Advertisement
ಮಲ್ಪೆ ಬಂದರಿನ ಗರುಡ ಪರ್ಸಿನ್ ಬೋಟ್ ಮಲ್ಪೆ ನೇರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿತ್ತು. ಕಳೆದ ಕೆಲವು ದಿನಗಳಿಂದ ಕೋಸ್ಟ್‌ಗಾರ್ಡ್‌ನವರು ಪರ್ಸಿನ್ ಬೋಟುಗಳ ತಪಾಸಣೆ ನಡೆಸುತ್ತಿದ್ದು, ಇಂದು ಗರುಡ ಬೋಟ್‌ನ ಬಳಿ ಬಂದ ಕೋಸ್ಟ್‌ಗಾರ್ಡ್‌ನವರ ಬೋಟ್ ಮೀನಿಗೆಂದು ಹರಡಿದ್ದ ಬಲೆಯ ಮೇಲೆ ಚಲಿಸಿತು. ಅದರ ಫ್ಯಾನ್‌ಗೆ ಸಿಲುಕಿಕೊಂಡ ಬಲೆ ಸಂಪೂರ್ಣ ಹಾನಿಗೀಡಾಗಿ 8 ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಅನ್ಯ ರಾಜ್ಯದ ಮೀನುಗಾರರು ಇಲ್ಲಿ ನಿರಂತರ ಮೀನುಗಾರಿಕೆ ನಡೆಸುತ್ತಿದ್ದರೂ ಅವರಿಗೆ ಯಾವುದೇ ತಪಾಸಣೆ ಇಲ್ಲ. ಮಲ್ಪೆ ಬಂದರಿನ ಪರ್ಸಿನ್ ಬೋಟ್‌ಗಳಿಗೆ ಮಾತ್ರ ಹೆಚ್ಚಿನ ತಪಾಸಣೆ. ಇದು ಸಲ್ಲದು ಎಂದು ಮೀನುಗಾರರು ಆಗ್ರಹಿಸಿದ್ದಾರೆ. ಇದನ್ನೂ ಓದಿ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಬೆದರಿಕೆ ಪ್ರಕರಣ: ಸಿಐಡಿ ತನಿಖೆಗೆ ಒಪ್ಪಿಸಿದ ಸರಕಾರ