Advertisement

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

11:53 PM Jan 06, 2025 | Team Udayavani |

ಮಂಗಳೂರು: ನಗರ ದಲ್ಲಿ ರಾಜ್ಯದ ಮೊದಲ ಸಿ ಬ್ಯಾಂಡ್‌ ಹವಾಮಾನ ರಾಡಾರ್‌(ಡಿಡಬ್ಲ್ಯು ಆರ್‌) ಅಳವಡಿಕೆ ಕಾರ್ಯ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.

Advertisement

ಪ್ರಸ್ತುತ ರಾಜ್ಯದಲ್ಲಿ ಯಾವುದೇ ಡಾಪ್ಲರ್‌ ರಾಡಾರ್‌ ಇರುವುದಿಲ್ಲ, ಹಾಗಾಗಿ ನಿಖರ ಹವಾಮಾನ ಮುನ್ಸೂ ಚನೆ ನೀಡಲು ಗೋವಾ, ಹೈದರಾ ಬಾದ್‌, ಚೆನ್ನೈಯ ರಾಡಾರ್‌ಗಳನ್ನು ಕರ್ನಾಟಕ ಅವಲಂಬಿಸಿಕೊಂಡಿದೆ. ಡಾಪ್ಲರ್‌ ರಾಡಾರ್‌ಗಳು ಖಚಿತವಾಗಿ ಹಾಗೂ ನಿಖರವಾಗಿ ಹವಾಮಾನ ಮುನ್ಸೂಚನೆ ನೀಡುವುದರಲ್ಲಿ ಮುಂಚೂಣಿಯಲ್ಲಿವೆ. ಕಡಲ್ಕೊರೆತಕ್ಕೆ ಸಂಬಂಧಿಸಿದ ಮಾಹಿತಿಯೂ ಇದರ ಮೂಲಕ ದೊರೆಯಲಿದೆ.

ಮಂಗಳೂರಿನ ಶಕ್ತಿ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಈ ರಾಡಾರ್‌ 250ರಿಂದ 300 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಈ ಮೂಲಕ ಗರಿಷ್ಠ ಮಳೆಯಾಗುವ ಆಗುಂಬೆ, ಹುಲಿಕಲ್‌, ತಲಕಾವೇರಿ, ಕೆರೆಕಟ್ಟೆ, ಭಾಗಮಂಡಲದಂತಹ ಪ್ರದೇಶಗಳು ಈ ರಾಡಾರ್‌ನ ವ್ಯಾಪ್ತಿಗೆ ಬರಲಿವೆ.

ಬೆಂಗಳೂರಿನಲ್ಲಿ ಮೊದಲ ಕೇಂದ್ರ ಸ್ಥಾಪನೆಗೆ ಚಿಂತಿಸಲಾಗಿತ್ತು. ಆದರೆ ಅಲ್ಲಿ ಸೂಕ್ತ ಸ್ಥಳಾವಕಾಶದ ಕೊರತೆಯಿಂದ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮೊದಲು ಸ್ಥಾಪಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಈಗ ಸ್ಥಳ ಬಹುತೇಕ ಅಂತಿಮವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮಾರ್ಚ್‌ಗೆ ಸಿದ್ಧ?
ಡಾಪ್ಲರ್‌ ರಾಡಾರ್‌ ಸ್ಥಾಪನೆ ಕೆಲಸ ಮಂಗಳೂರಿನ ಶಕ್ತಿನಗರದಲ್ಲಿ ಅಂತಿಮ ಹಂತದಲ್ಲಿದೆ. ಅದಕ್ಕೆ ಪೂರಕ ವಾದ ವಿದ್ಯುತ್‌ ಪೂರೈಕೆ ಜನರೇಟರ್‌ ಇತ್ಯಾದಿ ಕೆಲಸಗಳು ಬಾಕಿ ಇದ್ದು, ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ಗೆ ಕಾರ್ಯಾರಂಭಿಸುವ ನಿರೀಕ್ಷೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next