Advertisement

ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸಿ

08:11 PM Feb 19, 2021 | Team Udayavani |

ಬರಗೂರು: ಮನುಷ್ಯ ಆರೋಗ್ಯದಿಂದಿರ  ಬೇಕಾದರೆ ಸುರಕ್ಷತೆ ಅತಿ ಮುಖ್ಯವಾದದು. ಅಪಘಾತಕ್ಕೊಳಗಾಗಿ ಜೀವ ಕಳೆದುಕೊಳ್ಳುವ, ದೇಹದ ಭಾಗಗಳನ್ನು ವಿಕಲತೆ ಮಾಡಿಕೊಂಡು ನರಳುವುದಕ್ಕಿಂತ ಮುನ್ನ ರಸ್ತೆ ನಿಯಮಗಳನ್ನು ಪಾಲಿಸಿ ಸುರಕ್ಷತೆ ಕಾಪಾಡಿಕೊಳ್ಳುವಂತೆ ಪಟ್ಟನಾಯಕನಹಳ್ಳಿ ಪಿಎಸ್‌ಐ ಭಾಸ್ಕರ್‌ ಹೇಳಿದರು.

Advertisement

ಶಿರಾ ತಾಲೂಕು ಬರಗೂರು ಜ್ಞಾನಜ್ಯೋತಿ ಪದವಿ ಕಾಲೇಜು ಆವರಣದಲ್ಲಿ ಪೊಲೀಸ್‌ ಇಲಾಖೆ ಯಿಂದ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಹನಗಳನ್ನು ಚಲಾಯಿಸುವ ಜೊತೆಗೆ ವಾಹನದ ಆರ್‌.ಸಿ ಪುಸ್ತಕ, ಇಸೂÏರೆನ್ಸ್‌, ಡಿ.ಎಲ್‌ ಕಡ್ಡಾಯವಾಗಿ ಹೊಂದಿರಬೇಕು. ಎಲ್ಲಾ ದಾಖಲೆಗಳ ಜೆರಾಕ್ಸ್‌ ಪ್ರತಿಗಳನ್ನು ಯಾವಾಗಲೂ ತಮ್ಮ ವಾಹನದಲ್ಲಿ ಇರಿಸಿಕೊಂಡಿರಬೇಕು. ಇವುಗಳಲ್ಲಿ ಒಂದು ಕಡತ ಇಲ್ಲದೆ ಹೋದಲ್ಲಿ ತಮ್ಮ ಅಪಘಾತ ಸಂದರ್ಭದಲ್ಲಿ ಯಾವುದೇ ಆರ್ಥಿಕಸೌಲಭ್ಯಗಳಾಗಲೀ, ಕಾನೂನು ನಿಯಮಗಳಾಗಲೀ ಅನ್ವಯಿಸುವುದಿಲ್ಲ ಎಂದರು.

ಈಗಾಗಲೇ ಹಲವಾರು ಕಾರ್ಯಕ್ರಮಗಳಲ್ಲಿ ತಿಳಿವಳಿಕೆ ನೀಡಿದ್ದರೂ ಸಹ ವಾಹನ ಸವಾರರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕಡ್ಡಾಯವಾಗಿ 18 ವರ್ಷ ಕೆಳಗಿನ ಮಕ್ಕಳಿಗೆ ವಾಹನಗಳನ್ನು ಕೊಡಬೇಡಿ. ಆಕಸ್ಮಿಕವಾಗಿ ಅಪಘಾತಗಳು ಸಂಭವಿಸಿದರೆ ಅದಕ್ಕೆ ಪೋಷಕರೇ ಹೊಣೆಗಾರರಾಗುತ್ತೀರಿ ಎಂದರು. ಇದೇ ವೇಳೆ ಬರಗೂರು, ಪಟ್ಟನಾಯಕನಹಳ್ಳಿ ಕ್ರಾಸ್‌ ಸೇರಿದಂತೆ ಪೊಲೀಸ್‌ ಠಾಣಾ ಸರಹದ್ದಿನ ಹಲವು ಮುಖ್ಯ ರಸ್ತೆಗಳಲ್ಲಿ ಸೀಟ್‌ ಬೆಲ್ಟ್ ಧರಿಸಿ ಜೀವ ಉಳಿಸಿ, ವಾಹನಗಳ ಅಧಿಕೃತ

ದಾಖಲೆಗಳೊಂದಿಗೆ ವಾಹನಗಳನ್ನು ಚಲಿಸಿ ಎಂಬ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಪೊಲೀಸ್‌ ಸಿಬ್ಬಂದಿ ವಾಹನ ಚಾಲಕರಿಗೆ ಗುಲಾಬಿ ಹೂ ನೀಡಿ ಕಾನೂನು ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಯರಾಮಯ್ಯ, ಎಎಸ್‌ಐ ಮುದ್ದರಂಗಪ್ಪ, ಉಪನ್ಯಾಸಕರಾದ ಜಿ.ಎನ್‌.ಮೂರ್ತಿ, ಪೊ›ಬೆಷನರಿ ಪಿಎಸ್‌ಐ ಧರ್ಮಾಂಜಿ, ಪೇದೆಗಳಾದ ಹನು ಮಂತಾಚಾರ್‌, ಸಿದ್ಧರಾಮು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next