Advertisement

ಮಲ್ಯ ಕೇಸ್‌ ಮತ್ತೆ ಕೋರ್ಟ್‌ಗೆ

05:45 AM Mar 29, 2019 | mahesh |

ಲಂಡನ್‌: ಉದ್ಯಮಿ ವಿಜಯ್‌ ಮಲ್ಯ ಗಡಿಪಾರು ಪ್ರಕರಣ ಪುನಃ ಇಂಗ್ಲೆಂಡ್‌ನ‌ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್ಸ್‌ ಕೋರ್ಟ್‌ ಮೆಟ್ಟಿಲೇರಿದ್ದು, ಮತ್ತೆ ಸಂಪೂರ್ಣ ವಿಚಾರಣೆಗೆ ಕೋರ್ಟ್‌ ಅನುಮತಿ ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದು ಕೆಲವೇ ವಾರಗಳಲ್ಲಿ ತಿಳಿದು ಬರಲಿದೆ. ಗಡಿಪಾರು ಮಾಡುವಂತೆ ಯುಕೆ ಗೃಹ ಸಚಿವಾಲಯ ಒಪ್ಪಿಗೆ ನೀಡಿತ್ತು. ಇದರ ವಿರುದ್ಧ ಮಲ್ಯ ಮೇಲ್ಮನವಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಪಿಎನ್‌ಬಿ ಹಗರಣದಲ್ಲಿನ ಪ್ರಮುಖ ಆರೋಪಿ ನೀರವ್‌ ಮೋದಿಗೆ ಶುಕ್ರವಾರ ಜಾಮೀನು ಸಿಗುತ್ತದೆಯೇ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next