Advertisement

ಮಂಡ್ಯ: ಶೇ.85.96ರಷ್ಟು ಶಾಂತಿಯುತ ಮತದಾನ

08:30 PM Dec 22, 2020 | Mithun PG |

ಮಂಡ್ಯ: ಜಿಲ್ಲೆಯಲ್ಲಿ ಮೊದಲ ಹಂತದ ಮತದಾನ ಬಿರುಸಿನಿಂದ ನಡೆದಿದ್ದು, ಸಂಜೆ 5 ಗಂಟೆ ವೇಳೆಗೆ ಮೂರು ತಾಲೂಕುಗಳಲ್ಲಿ ಶೇ.85.96ರಷ್ಟು ಶಾಂತಿಯುತ ಮತದಾನ ನಡೆದಿದೆ.

Advertisement

ಮೊದಲ ಹಂತದಲ್ಲಿ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳ 126 ಗ್ರಾಮ ಪಂಚಾಯಿತಿಗಳ 2011 ಸ್ಥಾನಗಳಿಗೆ 4010 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಿದ್ದು, ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ.

ಮೂರು ಗ್ರಾ.ಪಂ ಪೈಕಿ ಮದ್ದೂರಿನ ಒಂದು ಗ್ರಾಮ ಪಂಚಾಯಿತಿ ಹೊರತುಪಡಿಸಿ ಉಳಿದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ 921 ಮತಕೇಂದ್ರಗಳಲ್ಲಿ ಮಂಗಳವಾರ ಬಿರುಸಿನ ಮತದಾನ ನಡೆಯಿತು. ಮತದಾರರು ಚಳಿ, ಬಿಸಿಲು ಎನ್ನದೆ ಮತಕೇಂದ್ರಗಳಿಗೆ ಆಗಮಿಸಿ ಹಕ್ಕು ಚಲಾಯಿಸಿದರು.

ಶೇ.85.96ರಷ್ಟು ಮತದಾನ:

ಬೆಳಿಗ್ಗೆ 7 ಗಂಟೆಯಿoದಲೇ ಮತಕೇಂದ್ರಗಳಿಗೆ ಆಗಮಿಸಿದ ಮತದಾರರು ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ಬೆಳಿಗ್ಗೆ 9 ಗಂಟೆಗೆ ಶೇ.8.9ರಷ್ಟು ಮತದಾನ ನಡೆದಿತ್ತು. ಬೆಳಿಗ್ಗೆ 11ಕ್ಕೆ ಶೇ.25.16ರಷ್ಟು ಹಾಗೂ ಮಧ್ಯಾಹ್ನ 48.25ರಷ್ಟು ಮತದಾನ ನಡೆದಿತ್ತು. ಮಧ್ಯಾಹ್ನ 3ಕ್ಕೆ ಶೇ.68.88ರಷ್ಟು, ಹಾಗೂ ಸಂಜೆ 5ಕ್ಕೆ ಶೇ.85.96ರಷ್ಟು ಮತದಾನ ನಡೆದಿದೆ.

Advertisement

ಇದನ್ನೂ ಓದಿ:  ಕೋವಿಡ್ ಹೊಸ ಪ್ರಭೇದದ ಭೀತಿ: ಬ್ರಿಟನ್ ನಿಂದ ಜಮಖಂಡಿಗೆ ಬಂದ ಮಹಿಳೆಯ ಆರೋಗ್ಯ ತಪಾಸಣೆ

5.19 ಲಕ್ಷ ಮತದಾರರಿಂದ ಹಕ್ಕು ಚಲಾವಣೆ:

ಮೂರು ತಾಲೂಕುಗಳ 6,04,413 ಮತದಾರರಿದ್ದು, ಇವರ ಪೈಕಿ 5,19,621 ಮತದಾರರು ಹಕ್ಕು ಚಲಾಯಿಸಿದರು. ಪುರುಷರು 3,01,638 ಮತದಾರರ ಪೈಕಿ 2,61,628 ಹಾಗೂ 3,02,848 ಮಹಿಳಾ ಮತದಾರರ ಪೈಕಿ 2,58,093 ಮಂದಿ ಮತ ಚಲಾಯಿಸಿದ್ದಾರೆ. ಮಂಡ್ಯ 1,08,976 ಪುರುಷರ ಪೈಕಿ 94,608 ಮತದಾರರು ಹಾಗೂ 1,10,701 ಮಹಿಳಾ ಮತದಾರರ ಪೈಕಿ 94,838 ಮಂದಿ ಮತ ಚಲಾಯಿಸಿದರು.

ಅದರಂತೆ ಮದ್ದೂರು ತಾಲೂಕಿನ 94,214 ಮತದಾರರ ಪೈಕಿ 86,227 ಮಂದಿ, 1,00,168 ಮಹಿಳಾ ಮತದಾರರ ಪೈಕಿ 86,337 ಮಂದಿ ಹಾಗೂ ಮಳವಳ್ಳಿ ತಾಲೂಕಿನ 94,445 ಪುರುಷರ ಪೈಕಿ 80,693 ಮಂದಿ, 91,957 ಮಹಿಳಾ ಮತದಾರರ ಪೈಕಿ 76,918 ಮತದಾರರು ಹಕ್ಕು ಚಲಾಯಿಸಿದ್ದಾರೆ. ಇನ್ನುಳಿದಂತೆ ಮೂರು ತಾಲೂಕಿನಲ್ಲಿ 53 ಇತರೆ ಮತದಾರರಿದ್ದು, ಒಬ್ಬರೂ ಮತದಾನ ಮಾಡಿಲ್ಲ.

ಇದನ್ನೂ ಓದಿ: ಮಾರ್ಚ್-2021ರಲ್ಲಿ SSLC ಹಾಗೂ ಪಿಯುಸಿ ಪರೀಕ್ಷೆಗಳು ನಡೆಯುವುದಿಲ್ಲ: ಸುರೇಶ್ ಕುಮಾರ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next