Advertisement
ಈ ವರೆಗೆ ಸೆಂಟ್ರಲ್ ನಿಲ್ದಾಣದಲ್ಲಿ 18 ಬೋಗಿಗಳು ನಿಲ್ಲುವ ಪಿಟ್‌ಲೈನ್ ಇತ್ತು. ಹೊಸದಾಗಿ 4 ಮತ್ತು 5ನೇ ಪ್ಲಾಟ್‌ಫಾರಂ ನಿರ್ಮಿಸಲು ಹಾಲಿ ಇರುವ ಪಿಟ್‌ಲೈನನ್ನು ಸ್ಥಳಾಂತರಿಸುವ ಅನಿವಾರ್ಯತೆ ಇದ್ದು, ಈ ಹಿನ್ನೆಲೆಯಲ್ಲಿ 24 ಬೋಗಿಗಳು ನಿಲ್ಲುವ ಸಾಮರ್ಥ್ಯವುಳ್ಳ ಹೊಸ ಪಿಟ್‌ಲೆçನನ್ನು 6.76 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಎರಡೂ ಬದಿಗಳಲ್ಲಿರುವ ಕ್ಯಾಟ್‌ವಾಕ್‌ಗಳು ಪಿಟ್‌ಲೆçನ್‌ನಲ್ಲಿ ಬೋಗಿಗಳ ನಿರ್ವಹಣೆ ಮತ್ತು ಸ್ವಚ್ಛತೆ ಕಾರ್ಯ ಸುಲಭ ವಾಗಿ ನಡೆಯಲು ಸಹಾಯ ಮಾಡುತ್ತವೆ. ಪಿಟ್‌ಲೈನ್ ನಲ್ಲಿ ಬೋಗಿಗಳ ಪ್ರಾಥಮಿಕ ನಿರ್ವಹಣೆ ಮಾಡಲಾಗುತ್ತದೆ. ಪ್ರತೀ ಸಂಚಾರದ ಬಳಿಕ ಬೋಗಿಗಳ ಗೇರ್, ಬ್ರೇಕ್ ತಪಾಸಣೆ, ವಿದ್ಯುತ್ ವ್ಯವಸ್ಥೆ, ನೀರು ತುಂಬಿಸುವುದು, ಬೋಗಿ ಸ್ವತ್ಛತೆ ಮತ್ತಿತರ ನಿರ್ವಹಣೆ ಕೆಲಸಗಳನ್ನು ನಡೆಸಲಾಗುತ್ತದೆ. ಪಿಟ್‌ಲೈನ್ ಬಳಿಕ ನೂತನ ಪ್ಲಾಟ್‌ಫಾರಂ
ಸೆಂಟ್ರಲ್ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ಕೊರತೆ ಇದ್ದು ಇದು ಹೊಸ ರೈಲುಗಳ ಆರಂಭಕ್ಕೆ ಅಡ್ಡಿಯಾಗಿದೆ. ಹೆಚ್ಚುವರಿಯಾಗಿ 4 ಮತ್ತು 5ನೇ ಪ್ಲಾಟ್‌ಫಾರಂ ನಿರ್ಮಾಣಕ್ಕೆ ಯೋಜಿಸಲಾಗಿದೆ. ಹೊಸ ಪ್ಲಾಟ್‌ಫಾರಂ ಕಾಮಗಾರಿ ಕೈಗೆತ್ತಿಗೊಳ್ಳಲು ಪ್ರಸ್ತುತ ಇರುವ ಪಿಟ್‌ಲೆçನನ್ನು ಸ್ಥಳಾಂತರಿಸುವುದು ಅಗತ್ಯವಾಗಿತ್ತು. ಸ್ಥಳಾಂತರಗೊಂಡ ಕೂಡಲೇ ಹೊಸ ಪ್ಲಾಟ್‌ಫಾರಂ ಕಾಮಗಾರಿ ಪ್ರಾರಂಭವಾಗಲಿದೆ.
Related Articles
– ಎಂ.ಕೆ. ಗೋಪಿನಾಥ್,
ಪಿಆರ್‌ಒ, ರೈಲ್ವೇ ಪಾಲಕ್ಕಾಡ್ ವಿಭಾಗ
Advertisement