Advertisement

ಮೂರು ವರ್ಷಗಳ ಹಿಂದೆಯೇ ಬ್ಲ್ಯಾಕ್ ಫಂಗಸ್ ಬಗ್ಗೆ ಎಚ್ಚರಿಸಿದ್ದೆ: ಮನೇಕಾ ಗಾಂಧಿ

06:03 PM Jun 12, 2021 | Nagendra Trasi |

ನವದೆಹಲಿ: ಮೂರು ವರ್ಷಗಳ ಹಿಂದೆಯೇ ಬ್ಲ್ಯಾಕ್ ಫಂಗಸ್ ರೋಗದ ಬಗ್ಗೆ ಎಚ್ಚರಿಸಿದ್ದೆ ಎಂದು ಬಿಜೆಪಿ ಹಿರಿಯ ನಾಯಕಿ, ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಶನಿವಾರ(ಜೂನ್ 12) ತಿಳಿಸಿದ್ದಾರೆ.

Advertisement

ಕೋವಿಡ್ 19 ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ನಡುವೆಯೇ ಮನೇಕಾ ಗಾಂಧಿ ಈ ಹೇಳಿಕೆ ನೀಡಿದ್ದಾರೆ.

ಮನೇಕಾ ಗಾಂಧಿ ತಮ್ಮ ಲೋಕಸಭಾ ಕ್ಷೇತ್ರವಾದ ಸುಲ್ತಾನ್ ಪುರಕ್ಕೆ ನಾಲ್ಕು ದಿನಗಳ ಪ್ರವಾಸ ಹೊರಟ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮನೇಕಾ ಗಾಂಧಿ ಅವರು ಜಿಲ್ಲಾ ಆಸ್ಪತ್ರೆ ಪರಿಶೀಲನೆ ನಡೆಸಲು ತೆರಳಿರುವುದಾಗಿ ವರದಿ ಹೇಳಿದೆ.

ಆಸ್ಪತ್ರೆ ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಗಾಂಧಿ, ಸುಲ್ತಾನ್ ಪುರದಲ್ಲಿ ಈವರೆಗೂ ಬ್ಲ್ಯಾಕ್ ಫಂಗಸ್ ಪತ್ತೆಯಾಗಿಲ್ಲ, ಆದರೆ ಇದು ತುಂಬಾ ಮಾರಣಾಂತಿಕ ಸೋಂಕು. ಅಲ್ಲದೇ ಈ ಸೋಂಕು ಭಾರತಕ್ಕೂ ಬರಲಿದೆ ಎಂದು ಮೂರು ವರ್ಷಗಳ ಹಿಂದೆಯೇ ಎಚ್ಚರಿಸಿರುವುದಾಗಿ ಮನೇಕಾ ಗಾಂಧಿ ಈ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next