Advertisement

ಚಿಕ್ಕೋಡಿ: ಭಾರೀ ಮಳೆಗೆ ಗೋಡೆ ಕುಸಿದು ವ್ಯಕ್ತಿ ಸಾವು

09:10 AM Aug 19, 2020 | Mithun PG |

ಚಿಕ್ಕೋಡಿ: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆ ಗೋಡೆ ಕುಸಿದು ಓರ್ವ ವ್ಯಕ್ತಿ ಮೃತಪಟ್ಡ ದಾರುಣ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ.

Advertisement

ಮೃತ ವ್ಯಕ್ತಿಯನ್ನು ಕಲ್ಲಪ್ಪ ಪರಗೌಡರ (70) ಎಂದು ಗುರುತಿಸಲಾಗಿದೆ.

ಮಳೆಯ ಕಾರಣದಿಂದ ಮನೆಯ ಗೋಡೆಗಳು  ಶಿಥಿಲಗೊಂಡು ಕುಸಿದುಬಿದ್ದಿದೆ. ಪರಿಣಾಮವಾಗಿ ಕಲ್ಲಪ್ಪ ಪರಗೌಡರ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ತಹಶಿಲ್ದಾರ ಸುಭಾಷ ಸಂಪಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೀಗ ಮಹಾ ಮಳೆ ಅಬ್ಬರ ತಗ್ಗಿದ್ದು,  ಹೀಗಾಗಿ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಡದಲ್ಲಿ ಒಂದು ಅಡಿಯಷ್ಟು ಹೆಚ್ಚಳವಾಗಿದೆ. ಚಿಕ್ಕೋಡಿ ಉಪವಿಭಾಗದಲ್ಲಿ ಎಂಟು ಸೇತುವೆಗಳು ಜಲಾವೃತಗೊಂಡಿವೆ. ಚಿಕ್ಕೋಡಿ ತಾಲೂಕಿನ ಇಂಗಳಿ. ಯಡೂರವಾಡಿ ತೋಟಪಟ್ಡಿ ಪ್ರದೇಶದ 100ಕ್ಕೂ ಅಧಿಕ ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next