Advertisement
ಶುಕ್ರವಾರ ಅವರು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ವತಿಯಿಂದ ಮಲ್ಪೆ ಮೀನುಗಾರಿಕೆ ಬಂದರು ಸಮೀಪದ ಬ್ರೇಕ್ ವಾಟರ್ ಮೇಲೆ 53.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ “ಸೀ ವಾಕ್‌ವೇ’ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಮಲ್ಪೆ ಭಾಗದ ಯುವಕರು ಕೇವಲ ಮೀನುಗಾರಿಕೆ ಯನ್ನು ಮಾತ್ರ ಅವಲಂಬಿಸದೆ ಅದರ ಜತೆಗೆ ಪ್ರವಾಸೋದ್ಯಮದಿಂದಲೂ ಆದಾಯಗಳಿಸಿ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಉಡುಪಿಯ ಮಲ್ಪೆಯಲ್ಲಿ ಪ್ರವಾಸೋದ್ಯಮವನ್ನು ಎತ್ತರಕ್ಕೆ ಬೆಳೆಸುವ ಪ್ರಯತ್ನ ಮಾಡಲಾಗುವುದು. ಮಲ್ಪೆ ಬೀಚ್, ಪಡುಕರೆ ಬೀಚ್, ಸೈಂಟ್ ಮೇರೀಸ್ ದ್ವೀಪ, ಸೀವಾಕ್‌ವೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ವಾಹನಗಳಿಗೆ ಪ್ರವೇಶ ಇಲ್ಲ
ಸೀವಾಕ್ ಕೇವಲ ನಡೆದಾಡುವುದಕ್ಕೆ ಮಾತ್ರ; ಬೈಕ್ ಅಥವಾ ಇನ್ನಿತರ ವಾಹನಗಳಿಗೆ ಇಲ್ಲಿ ಪ್ರವೇಶ ಇಲ್ಲ. ಸೀವಾಕ್‌ನೊಳಕ್ಕೆ ವಾಹನ ಚಲಾಯಿಸಿದಲ್ಲಿ ಮುಟ್ಟು ಗೋಲು ಹಾಕಿ ಕೊಳ್ಳಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
Related Articles
Advertisement
ರಾಜ್ಯದ ಪ್ರಥಮ, ದೇಶದ ದ್ವಿತೀಯಸೀ ವಾಕ್‌ವೇ ನೆರೆಯ ರಾಜ್ಯ ಕೇರಳದ ಕೋಯಿ ಕ್ಕೋಡ್‌ನ ಬೇಪೊರ್ ಬೀಚ್‌ನಲ್ಲಿದೆ. ಹೀಗಾಗಿ ಮಲ್ಪೆ ಸೀ ವಾಕ್‌ವೇ ಕರ್ನಾಟಕಕ್ಕೆ ಮೊದಲನೆಯದು, ದೇಶದಲ್ಲಿ ಎರಡನೆಯದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಸುಮಾರು 480 ಮೀ. ಉದ್ದ, ಮೂರು ಮೀ. ಅಗಲದಲ್ಲಿ ಸಮುದ್ರಕ್ಕೆ ವಿಸ್ತರಿಸಿರುವ ಈ ವಾಕ್ ವೇಯನ್ನು ಬ್ರೇಕ್‌ವಾಟರ್ ಮೇಲೆ ನಿರ್ಮಿಸ ಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಎರಡೂ ಬದಿ ಕಲ್ಲಿನ ಗೋಡೆ ಇದೆ. ವಾಕ್‌ವೇ ಮೇಲೆ ಕುಳಿತು ಕೊಳ್ಳಲು ಬೆಂಚಿನ ವ್ಯವಸ್ಥೆ ಇದೆ, 35 ಆಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರಿಗೆ, ವಾಯು ವಿಹಾರಿಗಳಿಗೆ ಅತ್ಯಂತ ಸುಂದರ ಅನುಭವ ನೀಡಲಿದೆ. ವಾಕ್ ವೇ ತುತ್ತ ತುದಿಯಲ್ಲಿ ನಿಂತರೆ ಸೈಂಟ್ ಮೇರೀಸ್, ದರಿಯಗಡ್ ಮತ್ತು ಲೈಟ್‌ಹೌಸ್ -ಈ ಮೂರು ದ್ವೀಪಗಳನ್ನು ಏಕಕಾಲದಲ್ಲಿ ವೀಕ್ಷಿಸಬಹುದಾಗಿದೆ.