ಮಹಾನಗರ: ಮಂಗಳೂರು ನಗರದಲ್ಲಿ ವಾಯು ಗುಣಮಟ್ಟ ಹೇಗಿದೆ, ಸಿಟಿ ಬಸ್ ಯಾವ ಪ್ರದೇಶಕ್ಕೆ ಎಷ್ಟು ಗಂಟೆಗೆ ಬರುತ್ತದೆ, ಸಮರ್ಪಕ ತ್ಯಾಜ್ಯ ವಿಲೇವಾರಿ ಆಗದಿದ್ದರೆ ನೇರ ಅಧಿಕಾರಿಗಳಿಗೇ ದೂರು. ಮುಂತಾದ ಸೇವೆಯನ್ನಿನ್ನು ಸಾರ್ವಜನಿಕರು ತಮ್ಮ ಮೊಬೈಲ್ ಮುಖೇನ ಬೆರಳ ತುದಿಯಲ್ಲೇ ಪಡೆಯಬಹುದು.
ಸ್ಮಾರ್ಟ್‌ಸಿಟಿಯಾಗಿ ಅಭಿವೃದ್ಧಿ ಹೊಂದು ತ್ತಿರುವ ಮಂಗಳೂರಿನ ಕೇಂದ್ರೀಕೃತ ವಾಗಿಯೇ ಸ್ಮಾರ್ಟ್‌ಸಿಟಿಯಿಂದ ‘ಒನ್ ಟಚ್ ಮಂಗಳೂರು’ ಎಂಬ ಪ್ರತ್ಯೇಕ ಆ್ಯಪ್ ಅಭಿವೃದ್ಧಿಯಾಗಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆಗೆ ತಯಾರಾಗಿದೆ. ಸಾರ್ವಜನಿಕರಿಗೆ ಆಡಳಿತದ ವಿವಿಧ ಸೇವೆಗಳನ್ನು ಒಳಗೊಂಡ ಯಾವುದೇ ಆ್ಯಪ್‌ಗಳು ಸದ್ಯ ನಗರದಲ್ಲಿ ಇಲ್ಲ. ಹಾಗಾಗಿ ಸ್ಮಾರ್ಟ್ ಸಿಟಿ ಅಭಿವೃದ್ಧಿಪಡಿಸಿರುವ ಆ್ಯಪ್‌ನಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಪಾನ್‌ಸಿಟಿ ಸೌಲಭ್ಯಗಳು ಈ ಆ್ಯಪ್ ನಲ್ಲಿ ದೊರೆಯಲಿದ್ದು, ಪ್ರವಾಸಿಗರಿಗೆ ಅನಕೂಲ ವಾಗುವಂತೆ ಮಂಗಳೂ ರಿನ ಪ್ರೇಕ್ಷಣೀಯ ಸ್ಥಳ ಗಳು, ಪ್ರವಾಸಿ ತಾಣಗಳು, ಯಾವ ರೀತಿ ತಲುಪುವುದು ಎಂಬ ಮಾಹಿತಿ ಇದರಲ್ಲಿ ಇರಲಿದೆ. ಅಪಾಯದಲ್ಲಿದ್ದರೆ ಯಾರನ್ನು ಸಂಪರ್ಕ ಮಾಡಬೇಕು, ಕಟ್ಟಡ ಪರವಾನಿಗೆ, ವಿವಿಧ ಸೌಲಭ್ಯಗಳ ಮಾಹಿತಿ, ನಗರದಲ್ಲಿರುವ ಪಾರ್ಕಿಂಗ್ ಸ್ಥಳಗಳು, ಪಾಸ್‌ಪೋರ್ಟ್ ಪರಿಶೀಲನೆ, ಡ್ರೈವಿಂಗ್ ಲೈಸೆನ್ಸ್ ವಿವರ, ಪ್ರಮುಖ ರಸ್ತೆಗಳ ಮಾಹಿತಿ, ನೀರಿನ ಸೌಲಭ್ಯದ ಮಾಹಿತಿ, ಉದ್ದಿಮೆ ಮಾಹಿತಿ, ಪಡಿತರ ವಿವರ, ಮಹಿಳಾ ವಾಣಿ, ಆದಾಯ ವಿವರಗಳು, ಮತದಾರರ ಗುರುತಿನ ಚೀಟಿ, ನಗರ ಪ್ರದಕ್ಷಿಣಿ, ಆರ್‌ಟಿಒ ದಂಡಗಳು, ಕಾಣೆಯಾದವರ ಮಾಹಿತಿ, ಸಾರ್ವಜನಿಕ ಅಹವಾಲು, ವಿಚಾರಣೆ, ದಂಡ ಕಟ್ಟುವ ವಿಧಾನಗಳು, ಉದ್ಯೋಗ ವಿವರ ಗಳು, ಜನ್ಮದಿನಾಂಕ ಸರ್ಟಿಫಿಕೇಟ್, ಆಸ್ಪತ್ರೆ, ಆರೋಗ್ಯ ವಿವರಗಳು ಒಳಗೊಂಡಂತೆ ಆ್ಯಪ್ ಅಭಿವೃದ್ಧಿಯಾಗಿದೆ. ಪಾಲಿಕೆಯ 60 ವಾರ್ಡ್ ಗಳಲ್ಲಿಯೂ ಇದು ಕಾರ್ಯಾಚರಿಸುವಂತೆ ಮಾಡಬೇಕು ಎನ್ನುವುದು ಸ್ಮಾರ್ಟ್‌ಸಿಟಿ ಆಶಯ. ಆ್ಯಪ್ ಬಿಡುಗಡೆಗೊಂಡ ಬಳಿಕ ಪ್ಲೇಸ್ಟೋರ್‌ನಲ್ಲಿ ಲಭಿಸಲಿದೆ.
ಆ್ಯಪ್‌ನಲ್ಲಿ ವಾಯು ಗುಣಮಟ್ಟ ಮಾಹಿತಿ
ಮಂಗಳೂರಿನಲ್ಲಿ ವಾಯುಗುಣಮಟ್ಟ ಹೇಗಿದೆ ಎಂಬ ಮಾಹಿತಿ ಆ್ಯಪ್‌ನಲ್ಲಿಯೇ ದೊರಕುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದಲ್ಲಿ ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ಕಚೇರಿ ಕಟ್ಟಡ, ಹಂಪನಕಟ್ಟೆಯಲ್ಲಿರುವ ಪುರಭವನ, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಬೋಳಾರ ಬಿಇಒ ಕಚೇರಿ ಮತ್ತು ಬಂದರ್‌ನ ಕ್ರೆಸೆಂಟ್ ಶಾಲೆಯಲ್ಲಿ ಈಗಾಗಲೇ ಮಾಪನ ಅಳವಡಿಸಲಾಗಿದೆ. ಸ್ಮಾರ್ಟ್‌ಸಿಟಿ ಕಟ್ಟಡದಲ್ಲಿರುವ ಇಂಟಿಗ್ರೇಟೆಡ್ ಕಂಟ್ರೋಲ್ ರೂಂಗೆ ವಾಯು ಗುಣಮಟ್ಟ ಮಾಹಿತಿ ರವಾನೆಯಾಗುತ್ತಿದೆ. ಆ್ಯಪ್ ಬಿಡುಗಡೆಗೊಂಡ ಬಳಿಕ ಈ ಮಾಹಿತಿ ಆ್ಯಪ್‌ನಲ್ಲಿಯೂ ಸಿಗಲಿದೆ.
ಬೀಟಾ ವರ್ಷನ್ ಪರಿಶೀಲನೆ
ಸ್ಮಾರ್ಟ್‌ಸಿಟಿಯಿಂದ ಒನ್ ಟಚ್ ಮಂಗಳೂರು ಆ್ಯಪ್ ಸಿದ್ಧವಾಗಿದ್ದು, ಸದ್ಯ ಆ್ಯಪ್ ಬೀಟಾ ವರ್ಷನ್‌ನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಕೊನೆಯ ಹಂತದ ಟೆಸ್ಟಿಂಗ್ ನಡೆಯು ತ್ತಿದ್ದು, ಇನ್ನೇನು ಕೆಲವು ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ. ಆಂಡ್ರಾಯ್ಡ ಮೊಬೈಲ್ ಕೇಂದ್ರೀಕರಿಸಿ ಆ್ಯಪ್ ಸಿದ್ಧಪಡಿಸಲಾಗಿದ್ದು, ಪ್ಲೇಸ್ಟೋರ್‌ನಲ್ಲಿ ಲಭ್ಯವಾಗಲಿದೆ.
-ಅರುಣ್ ಪ್ರಭ, ಸ್ಮಾರ್ಟ್‌ಸಿಟಿ ಜನರಲ್, ಮ್ಯಾನೇಜರ್