Advertisement

ಟೂರಿಸ್ಟ್ ಗೈಡ್ ಗೂ ತಗುಲಿದ ಕೊರೊನಾ ವೈರಸ್: ದೇಶದಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆ

11:58 PM Mar 20, 2020 | Mithun PG |

ನವದೆಹಲಿ: 35 ವರ್ಷದ ನೊಯ್ಡಾ ಮೂಲದ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು ಆ ಮೂಲಕ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ ಎಂದು ಜೀ ನ್ಯೂಸ್ ವರದಿ ಮಾಡಿದೆ.
ಈ ವ್ಯಕ್ತಿಯನ್ನು ದೆಹಲಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ವ್ಯಕ್ತಿ ಟೂರಿಸ್ಟ್ ಗೈಡ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಇತ್ತೀಚಿಗಷ್ಟೇ ಇಟಲಿ ಪ್ರವಾಸಿಗರಿಗೆ ಆಗ್ರಾ ಮತ್ತು ಜೈಪುರದಲ್ಲಿ ಮಾರ್ಗದರ್ಶನ ಮಾಡಿದ್ದರು.

Advertisement

ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆ ಗಟ್ಟಲು ಕೇಂದ್ರ ಸರಕಾರವು ಬಹುತೇಕ ಭಾರತೀಯ ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಈಗಾಗಲೇ ನೀಡಲಾಗಿರುವ ವೀಸಾಗಳಲ್ಲಿ ಹಲವನ್ನು ಎ. 15ರ ವರೆಗೆ ಅಮಾನತುಗೊಳಿಸಲಾಗಿದೆ. ಹೊಸ ನಿಯಮ ಮಾ. 13ರ ಸಂಜೆ ಜಾರಿಯಾಗಲಿದೆ. ಅಂದರೆ, ಮಾ. 13ರ ಸಂಜೆ 5:30ಕ್ಕೂ ಮೊದಲು ಭಾರತಕ್ಕೆ ತೆರಳಲು ಮಾತ್ರ ಅವಕಾಶ ಸಿಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಕೊರೊನಾ ವೈರಸ್ ಗೆ 69 ಜನರು ತುತ್ತಾಗಿದ್ದು ಕೇರಳ(17) ಮತ್ತು ಹರ್ಯಾಣ(14) ಅತೀ ಹೆಚ್ಚು ಜನರು ಭಾಧಿತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next