂದರು.

ಕರ್ನಾಟಕದ 24 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪೆಟ್ರೋಲಿಯಂ ವಿತರಕರ ಮಹಾಮಂಡಳದ ಅಡಿ ಜಿಲ್ಲಾ ಸಂಘಟನೆಗಳು ಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next