Advertisement

ಶರತ್‌ ಕೊಪ್ಪು ಹಂತಕನನ್ನು ಗುಂಡಿಕ್ಕಿ ಕೊಂದ ಅಮೆರಿಕ ಪೊಲೀಸರು

11:36 AM Jul 16, 2018 | udayavani editorial |

ವಾಷಿಂಗ್ಟನ್‌ : ಕಳೆದ ಜುಲೈ 6ರಂದು ಕನ್ಸಾಸ್‌ ನಗರದಲ್ಲಿ 25ರ ಹರೆಯದ ಭಾರತೀಯ ವಿದ್ಯಾರ್ಥಿ ಶರತ್‌ ಕೊಪ್ಪು ಎಂಬಾತನನ್ನು ಗುಂಡಿಕ್ಕಿ ಸಾಯಿಸಿದ್ದ ಶಂಕಿತ ಆರೋಪಿಯನ್ನು ಅಮೆರಿಕ ಪೊಲೀಸರು ಎನ್‌ಕೌಂಟರ್‌ ನಡೆಸಿ ಗುಂಡಿಕ್ಕಿ ಕೊಂದಿರವುದಾಗಿ ವರದಿಯಾಗಿದೆ.

Advertisement

ಆರೋಪಿಯೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ; ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಶರತ್‌ ಕೊಪ್ಪು ಅವರನ್ನು ಆತ ಕೆಲಸ ಮಾಡಿಕೊಂಡಿದ್ದ ಮಿಸೋರಿಯಲ್ಲಿನ ರೆಸ್ಟೋರೆಂಟ್‌ನಲ್ಲಿ ದರೋಡೆ ಯತ್ನದ ವೇಳೆ ಆರೋಪಿಯು ಗುಂಡಿಕ್ಕಿ ಕೊಂದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next