Advertisement
ಈ ಹಿಂದೆ ಒಬ್ಬೊಬ್ಬ ಎಂಜಿನಿಯರ್‌ಗಳಿಗೂ ಸುಮಾರು 10 ವಾರ್ಡ್‌ಗಳ ಜವಾ ಬ್ದಾರಿ ಇರುತ್ತಿತ್ತು. ಇದೀಗ ಹೊಸಬರ ನಿಯೋಜನೆಯಿಂದಾಗಿ ಪ್ರತಿಯೋರ್ವ ಎಂಜಿನಿಯರ್‌ಗೆ 3ರಿಂದ 4 ವಾರ್ಡ್‌ಗಳ ಜವಾಬ್ದಾರಿ ಮಾತ್ರ ದೊರೆಯಲಿದೆ. ಇದು ತ್ವರಿತ, ಸಮರ್ಪಕ ಕಾಮಗಾರಿ ಅನುಷ್ಠಾನಕ್ಕೆ ಪೂರಕವಾಗಲಿದೆ.
ಪಾಲಿಕೆಯ ಒಟ್ಟು 60 ಕಾರ್ಪೊರೇಟರ್‌ಗಳ ಪೈಕಿ 40 ಮಂದಿ ಕಾರ್ಪೊರೇಟರ್‌ಗಳು ಮೊದಲ ಬಾರಿಗೆ ಆಯ್ಕೆ ಯಾದವರು. ಬಿಜೆಪಿಯ ಒಟ್ಟು 44 ಮಂದಿ ಕಾರ್ಪೊರೇಟರ್‌ಗಳಲ್ಲಿ 34 ಮಂದಿ, ಕಾಂಗ್ರೆಸ್‌ನ 14 ಕಾರ್ಪೊರೇಟರ್‌ಗಳ ಪೈಕಿ 4 ಮಂದಿ, ಎಸ್‌ಡಿಪಿಐನ ಇಬ್ಬರೂ ಕೂಡ ಹೊಸಬರು. ಅಂದರೆ ಪಾಲಿಕೆಯಲ್ಲಿ ಈಗ ಶೇ.66ರಷ್ಟು ಮಂದಿ ಹೊಸ ಕಾರ್ಪೊರೇಟರ್‌ಗಳು. ಎಂಜಿನಿಯರಿಂಗ್ ವಿಭಾಗದಲ್ಲಿರುವ ಒಟ್ಟು ಎಂಜಿನಿಯರ್‌ಗಳ ಪೈಕಿ ಸುಮಾರು ಶೇ. 60ಕ್ಕೂ ಅಧಿಕ ಮಂದಿ ಯುವ ಎಂಜಿನಿಯರ್‌ಗಳಿದ್ದಾರೆ. ಈ ಹೊಸ ಎಂಜಿನಿಯರ್‌ಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ.
ಸರಕಾರವು ಪಾಲಿಕೆಗೆ ಅಗತ್ಯವಾಗಿದ್ದ ಎಂಜಿನಿಯರ್‌ಗಳನ್ನು ಒದಗಿಸಿ ಕೊಟ್ಟಿದೆ. ಇದರಿಂದ ವಿವಿಧ ಕಾಮಗಾರಿಗಳು ಸಮರ್ಪಕಾಗಿ, ತ್ವರಿತವಾಗಿ ಪೂರ್ಣಗೊಳ್ಳಲು ಅನುಕೂಲವಾಗಲಿದೆ. ಹಿಂದೆ ಒಬ್ಬೊ ಬ್ಬರು ಎಂಜಿನಿಯರ್‌ಗಳಿಗೆ 10 ವಾರ್ಡ್‌ಗಳ ಜವಾಬ್ದಾರಿ ಬರುತ್ತಿತ್ತು. ಈಗ ಹೊಸ ಎಂಜಿನಿಯರ್‌ಗಳ ನಿಯೋಜನೆಯಿಂದಾಗಿ ಒಬ್ಬೊಬ್ಬರಿಗೆ 3ರಿಂದ 5 ವಾರ್ಡ್‌ಗಳ ಜವಾಬ್ದಾರಿ ದೊರೆಯಲಿದೆ.
-ದಿವಾಕರ ಪಾಂಡೇಶ್ವರ, ಮೇಯರ್, ಮಹಾನಗರ ಪಾಲಿಕೆ