ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ತಂಡದ ಅಭ್ಯಾಸ ಜೆರ್ಸಿಯ ಬಣ್ಣ ಕೇಸರಿಮಯಗೊಳಿಸಿರುವುದನ್ನು ಇದೊಂದು ಕೇಂದ್ರ ಸರಕಾರದ ರಾಜಕೀಯ ನಡೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬಾನ್ಯರ್ಜಿ ಆರೋಪಿಸಿದ್ದಾರೆ.
ಕೋಲ್ಕತ್ತಾದ ಗಸಗಸೆ ಮಾರುಕಟ್ಟೆಯಲ್ಲಿ ಜಗದ್ಧಾತ್ರಿ ಪೂಜೆಯ ಆರಂಭದಲ್ಲಿ ಮಾತನಾಡಿದ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಅತ್ಯಂತ ಜನಪ್ರಿಯ ಕ್ರೀಡೆಯನ್ನು ಕೇಸರಿಮಯಗೊಳಿಸಲು ಹೊರಟಿದೆ ಎಂದು ಅವರು ಆರೋಪಿಸಿದ್ದಾರೆ. ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ಅವರು, ಇಡೀ ದೇಶಕ್ಕೆ ಕೇಸರಿ ಬಣ್ಣ ಬಳಿಯಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ಗುಡುಗಿದ್ದಾರೆ.
ನಮ್ಮ ಭಾರತೀಯ ಆಟಗಾರರ ಬಗ್ಗೆ ನಮಗೆ ಹೆಮ್ಮೆಯಿದೆ ಮತ್ತು ಅವರು ವಿಶ್ವಕಪ್‌ನಲ್ಲಿ ವಿಜೇತರಾಗುತ್ತಾರೆ ಎಂಬ ವಿಶ್ವಾಸವಿದೆ, ಆದರೆ ಬಿಜೆಪಿ ಅಲ್ಲಿಯೂ ಕೇಸರಿ ಬಣ್ಣವನ್ನು ತಂದಿತು ಮತ್ತು ನಮ್ಮ ಹುಡುಗರು ಈಗ ಕೇಸರಿ ಬಣ್ಣದ ಜೆರ್ಸಿಯಲ್ಲಿ ಅಭ್ಯಾಸ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಮೆಟ್ರೋ ನಿಲ್ದಾಣಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.”
ಬಿಜೆಪಿ ಕ್ರಿಕೆಟ್ ತಂಡದ ಜೆರ್ಸಿಗಳಿಗೆ ಮಾತ್ರವಲ್ಲದೆ ಮೆಟ್ರೋ ನಿಲ್ದಾಣಗಳ ಪೇಂಟಿಂಗ್‌ಗೂ ಕೇಸರಿ ಬಣ್ಣವನ್ನು ಸೇರಿಸಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರ ವಿರುದ್ಧವೂ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Chikkamagaluru: ಪೋಸ್ಟರ್ ಅಭಿಯಾನ.. ವ್ಯಂಗ್ಯ ಚಿತ್ರದ ಮೂಲಕ ಸರ್ಕಾರವನ್ನು ಕುಟುಕಿದ ಬಿಜೆಪಿ