Advertisement
ಭಾರತೀಯ ಜನತಾ ಪಾರ್ಟಿಯ ಮೂಡಬಿದಿರೆ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಆಶ್ರಯದಲ್ಲಿ, ಪಂ. ದೀನ ದಯಾಳ್ ಉಪಾಧ್ಯಾಯರ ಜನ್ಮ ಶತಾಬ್ದಿ ಅಂಗವಾಗಿ ಪದ್ಮಾವತಿ ಕಲಾಮಂದಿರದಲ್ಲಿ ರವಿವಾರ ನಡೆದ ಹಿಂದುಳಿದ ವರ್ಗಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
Advertisement
ಕಾಂಗ್ರೆಸ್ ಮುಕ್ತ ಜಿಲ್ಲೆ ರೂಪಿಸಲು ಬಿಜೆಪಿ ಸಜ್ಜುಸಂಸದ ನಳಿನ್‌ಕುಮಾರ್ ಕಟೀಲು ಸಮಾವೇಶ ಉದ್ಘಾಟಿಸಿ, ‘ಮಂಡಲ ಮಟ್ಟದಲ್ಲಿ ಇಷ್ಟೊಂದು ಯಶಸ್ವಿಯಾಗಿ ಹಿಂದುಳಿದ ವರ್ಗಗಳ ಸಮಾವೇಶ ನಡೆಸಲು ಸಾಧ್ಯವಾಗಿರುವುದನ್ನು ನೋಡಿದರೆ ಮುಂದಿನ ಚುನಾವಣೆಯಲ್ಲಿ ದ.ಕ. ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಜಿಲ್ಲೆ ಮಾಡಲು ಖಂಡಿತಾ ಸಾಧ್ಯವಿದೆ ಎಂಬ ಆತ್ಮವಿಶ್ವಾಸ ಮೂಡುತ್ತಿದೆ. ಹಿಂದುಳಿದ ವರ್ಗಗಳ ಮಂದಿ ತಮ್ಮ ಬದುಕನ್ನು ಕಟ್ಟುವ ಅನಿವಾರ್ಯವಿದೆ; ಬಿಜೆಪಿ ಹಿಂದುಳಿದ ವರ್ಗದವರ ಏಕೈಕ ಆಶಾಕಿರಣವಾಗಿದೆ ‘ ಎಂದರು. ಒಬಿಸಿ ಹೆಸರು ಹೇಳಿ ಒಡೆಯೋ ಸಿದ್ದರಾಮಯ್ಯ
‘ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಪಿ. ನಂಜುಂಡಿ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವವರೆಗೆ ಹಿಂದುಳಿದವರು ಸ್ವಾಭಿಮಾನಿಗಳಾಗಿ ಬದುಕು ನಡೆಸಲು ಸಾಧ್ಯವಿಲ್ಲ ಎಂದರು. ಆರೆಸ್ಸೆಸ್ ಬ್ರಾಹ್ಮಣರು, ಹಣವಂತರ ಕೂಟ ಎಂದು ನಂಬಿಸಿಬಿಟ್ಟಿದ್ರು. ಮಂಕು ಹಿಡಿಸಿಬಿಡುವುದರಲ್ಲಿ ಕಾಂಗ್ರೆಸ್‌ನವರು ಜೆಹಾದಿಗಳಿಗಿಂತ ಏನೇನೂ ಕಡಿಮೆಯಿಲ್ಲ’ ಎಂದು ಟೀಕಿಸಿದರು. ಯಡಿಯೂರಪ್ಪ ಮತ್ತೆ ಸಿಎಂ: ಅಧಿಕಾರಿ ಭವಿಷ್ಯ
’12 ವರ್ಷಗಳ ಹಿಂದೆ ಕಾಂಗ್ರೆಸ್‌ನಿಂದ ನನ್ನನ್ನು ಬರಮಾಡಿಕೊಂಡ ಯಡಿಯೂರಪ್ಪ ಮುಂದೆ ಮುಖ್ಯಮಂತ್ರಿ ಆಗುತ್ತಾರೆ ಎಂದು ನಾನು ಹೇಳಿದ್ದೆ-ಇದೇ ಜಾಗದಲ್ಲಿ. 6 ತಿಂಗಳಲ್ಲಿ ಅವರು ಉಪಮುಖ್ಯಮಂತ್ರಿ, ಮತ್ತೆ ಮುಖ್ಯಮಂತ್ರಿ ಆದದ್ದು ನಿಮಗೆ ಗೊತ್ತೇ ಇದೆ. ಇವತ್ತು ಹೇಳ್ತಾ ಇದ್ದೇನೆ- ಮತ್ತೆ ಯಡಿಯೂರಪ್ಪ ಸಿಎಂ ಆಗ್ತಾರೆ, ಪುಟ್ಟಸ್ವಾಮಿಯವರೇ ನೀವು ಮಂತ್ರಿ ಆಗ್ತೀರಿ’ ಎಂದು ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ ಭವಿಷ್ಯ ನುಡಿದರು. ಬಿಜೆಪಿಗೆ ವಿವಿಧ ರಾಜಕೀಯ ಪಕ್ಷಗಳಿಂದ ಕಾರ್ಯಕರ್ತರಾಗಿ ಸೇರ್ಪಡೆಗೊಂಡರು. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರ. ಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್, ಸುದರ್ಶನ ಎಂ., ಕಿಶೋರ್ ರೈ, ಬಿಜೆಪಿ ಮಂಡಲಾಧ್ಯಕ್ಷ ಈಶ್ವರ ಕಟೀಲು, ಹಿಂ.ವ. ಮೋರ್ಚಾ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಜಿಲ್ಲಾಧ್ಯಕ್ಷ ಸುರೇಶ್ ಕಣಿಮರಡ್ಕ, ಪ್ರ. ಕಾರ್ಯದರ್ಶಿಗಳಾದ ಟಿ. ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು ಮುಖ್ಯ ಅತಿಥಿಗಳಾಗಿದ್ದರು. ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾ ಜಿಲ್ಲಾಧ್ಯಕ್ಷ ಜೋಯ್ಲಸ್ ಡಿ’ಸೋಜಾ, ಪುರಸಭಾ ಸದಸ್ಯರಾದ ಬಾಹುಬಲಿ ಪ್ರಸಾದ್, ಲಕ್ಷ್ಮಣ ಪೂಜಾರಿ, ನಾಗರಾಜ ಪೂಜಾರಿ, ಪ್ರಸಾದ್ ಕುಮಾರ್, ಪಕ್ಷ ಮುಖಂಡರಾದ ಭುವನಾಭಿರಾಮ ಉಡುಪ, ಕೆ. ಆರ್. ಪಂಡಿತ್, ಎಂ. ಎಸ್. ಕೋಟ್ಯಾನ್, ಸೂರಜ್ ಜೈನ್, ಅಭಿಲಾಷ್ ಶೆಟ್ಟಿ, ಬಂಟ್ವಾಳದ ಹಿಂ. ಮೋರ್ಚಾ ಅಧ್ಯಕ್ಷ ವಸಂತ, ಎಸ್‌ಸಿ ಮೋರ್ಚಾದ ಜಿಲ್ಲಾ ಪದಾಧಿಕಾರಿ ಶೀನ ಮಾಸ್ತಿಕಟ್ಟೆ ಮೊದಲಾದವರು ವೇದಿಕೆಯಲ್ಲಿದ್ದರು. ಬಿಜೆಪಿ ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷ ಗೋಪಾಲ ಶೆಟ್ಟಿಗಾರ್ ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ್ ಮೂಡುಶೆಡ್ಡೆ ವಂದಿಸಿದರು. ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಆಚಾರ್ಯ, ಗಣೇಶ ಅರ್ಬಿ ನಿರೂಪಿಸಿದರು. ಸುಮಾರು ಮೂರು ಸಾವಿರ ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಮುಂಜಾನೆ ಸ್ವರಾಜ್ಯ ಮೈದಾನದಿಂದ ಪದ್ಮಾವತಿ ಕಲಾಮಂದಿರದವರೆಗೆ ಕಾರ್ಯಕರ್ತರ ಮೆರವಣಿಗೆ ನಡೆಯಿತು. ಕೆಂಪಯ್ಯ ಸೂಪರ್ ಹೋಂ ಮಿನಿಸ್ಟರ್
ಸಿದ್ದರಾಮಯ್ಯನವರ ಪಕ್ಕವೇ ಕುಳಿತುಕೊಳ್ಳುವ ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಈ ರಾಜ್ಯದ ಸೂಪರ್ ಹೋಂ ಮಿನಿಸ್ಟರ್ ಆಗಿಬಿಟ್ಟಿದ್ದಾರೆ. ಹಾಲಿ ಡಿಜಿಪಿ ಕೆಂಪಯ್ಯನವರ ಮಾತು ಕೇಳುವ ಪರಿಸ್ಥಿತಿ ಇದೆ. ಸಿದ್ದರಾಮಯ್ಯ ಮೂಢನಂಬಿಕೆ ನಿಷೇಧ ಕಾಯಿದೆ ಜಾರಿಗೆ ತಂದರೆ ಕೋಲ, ಕಂಬಳ, ದೈವಾರಾಧನೆಗಳಿಗೆ ಅಡ್ಡಿಯಾಗುವ ಅಪಾಯವಿದೆ ಎಂದು ನಳಿನ್ ಎಚ್ಚರಿಸಿದರು.