Advertisement

ಮಲ್ಪೆ ಕಡಲತೀರಕ್ಕೆ ತೇಲಿ ಬಂದಿದೆ ಕಡಲಮಡಿ: ಮತ್ಸ್ಯಸಂಪತ್ತಿನ ನಿಶಾನೆ ?

05:55 AM Jul 22, 2017 | Team Udayavani |

ಮಲ್ಪೆ: ಮಲ್ಪೆ ಕಡಲತೀರದ ಉದ್ದಕ್ಕೂ ಅಪಾರ ಪ್ರಮಾಣದಲ್ಲಿ ಕಡಲ ಮಡಿ (ಕಡಲ ತ್ಯಾಜ್ಯ) ಬಿದ್ದಿದೆ.  ಮಳೆಗಾಲದ ಸಮಯದಲ್ಲಿ ಬಿರುಸುಗೊಂಡಿರುವ ಸಮುದ್ರ ತನ್ನೊಡಲು ಸೇರಿದ ಎಲ್ಲಾ ಕಸಕಡ್ಡಿಗಳನ್ನು ಕಡಲ ದಂಡೆ ಬಳಿ ಹೊರ ಹಾಕುತ್ತದೆ. ಇದಕ್ಕೆ ಸ್ಥಳೀಯವಾಗಿ ಮಡಿ ಬೀಳುವುದು ಎನ್ನುತ್ತಾರೆ.

Advertisement

ಮಳೆಗಾಲದಲ್ಲಿ ಕಾಡು, ನಗರ ಪ್ರದೇಶದ ಕಸ ಕಡ್ಡಿಗಳು ನೆರೆ ನೀರಿನಲ್ಲಿ ಹರಿದು ಬಂದು ಕಡಲನ್ನು ಸೇರಿಕೊಳ್ಳುತ್ತವೆ. ಕಡಲು ಮಡಿ ಬೀಳುವುದು ಪ್ರತಿವರ್ಷ ಈ ಸಮಯದಲ್ಲಿ ಘಟಿಸುವ ವಿದ್ಯಾಮಾನ. ಈ ಭಾರಿಯೂ ಮಲ್ಪೆ  ಕಡಲತೀರದಲ್ಲಿ ಅಪಾರ ಪ್ರಮಾಣದ ಕಸ ತೇಲಿ ಬಂದಿದೆ.

ಹಿಂದಿನ ಕಾಲದಲ್ಲಿ ಯಾವಾಗ ಕಡಲ ಮಡಿ ತೇಲಿ ಬಂತೋ ಆವಾಗ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಬಲೆ ತುಂಬ ಮೀನು ಸಿಗುತ್ತದೆ ಎಂಬುದು ನಂಬಿಕೆ. ಮಡಿ ಬಿದ್ದಾಗ ಬಿರುಸುಗೊಂಡ ಕಡಲು ತೀರಪ್ರದೇಶದಲ್ಲಿ ತಣ್ಣಗಾಗುತ್ತ ಹೋಗುತ್ತದೆ. ಇದು ಮೀನು ಬರುವ ಲಕ್ಷಣವೂ ಹೌದು ಎನ್ನುತ್ತಾರೆ ಮೀನುಗಾರರು.

Advertisement

Udayavani is now on Telegram. Click here to join our channel and stay updated with the latest news.

Next