Advertisement
ಮಂಗಳೂರು ಪಾಂಡೇಶ್ವರದ ಮಹಿಳೆಯೋರ್ವರಿಗೆ 2020ರ ಆ. 5ರಂದು ರಿಯಾನಾರ್ಡೋ ನೀಲ್ ಎನ್ನುವಾತ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ಮಹಿಳೆ ಒಕೆ ಮಾಡಿದ್ದರು. ಅನಂತರ ಆರೋಪಿಯು ಮಹಿಳೆಯ ಮೊಬೈಲ್ ನಂಬರ್ ಪಡೆದು ಆಗಾಗ್ಗೆ ಇಂಟರ್ ನೆಟ್ ಮೂಲಕ ಕಾಲ್ ಮಾಡುತ್ತಿದ್ದ. ಬಳಿಕ ಗಿಫ್ಟ್ ನೀಡುವುದಾಗಿ ಹೇಳಿದ್ದ. ಇದನ್ನು ಮಹಿಳೆ ನಿರಾಕರಿಸಿದರೂ ಗಿಫ್ಟ್ ಕಳುಹಿಸಿದ್ದ.
Related Articles
Advertisement
ಆ ಬಳಿಕ ಇನ್ನೋರ್ವ ಮಹಿಳೆ ಕೂಡ ದೂರುದಾರರಿಗೆ ಕರೆ ಮಾಡಿ ಹೊಸದಿಲ್ಲಿಯ ಕಸ್ಟಮ್ ಅಧಿಕಾರಿ ಎಂದು ಹೇಳಿ ಗಿಫ್ಟ್ನ ಕಸ್ಟಮ್ಸ್ ಫೀಸ್, ಅಕೌಂಟ್ ಅಪ್‌ಡೇಟ್, ಜಿಎಸ್‌ಟಿ ಇತ್ಯಾದಿ ಖರ್ಚು ನೀಡಬೇಕೆಂದು ಹೇಳಿದ್ದರು. ಅನಂತರ ಬೇರೆ ಬೇರೆ ದಿನಾಂಕಗಳಂದು ದೂರುದಾರರ ವಿವಿಧ ಖಾತೆಗಳಿಂದ 14,91,840 ರೂ. ಪಡೆದು ವಂಚನೆ ಮಾಡಿದ್ದಾಳೆ. ಈ ಬಗ್ಗೆ ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.