Advertisement

ಕರ್ಫ್ಯೂ ಸಮಯದಲ್ಲಿ ಗಂಗಾವತಿ ನಗರದ ಹಸುಗಳ ಬಾಯಾರಿಕೆ ತಣಿಸುವ ಟೀ ವ್ಯಾಪಾರಿ ರಂಗಪ್ಪ

02:32 PM May 08, 2021 | Team Udayavani |

ಗಂಗಾವತಿ: ಕೋವಿಡ್ ಕರ್ಪ್ಯೂ ಸಂದರ್ಭದಲ್ಲಿ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಇದರಿಂದ ಬೀದಿ‌ದನಗಳಿಗೆ ಮೇವು, ನೀರಿನ ಕೊರತೆಯುಂಟಾಗಿದೆ. ಇದನ್ನು ಮನಗಂಡ ಇಂದಿರಾ ನಗರದ ಟೀ ವ್ಯಾಪಾರಿ ರಂಗಪ್ಪ ನಾಯಕ ನಿತ್ಯವೂ ಬೆಳ್ಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸಮಯದಲ್ಲಿ ಓಎಸ್ ಬಿ ರಸ್ತೆಯಲ್ಲಿ ಇಟ್ಟಿರುವ ಸಿಮೆಂಟ್ ಟ್ಯಾಂಕ್ ಗೆ‌ ನೀರು ತುಂಬಿಸುತ್ತಾರೆ. ಗಾಂಧಿ ಚೌಕ್ ಓಎಸ್ ಬಿ ರೋಡ್ ಮತ್ತು ಚನ್ನಬಸವಸ್ವಾಮಿ ದೇಗುಲದ ಸುತ್ತಲಿನ ದನಗಳು ಇಲ್ಲಿಗೆ ಬಂದು ನೀರು ಕುಡಿದು ಹೋಗುತ್ತವೆ. ಗೋವುಗಳ ಬಗ್ಗೆ ಭಕ್ತಿ ಭಾವದ ಮಾತನಾಡುವ ಕೆಲವರು ಗೋವುಗಳಿಗೆ ಮೇವು ನೀರು ಕೊಡುವ ರಂಗಪ್ಪ ನಂತವರು ಮಾತಿಗಿಂತ ಕೆಲಸಕ್ಕೆ ಆದ್ಯತೆ ಕೊಡುವುದು ಉತ್ತಮ ಕೆಲಸವಾಗಿದೆ.

Advertisement

ಕೋವಿಡ್ ಕರ್ಪ್ಯೂ ನಿಂದಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಬೀದಿ ದನಗಳಿಗೆ‌ ನೀರು‌ ಮೇವು ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ದನಗಳಿಗೆ ಜನರು ಮೇವು‌ ನೀರು ಮಾತ್ರ ಕೊಡಬೇಕು. ಅಕ್ಕಿ ಬೆಲ್ಲ ರೊಟ್ಟಿ ಕೊಡಬಾರದು. ಇದರಿಂದ ದನಗಳ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ. ಅನ್ನ ಅಕ್ಕಿ ರೊಟ್ಟಿ ಬೆಲ್ಲ ತಿಂದ ದನಗಳು ಹಾಕುವ ಸೆಗಣಿಯಿಂದ ರೋಗ ರುಜಿನಗಳು ಹರಡುತ್ತದೆ. ಜನರು ಮೇವು ನೀರು ಬಿಟ್ಟು ಬೇರೆಯದನ್ನು ಕೊಡಬಾರದೆಂದು‌ ರಂಗಪ್ಪ ನಾಯಕ ಉದಯವಾಣಿ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next