Advertisement

ಹೋಟೆಲ್ ನಲ್ಲಿ ಚಟ್ನಿ ವಿಚಾರಕ್ಕೆ ಕಿರಿಕ್;ಪೊಲೀಸರೆದುರು ಬ್ಲೇಡ್ ನಿಂದ ಕುತ್ತಿಗೆ ಕುಯ್ದ ಯುವಕ

04:03 PM Sep 23, 2022 | Team Udayavani |

ಹುಬ್ಬಳ್ಳಿ: ಹೊಟೇಲ್‌ ನಲ್ಲಿ ಊಟದ ವಿಷಯವಾಗಿ ಮಾಲಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಓರ್ವನನ್ನು ಠಾಣೆಗೆ ವಿಚಾರಣೆಗೆಂದು ಪೊಲೀಸರ ಬಳಿ ಕರೆದುಕೊಂಡು ಬಂದಾಗ, ಆತ ಕುತ್ತಿಗೆಗೆ ಬ್ಲೇಡ್‌ ನಿಂದ ಕೊಯ್ದುಕೊಂಡು ಬೆದರಿಕೆ ಹಾಕಲು ಮುಂದಾದ ಘಟನೆ ಇಲ್ಲಿನ ಹಳೇಹುಬ್ಬಳ್ಳಿ ಠಾಣೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

Advertisement

ಇಲ್ಲಿನ ಗಣೇಶಪೇಟೆ ಮೀನು ಮಾರುಕಟ್ಟೆಯ ರಾಘವೇಂದ್ರ ನಾಯಕ ಎಂಬಾತನೆ ಕುತ್ತಿಗೆಗೆ ಬ್ಲೇಡ್ ಇರಿದುಕೊಂಡವ.

ಈತನು ಗುರುವಾರ ಇಂಡಿ ಪಂಪ್ ವೃತ್ತ ಬಳಿಯ ಬಿರಿಯಾನಿ ಹೌಸ್ ಅಂಗಡಿಯ ಮಾಲಕರೊಂದಿಗೆ ತಿಂಡಿಗೆ ಚಟ್ನಿ ಕೊಡಲಿಲ್ಲವೆಂದು ಜಗಳ ಮಾಡಿಕೊಂಡಿದ್ದಾನೆ. ಆಗ ಪೊಲೀಸರು ಅಂಗಡಿಯ ಮಾಲಕ ಮತ್ತು ರಾಘವೇಂದ್ರನನ್ನು ವಿಚಾರಣೆಗೆಂದು ಠಾಣೆಗೆ ಕರೆಯಿಸಿದಾಗ, ಒಮ್ಮೇಲೆ ತನ್ನ ಬಳಿಯಿದ್ದ ಬ್ಲೇಡ್‌ ನಿಂದ ಕುತ್ತಿಗೆಗೆ ಕೊಯ್ದುಕೊಂಡಿದ್ದಾನೆ. ಏಕಾಏಕಿ ನಡೆದ ಈ ಘಟನೆಯಿಂದ ಠಾಣೆಯಲ್ಲಿನ ಸಿಬ್ಬಂದಿ ಆತಂಕಗೊಂಡಿದ್ದಾರೆ. ನಂತರ ಅಲ್ಲಿದ್ದವರೆಲ್ಲ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ತನ್ನದೇ ಡೆತ್ ಸರ್ಟಿಫಿಕೇಟ್ ಕಳೆದುಕೊಂಡಿದ್ದೇನೆ ಎಂದು ಜಾಹೀರಾತು!: ವೈರಲ್ ಸುದ್ದಿ

22 ವರ್ಷದ ರಾಘವೇಂದ್ರನು ಹಣಕ್ಕಾಗಿ ಆಗಾಗ ತಾಯಿ ಹಾಗೂ ಸ್ನೇಹಿತರ ಬಳಿ ದುಂಬಾಲು ಬೀಳುತ್ತಿದ್ದ. ಕೊಡದಿದ್ದರೆ ಕುತ್ತಿಗೆಗೆ ಬ್ಲೇಡ್‌ನಿಂದ ಕೊಯ್ದುಕೊಂಡು ಬೆದರಿಕೆ ಹಾಕುತ್ತಿದ್ದ. ಹೊಟೇಲ್‌ ಗಳಲ್ಲಿ ತಿಂಡಿ ತಿಂದು ಹಣ ಕೊಡದೆ ಜಗಳ ಮಾಡಿಕೊಳ್ಳುತ್ತಿದ್ದ. ಅದೇ ರೀತಿ ಗುರುವಾರವು ಹೊಟೇಲ್‌ನ ಮಾಲಕರೊಂದಿಗೆ ಜಗಳ ತೆಗೆದಿದ್ದಾಗ ವಿಚಾರಣೆಂದು ಠಾಣೆಗೆ ಕರೆಯಿಸಿದಾಗ ಕುತ್ತಿಗೆಗೆ ಬ್ಲೇಡ್‌ ನಿಂದ ಕೊಯ್ದುಕೊಂಡು ಬೆದರಿಸಲು ಮುಂದಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement

ಹಳೇಹುಬ್ಬಳ್ಳಿ ಪೊಲೀಸರು ರಾಘವೇಂದ್ರನ ವಿರುದ್ಧ ಆತ್ಮಹತ್ಯೆಗೆ ಯತ್ನ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next