ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
Advertisement
ದಾರಿದೀಪ ಉರಿಯದ ಕಾರಣ ಈ ಜಾಗ ಅನೈತಿಕ ಚಟುವಟಿಕೆಗಳ ಆಶ್ರಯ ತಾಣವಾಗಿದೆ. ನಿತ್ಯ ಸರಿ ರಾತ್ರಿಯಲ್ಲಿ ಇಲ್ಲಿ ಇಂತಹ ಕೆಟ್ಟ ಚಟುವಟಿಕೆಗಳು ನಡೆಯುತ್ತದೆ ಎಂದು ಜನರು ಆರೋಪಿಸಿದ್ದಾರೆ.
ಮಾರ್ಗದ ಇಕ್ಕೆಲಗಳಲ್ಲಿ ಕಸದ್ದೇ ರಾಶಿ. ನಿರ್ಜನ ಪ್ರದೇಶದಲ್ಲಿರುವ ಈ ರಸ್ತೆಯ ಎರಡು ಕಡೆಗಳು ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ. ಈ ರಸ್ತೆಯಲ್ಲಿ ಸಾಗುವಾಗ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಸ್ಥಿತಿ ಕಳೆದ ಹಲವು ಸಮಯಗಳಿಂದ ಇದೆ. ರಸ್ತೆಯ ಇಕ್ಕೆಲಗಳಲ್ಲಿ ನಿರಂತರವಾಗಿ ಕಸ ಎಸೆಯಲಾಗುತ್ತಿದೆ. ಇಲ್ಲಿ ತ್ಯಾಜ್ಯ ಎಸೆಯುವ ಪರಿಪಾಠ ಇಂದು ನಿನ್ನೆಯದಲ್ಲ. ನಿರಂತವಾಗಿ ಇಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದೆ. ಮನೆ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ ತಂದು ಎಸೆಯಲಾಗುತ್ತಿದೆ. ಹಸಿ ಕಸ, ಮೀನು, ಮಾಂಸದ ಚೂರುಗಳು, ಕೊಳೆತ ಪದಾರ್ಥಗಳನ್ನು ಎಸೆಯುವುದರಿಂದ ಬೀದಿನಾಯಿಗಳ ದಂಡೇ ಇಲ್ಲಿ ಸೃಷ್ಟಿಯಾಗಿದೆ. ಮಾತ್ರವಲ್ಲದೆ ನಾಯಿ ಮರಿ,, ಬೆಕ್ಕಿನ ಮರಿಗಳನ್ನು ಇಲ್ಲಿಯೇ ತಂದು ಬಿಡಲಾಗುತ್ತದೆ. ಬಹುತೇಕ ದಾರಿಹೋಕರು ಈ ಗೇಟಿನ ಬಳಿಯೇ ತಮ್ಮ ಬಹಿರ್ದೆಸೆ ಪೂರೈಸುತ್ತಾರೆ. ಸಂಬಂಧಪಟ್ಟ ಆಡಳಿತ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ. ಪರಿಹಾರ ಸಿಗುತ್ತಿಲ್ಲ
ಈ ಕುರಿತು ಸಂಬಂಧಿಸಿ ಜಾಗದ ವ್ಯಕ್ತಿಗೆ ದೂರು ನೀಡಿದರೆ ಪಂಚಾಯತ್‌ಗೆ ಹಸ್ತಾಂತರ ಮಾಡಿದ್ದೇವೆ ಎನ್ನುತ್ತಾರೆ. ತೆಂಕನಿಡಿಯೂರು ಗ್ರಾ. ಪಂ. ಈ ಬಗ್ಗೆ ಮನವಿ ಮಾಡಿದರೆ ನಮಗೆ ದಾರಿದೀಪ ರಸ್ತೆ ಇನ್ನೂ ಹಸ್ತಾಂತರವಾಗಿಲ್ಲ ಎಂಬ ಉತ್ತರ ಸಿಗುತ್ತದೆ. ಒಟ್ಟಿನಲ್ಲಿ ಪರಿಹಾರಕ್ಕೆ ಏನು ಮಾಡಬೇಕೆಂದು ತೋಚದಂತಾಗಿದೆ.
-ಹರೀಶ್, ಸ್ಥಳೀಯರು