Advertisement

ಲೈಂಗಿಕ ದೌರ್ಜನ್ಯ ಪ್ರಕರಣ: ಜಾಮೀನು ಪಡೆದು ಹೊರಬಂದಾತ ಸಂತ್ರಸ್ತೆಯ ತಂದೆಯನ್ನು ಹತ್ಯೆಗೈದ !

10:22 AM Mar 02, 2021 | Team Udayavani |

ಉತ್ತರಪ್ರದೇಶ: ಲೈಂಗಿಕ ದೌರ್ಜನ್ಯ ಪ್ರಕರಣದಡಿ ಜೈಲು ಪಾಲಾಗಿದ್ದ ವ್ಯಕ್ತಿಯೊಬ್ಬ ಜಾಮೀನಿನ ಮೇಲೆ ಹೊರಬಂದು ಸಂತ್ರಸ‍್ತೆಯ ತಂದೆಯನ್ನು ಗುಂಡಿಕ್ಕಿ ಹತ್ಯೆಗೈದ ಭೀಕರ ಘಟನೆ ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದೆ.

Advertisement

2018ರಲ್ಲಿ ಗೌರವ್ ಶರ್ಮಾ ಎಂಬಾತ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಜೈಲು ಸೇರಿ, ಇತ್ತೀಚೆಗಷ್ಟೆ ಜಾಮೀನಿನ ಮೇಲೆ ಹೊರಬಂದಿದ್ದ. ಸೋಮವಾರ (ಮಾ.1) ಸಂತ್ರಸ್ತೆಯ ಕುಟುಂಬ ಹಾಗೂ ಆರೋಪಿಗಳ ಕುಟುಂಬದ ನಡುವೆ ಕಲಹವೇರ್ಪಟ್ಟಿದ್ದವು. ಈ ವೇಳೆ ಸಂತ್ರಸ್ತೆಯ ತಂದೆಯ ಮೇಲೆ  ಗೌರವ್ ಶರ್ಮಾ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಹತ್ರಾಸ್ ಪೊಲೀಸರು, 2018ರಲ್ಲಿ ಗೌರವ್ ಶರ್ಮಾ ಎಂಬಾತನ ವಿರುದ್ದ ಸಂತ್ರಸ‍್ತೆಯ ತಂದೆ ದೂರು ನೀಡಿದ್ದರು. ಬಳಿಕ ಜೈಲು ಪಾಲಾಗಿದ್ದ ಗೌರವ್ ಶರ್ಮಾನಿಗೆ ಇತ್ತೀಚಿಗಷ್ಟೇ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತ್ತು.

ಇದನ್ನೂ ಓದಿ: ಉಳ್ಳಾಲ: ಮಹಿಳೆಯ ಸರ ಎಳೆದು ಪರಾರಿ; ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಏತನ್ಮಧ್ಯೆ ಸಂತ್ರಸ್ತೆಯ ಕುಟುಂಬ ಹಾಗೂ ಆರೋಪಿಗಳ ಕುಟುಂಬದ ನಡುವೆ ಆಗಿಂದ್ದಾಗೆ ಕಲಹವೇರ್ಪಡುತ್ತಿದ್ದವು ಎನ್ನಲಾಗಿದೆ. ಸೋಮವಾರವೂ ಕೂಡ ದೇವಾಲಯವೊಂದರ ಬಳಿ ಎರಡು ಕುಟುಂಬಗಳ ಮಧ್ಯೆ ಜಗಳ ಆರಂಭವಾಗಿತ್ತು. ಈ ವೇಳೆ ಗೌರವ್ ಶರ್ಮಾ ತನ್ನ ಕುಟುಂಬದ ಕೆಲವರನ್ನು ಸ್ಥಳಕ್ಕೆ ಕರೆದು ಸಂತ್ರಸ್ಥೆಯ ತಂದೆಯ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವ್ ಶರ್ಮಾ ಕುಟುಂಬದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ನನಗೆ ನ್ಯಾಯ ದೊರಕಿಸಿಕೊಡಿ, ಮೊದಲು ನನ್ನ ಮೇಲೆ ದೌರ್ಜನ್ಯವೆಸಗಿದ. ಇದೀಗ ನನ್ನ ತಂದೆಯನ್ನೇ ಹತ್ಯೆಗೈದಿದ್ದಾನೆ. ಆತ ನಮ್ಮ ಗ್ರಾಮಕ್ಕೆ ಆರೇಳು ಮಂದಿಯೊಂದಿಗೆ ಬಂದಿದ್ದ. ಆತನ ಹೆಸರು ಗೌರವ್ ಶರ್ಮಾ. ನನ್ನ ತಂದೆಗೆ ಯಾರ ಮೇಲೂ ದ್ವೇಷವಿರಲಿಲ್ಲ ಎಂದು ಸಂತ್ರಸ್ತೆಯೂ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾಳೆ.

ಇದನ್ನೂ ಓದಿ:  ಎರಡನೇ ಹಂತದ ಕೋವಿಡ್ ಲಸಿಕೆ : ಕರ್ನಾಟಕದಲ್ಲಿ ಮೊದಲ ದಿನ 2,643 ಮಂದಿಗೆ ಚುಚ್ಚುಮದ್ದು

Advertisement

Udayavani is now on Telegram. Click here to join our channel and stay updated with the latest news.

Next