ಮುಂಬೈ: ಏರ್ ಇಂಡಿಯಾ ವಿಮಾನದಲ್ಲಿ ಅಶಿಸ್ತು ತೋರಿದ ಪ್ರಯಾಣಿಕರೊಬ್ಬರನ್ನು ಮುಂಬೈ ಕೋರ್ಟ್ ಜೈಲಿಗೆ ಕಳುಹಿಸಿರುವ ಘಟನೆ ನಡೆದಿದೆ. ಏರ್ ಇಂಡಿಯಾ ವಿಮಾನದಲ್ಲಿ ಸಿಗರೇಟ್ ಸೇದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲ್ ಗೆ 25,000 ಸಾವಿರ ರೂಪಾಯಿ ಪಾವತಿಸಲು ನಿರಾಕರಿಸಿದ್ದ ಪ್ರಯಾಣಿಕನಿಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಮಹಿಳೆಯ ತಲೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ರೈಲಿನ ಟಿಟಿಇ
ಕೋರ್ಟ್ ನಲ್ಲಿ ಆರೋಪಿ ಆನ್ ಲೈನ್ ಸರ್ಚ್ ಮಾಡಿ ಮಾಹಿತಿ ತಿಳಿದುಕೊಂಡು, ತಾನು ಐಪಿಸಿ ಸೆಕ್ಷನ್ ಪ್ರಕಾರ ಕೇವಲ 250 ರೂಪಾಯಿ ಮಾತ್ರ ದಂಡ ಕಟ್ಟುವುದಾಗಿ ವಾದಿಸಿದ್ದ. ಏರ್ ಇಂಡಿಯಾ ವಿಮಾನದಲ್ಲಿ ಸಿಗರೇಟ್ ಸೇದಿದ ಪ್ರಕರಣದಲ್ಲಿ ಮುಂಬೈ ಕೋರ್ಟ್ ಆರೋಪಿ ರತ್ನಾಕರ್ ದ್ವಿವೇದಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಆರೋಪಿ ಬೇಲ್ ಗಾಗಿ 25,000 ಸಾವಿರ ಪಾವತಿಸಲು ನಿರಾಕರಿಸಿದ್ದು, ತಾನು ಜೈಲಿಗೆ ಹೋಗಲು ಸಿದ್ಧ ಎಂದು ಪ್ರತಿವಾದ ಮಂಡಿಸಿರುವುದಾಗಿ ವರದಿ ವಿವರಿಸಿದೆ.
ಮಾರ್ಚ್ 10ರಂದು ಏರ್ ಇಂಡಿಯಾದ ಲಂಡನ್-ಮುಂಬೈ ವಿಮಾನದ ಶೌಚಾಲಯದಲ್ಲಿ ರತ್ನಾಕರ್ ಧೂಮಪಾನ ಮಾಡಿದ್ದು, ಈ ನಿಟ್ಟಿನಲ್ಲಿ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 336ರ ಅಡಿ ದೂರು ದಾಖಲಿಸಲಾಗಿತ್ತು.
ಆದರೆ ತಾನು ಐಪಿಸಿ ಸೆಕ್ಷನ್ 336ರ ಅಡಿ 250 ರೂಪಾಯಿ ಮಾತ್ರ ದಂಡ ಕಟ್ಟಲು ಸಿದ್ಧನಿದ್ದೇನೆ ಎಂದು ಆರೋಪಿ ರತ್ನಾಕರ್ ವಾದಿಸಿ, ಬೇಲ್ ನ 25,000 ಸಾವಿರ ರೂ.ಪಾವತಿಸಲು ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಅಂಧೇರಿ ಮೆಟ್ರೋಪೊಲಿಟಿಯನ್ ಮ್ಯಾಜಿಸ್ಟ್ರೇಟ್ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.