Advertisement

ಮಮತೆಯ ಮಡಿಲು ಅನ್ನದಾಸೋಹದಲ್ಲಿ ಊಟ ವಿತರಿಸಿದ ಶಾಸಕ ಶ್ರೀನಿವಾಸ್‌

12:43 PM Jan 17, 2021 | Team Udayavani |

ಮಂಡ್ಯ: ಮೈಸೂರಿನ ಚಲುವಾಂಬ ಆಸ್ಪತ್ರೆಯ ಮಾದರಿಯಲ್ಲಿ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನ್ನು 250 ಹಾಸಿಗೆ ಸೌಲಭ್ಯವನ್ನೊಳಗೊಂಡ ಪ್ರತ್ಯೇಕ ಆಸ್ಪತ್ರೆ ನಿರ್ಮಿಸುವ ಚಿಂತನೆ ನಡೆದಿದೆ ಎಂದು ಶಾಸಕ ಎಂ. ಶ್ರೀನಿವಾಸ್‌ ತಿಳಿಸಿದರು.
ನಗರದ ಮಿಮ್ಸ್‌ನ ಹೆರಿಗೆ ವಾರ್ಡ್‌ ಬಳಿ ಪರಿಸರ ರೂರಲ್‌ ಡೆವಲ್‌ಮೆಂಟ್‌ ಸೊಸೈಟಿ, ಮಮತೆಯ ಮಡಿಲು ವತಿಯಿಂದ ನಿತ್ಯ
ದಾಸೋಹ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾರ್ಥಕ ದಿನವನ್ನಾಗಿ ಆಚರಣೆಗೊಂಡ ಸಂದರ್ಭ ಸಾರ್ವಜನಿಕವಾಗಿ ಆಹಾರ ವಿತರಿಸಿ ಮಾತನಾಡಿದರು.

Advertisement

ಜಿಲ್ಲಾಸ್ಪತ್ರೆ ಪಕ್ಕದಲ್ಲಿರುವ ತಮಿಳು ಕಾಲೋನಿ ತೆರವುಗೊಂಡ ನಂತರ ಆ ಜಾಗದಲ್ಲಿ ಚಲುವಾಂಬ ಆಸ್ಪತ್ರೆ ಮಾದರಿಯಲ್ಲೇ
ಪ್ರತ್ಯೇಕವಾಗಿ ಮಹಿಳೆಯರು ಮತ್ತು ಮಕ್ಕಳ ಹಿತದೃಷ್ಟಿಯಿಂದ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡುವ ಗುರಿ ಹೊಂದಿದೆ. ಸದ್ಯದಲ್ಲೇ ಪ್ರಕ್ರಿಯೆ ಆರಂಭಗೊಳ್ಳುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹಣ ಮಾಡುವ ಉದ್ದೇಶವಲ್ಲ: ಹಣ ಮಾಡುವುದೇ ಮನುಷ್ಯನ ಮೂಲ ಉದ್ದೇಶವಲ್ಲ. ಮನುಷ್ಯ ಸತ್ತ ಮೇಲೆ ಹಣವನ್ನು
ಹೊತ್ತು ಹೋಗಲು ಸಾಧ್ಯವಿಲ್ಲ. ಆದ್ದರಿಂದ ಉಳ್ಳವರು ತಮ್ಮಲ್ಲಿರುವ ಸಂಪತ್ತನ್ನು ಇಲ್ಲದವರಿಗೆ ನೀಡುವುದರ ಮೂಲಕ
ನೆರವಾಗಬೇಕು. ಮಂಗಲ ಎಂ.ಯೋಗೀಶ್‌ ದಂಪತಿಗಳ ಮಮತೆಯ ಮಡಿಲುವಿನ ಮೂಲಕ ರೋಗಿಗಳ ಸಂಬಂಧಿಗಳಿಗೆ
ನೆರವಾಗುತ್ತಿರುವ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಶಾರ್ದೂಲ್ ‘ಸುಂದರ’ ಆಟ: 336 ರನ್ ಗಳಿಸಿದ ಟೀಂ ಇಂಡಿಯಾ, ಅಲ್ಪ ಹಿನ್ನಡೆ

ಸ್ವಯಂಶಕ್ತಿಯಿಂದ ಆಹಾರ ತಯಾರಿ:
ಪರಿಸರ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್‌ ಮಾತನಾಡಿ, ಅದ್ಧೂರಿ ಮದುವೆಗಳಲ್ಲಿ ಪೋಲಾಗುತ್ತಿದ್ದ ಆಹಾರವನ್ನು ಸಂಗ್ರಹಿಸಿ ಮಮತೆಯ ಮಡಿಲುವಿನ ಮೂಲಕ ಆಸ್ಪತ್ರೆಯ ಆವರಣದಲ್ಲಿ ವಿತರಿಸುವ ಕಾರ್ಯಕ್ರಮವನ್ನು ಕಳೆದ ಒಂದು ವರ್ಷದ ಹಿಂದೆ ಆರಂಭಿಸಿದೆವು. ಒಂದು ತಿಂಗಳ ನಂತರ ಸ್ವಯಂ ಶಕ್ತಿಯಿಂದ ನಾವೇ ಆಹಾರವನ್ನು ತಯಾರಿಸಿ ಕೊಡುವ ವ್ಯವಸ್ಥೆಯನ್ನು ರೂಢಿಸಿಕೊಂಡು ಬಂದಿದ್ದೇವೆ ಎಂದರು.

Advertisement

ಕೋವಿಡ್‌ನ‌ಂಥ ಸಂದರ್ಭದಲ್ಲಿ ಕೂಡ ಮಧ್ಯಾಹ್ನದ ಊಟದ ವ್ಯವಸ್ಥೆಯ ಜತೆಗೆ ಬೆಳಗಿನ ಉಪಹಾರವನ್ನು ಕೊಡಲಾಗುತ್ತಿದೆ.
ಪೌಷ್ಠಿಕ ಆಹಾರದಿಂದ ಬಳಲುವ ಅಸಂಖ್ಯಾತ ಶ್ರಮಿಕ ಮಹಿಳೆಯರಿಗೆ ಇದು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನೆರವಿನಿಂದ ಇನ್ನಷ್ಟು ಗುಣಮಟ್ಟದ ಆಹಾರ ವಿತರಣೆಗೆ ಮುಂದಾಗುವುದಾಗಿ ಹೇಳಿದರು. ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌. ಹರೀಶ್‌, ಸ್ಥಾನೀಯ ವೈದ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ, ಶಂಕರೇಗೌಡ, ಕೆ.ಪಿ.
ಅರುಣಕುಮಾರಿ, ಮಧುಗೌಡ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next