Advertisement

ಅಡ್ಡಣಪೆಟ್ಟು ಆಚರಣೆಯೊಂದಿಗೆ ಮಂಡೆಕೋಲು ಜಾತ್ರೆಗೆ ತೆರೆ

08:25 AM Apr 27, 2018 | Karthik A |

ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಕಾಲಾವಧಿ ಜಾತ್ರೆಗೆ ಐತಿಹಾಸಿಕ ಉಳ್ಳಾಕುಲು ದೈವದ ಅಡ್ಡಣಪೆಟ್ಟು ಆಚರಣೆಯೊಂದಿಗೆ ತೆರೆ ಬಿತ್ತು. ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ ದೇವರ ಉತ್ಸವ ಸಹಿತ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಪ್ರತಿದಿನವೂ ಅನ್ನಪ್ರಸಾದ ವಿತರಿಸಲಾಯಿತು.

Advertisement

ಬುಧವಾರ ಪೂರ್ವಾಹ್ನ ದೇವರ ದರ್ಶನ ಬಲಿ ಉತ್ಸವ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಿತು. ಸಂಜೆ ಭಜನ ಕಾರ್ಯಕ್ರಮ, ರಾತ್ರಿ ದುರ್ಗಾಪೂಜೆ, ರಂಗಪೂಜೆ ನಡೆದು, ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತ್ತು.

ಎ. 26ರಂದು ಬೆಳಗ್ಗೆ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮ, ಬಳಿಕ ಶ್ರೀ ಉಳ್ಳಾಕುಲು ದೈವದ ಅಡ್ಡಣ ಪೆಟ್ಟು ನಡೆದು, ಸಿರಿಮುಡಿ ಪ್ರಸಾದ ವಿತರಿಸಲಾಯಿತು. ಪೂರ್ವಾಹ್ನ ಉದ್ರಾಂಡಿ ಹಾಗೂ ಉಪದೈವಗಳ ಕೋಲ ನಡೆಯಿತು. ಅಪರಾಹ್ನ ಶ್ರೀ ಉಳ್ಳಾಕುಲು ಮೂಲಸ್ಥಾನ ಕಳೇರಿಗೆ ಭಂಡಾರ ಹಿಂತಿರುಗುವ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next