Advertisement
ಹೊಸ ಪಾಲಿಕೆ ಪರಿಷತ್ ಅಧಿಕಾರಕ್ಕೆ ಬಂದು ಎ. 28ಕ್ಕೆ 2 ತಿಂಗಳು ಆಗುತ್ತಿದ್ದು, ನಗರದಲ್ಲಿ ಮಹತ್ವದ ಯೋಜನೆಗಳಿಗೆ ಇದೀಗ ಸಾಕ್ಷಿಯಾಗಬೇಕಿತ್ತು. ಹೊಸದಾಗಿ ಆಯ್ಕೆಯಾದ ಕಾರ್ಪೊರೇಟರ್‌ಗಳು ಹುರುಪಿನಿಂದ ಕೆಲಸ ಮಾಡುವ ಸಂದರ್ಭದಲ್ಲಿ ಎದುರಾದ ಕೋವಿಡ್-19 ಅವರಿಗೆ ತಲೆನೋವು ತಂದಿದೆ. ಕಾರ್ಪೊರೇಟರ್‌ಗಳು ತಮ್ಮ ವಾರ್ಡ್‌ನಲ್ಲಿ ಲಾಕ್‌ಡೌನ್‌ನಿಂದ ಸಮಸ್ಯೆಗೊಳಗಾದ ಕುಟುಂಬಗಳಿಗೆ ನೆರವಾಗುವುದರಲ್ಲಿ ವ್ಯಸ್ತರಾಗಿದ್ದಾರೆ.
2018ರ ಮಾ. 8ರಂದು ಮಂಗಳೂರು ಪಾಲಿಕೆಯ ಕಾಂಗ್ರೆಸ್ ಆಡಳಿತದಲ್ಲಿ 31ನೇ ಮೇಯರ್ ಆಗಿ ಭಾಸ್ಕರ್ ಎಂ., ಉಪಮೇಯರ್ ಆಗಿ ಮಹಮ್ಮದ್ ಕುಂಜತ್ತಬೈಲ್ ಆಯ್ಕೆಯಾಗಿದ್ದರು. ಅವರ ಅಧಿಕಾರಾವಧಿ 2019ರ ಮಾ. 8ರ ವರೆಗೆ ಇತ್ತು. ಆ ವೇಳೆಗೆ ಪಾಲಿಕೆ ಚುನಾವಣೆ ನಡೆಯ ಬೇಕಿತ್ತಾದರೂ ವಾರ್ಡ್ ಮೀಸಲಾತಿ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಾದ ಕಾರಣದಿಂದ ಚುನಾ ವಣೆ ತಡವಾಯಿತು. ಹೀಗಾಗಿ ಆಡಳಿತಾಧಿಕಾರಿಗಳ ನೇಮಕ ವಾಗಿತ್ತು. ಕೊನೆಗೆ ನ. 12ರಂದು ಮಂಗಳೂರು ಪಾಲಿಕೆಯ ಚುನಾವಣೆ ನಡೆದು, ನ. 13ರಂದು ಫಲಿತಾಂಶ ಪ್ರಕಟಗೊಂಡಿತ್ತು. ಬಿಜೆಪಿ 44, ಕಾಂಗ್ರೆಸ್ 14, ಎಸ್‌ಡಿಪಿಐ 2 ಸ್ಥಾನ ಪಡೆದಿತ್ತು. ಆದರೆ ಈ ವೇಳೆ ಮೇಯರ್-ಉಪಮೇಯರ್ ಮೀಸಲಾತಿ ವಿಚಾರದಲ್ಲಿ ಗೊಂದಲ ಉಂಟಾಗಿ ಮೂರು ತಿಂಗಳುಗಳ ಅನಂತರ (ಫೆ. 28) ಮೇಯರ್-ಉಪಮೇಯರ್ ಆಯ್ಕೆ ನಡೆದಿತ್ತು. ಬಳಿಕ ಸ್ಥಾಯೀ ಸಮಿತಿಗಳಿಗೆ ಸದಸ್ಯರ ಆಯ್ಕೆ, ನೂತನ ಸದಸ್ಯರ ಪ್ರಮಾಣ ವಚನ ನಡೆಯಿತು. ಮುಂದಿನ ತಿಂಗಳು (ಮಾರ್ಚ್) ಪಾಲಿಕೆ ಪರಿಷತ್ ಸಭೆ ನಡೆಯಬೇಕಿತ್ತು. ಜನಪ್ರತಿನಿಧಿಗಳ ಆಡಳಿತ ಆರಂಭವಾದ ಬಳಿಕ ನಡೆಯಬೇಕಾದ ಮೊದಲ ಸಾಮಾನ್ಯ ಸಭೆ ಇದಾಗಿತ್ತು. ಆದರೆ ಕೋವಿಡ್-19 ಕಾರಣದಿಂದ ಈ ಸಭೆಗೂ ವಿಘ್ನ ಎದುರಾಯಿತು. ಈ ತಿಂಗಳು ಕೂಡ ಸಭೆ ಅನುಮಾನವಾಗಿದೆ.
Related Articles
ಮಂಗಳೂರು ಮಹಾನಗರ ಪಾಲಿಕೆಯ ಈ ವರ್ಷದ ಬಜೆಟ್ ಅನ್ನು ಜಿಲ್ಲಾಧಿಕಾರಿ ಮಂಡಿಸಿದ್ದಾರೆ. ಪಾಲಿಕೆಯಲ್ಲಿ ಆಡಳಿತಾತ್ಮಕವಾಗಿ ಕಾರ್ಯನಿರ್ವಹಣೆಗೆ ಯಾವುದೇ ಸಮಸ್ಯೆ ಇಲ್ಲ. ಲಾಕ್‌ಡೌನ್ ಜಾರಿಯಲ್ಲಿರುವ ಕಾರಣದಿಂದ ಪಾಲಿಕೆ ಪರಿಷತ್ ಸಭೆ ನಡೆಸುವಂತಿಲ್ಲ. ಮಳೆಗಾಲ ಎದುರಿಸಲು ಹಾಗೂ ಡೆಂಗ್ಯೂ, ಮಲೇರಿಯ ವಿರುದ್ಧ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ.
- ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆಯುಕ್ತರು, ಮನಪಾ
Advertisement
ಮಳೆ, ಡೆಂಗ್ಯೂ, ಮಲೇರಿಯಾ ಆತಂಕ!ಸದ್ಯ ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲ ಜನಪ್ರತಿನಿಧಿಗಳು ಈ ಕುರಿತ ಕೆಲಸಗಳಲ್ಲಿಯೇ ಇದ್ದಾರೆ. ಮಂಗಳೂರಿನಲ್ಲಿ ಪ್ರತೀ ಮಳೆಗಾಲದ ವರ್ಷದ ಸಮಸ್ಯೆಗಳಾಗಿರುವ ಡೆಂಗ್ಯೂ, ಮಲೇರಿಯಾ ಇತ್ಯಾದಿಗಳ ನಿರ್ವಹಣೆ ಬಗ್ಗೆ ಹೆಚ್ಚಿನ ಒತ್ತು ನೀಡಿದಂತಿಲ್ಲ. ಜನಪ್ರತಿನಿಧಿಗಳು-ಅಧಿಕಾರಿಗಳ ಸಭೆ ನಡೆದಿದೆಯಾದರೂ ಯಾರೂ ಕೂಡ ಈ ಬಗ್ಗೆ ಗಂಭೀರವಾಗಿ ಕಾರ್ಯಯೋಜನೆ ರೂಪಿಸಿದಂತಿಲ್ಲ. ಒಂದು ವೇಳೆ ಈ ವಿಚಾರದಲ್ಲಿ ನಿರ್ಲಕ್ಷé ತೋರಿದರೆ ಮುಂದೆ ಭಾರೀ ಬೆಲೆ ತೆರಬೇಕಾಗಬಹುದಾದ ಅಪಾಯವೂ ಇದೆ.