Advertisement

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ

09:57 PM May 07, 2024 | Team Udayavani |

ಮಣಿಪುರ: ವ್ಯಕ್ತಿಯೊಬ್ಬ ಹಸುವಿನ ತಲೆಗೆ ಎರಡು ಬಾರಿ ಗನ್‌ನಿಂದ ಶೂಟ್‌ ಮಾಡಿ ಕೊಂದಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಅದು ಸಾಮಾಜಿಕ ಜಾಲಾತಾಣದಲ್ಲಿ  ವೈರಲ್‌ ಆಗಿದೆ. ಈ ಅಮಾನುಷ ಕೃತ್ಯವೆಸಗಿದ ವ್ಯಕ್ತಿಯ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ವಿಡಿಯೋದಲ್ಲಿ ರೈಫ‌ಲ್‌ ಹಿಡಿದ ವ್ಯಕ್ತಿಯೊಬ್ಬ ಮರವೊಂದಕ್ಕೆ ಕಟ್ಟಿದ್ದ ಹಸುವಿನ ತಲೆಗೆ ಒಂದು ಬಾರಿ ಶೂಟ್‌ ಮಾಡಿದ್ದಾನೆ. ತಲೆಗೆ ಗುಂಡು ತಗುಲುತ್ತಿದ್ದಂತೆ ನೆಲಕ್ಕುರುಳಿದ ಹಸು ನೋವು ತಾಳಲಾರದೇ ಒದ್ದಾಡಿದೆ. ಬಳಿಕ ಮತ್ತೂಮ್ಮೆ ಗುಂಡು ಹಾರಿಸಿದ್ದಾನೆ.

ಸುನಂದ ರೋಯ್‌ ಎಂಬುವವರು ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದು ಅದಕ್ಕೆ ಕೇಂದ್ರ ಗೃಹ ಸಚಿವಾಲಯ ಹಾಗೂ ಪೆಟಾ ಇಂಡಿಯಾವನ್ನು ಟ್ಯಾಗ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next