Advertisement

ಪಕ್ಷ ಸಂಕಷ್ಟದಲ್ಲಿರುವ ಸಮಯದಲ್ಲಿ ಅಜಾದ್ ನಡೆ ಸರಿಯಲ್ಲ : ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ

12:52 PM Aug 27, 2022 | Team Udayavani |

ಬೆಂಗಳೂರು : ಗುಲಂನಬಿ ಅಜಾದ್ ಅವರು ನಲವತ್ತು ವರ್ಷಗಳ ಕಾಲ ಅಧಿಕಾರ ಅನುಭವಿಸಿ ಪಕ್ಷ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದು ಸರಿಯಲ್ಲ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಅಜಾದ್ ನಡೆ ಕುರಿತು ಅಸಮಾಧಾನ ಹೊರಹಾಕಿದ ಖರ್ಗೆಪಕ್ಷವ ಅವರಿಗೆ ಎಲ್ಲವನ್ನೂ ಕೊಟ್ಟಿದೆ ಅಲ್ಲದೆ ನಲವತ್ತು ವರ್ಷಗಳ ಕಾಲ ಅಧಿಕಾರ ಅನುಭವಿಸಿದ್ದಾರೆ, ಇಡೀ ದೇಶಾದ್ಯಂತ ಭಾರತ್ ಜೋಡೋ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಕರೆ ನೀಡಿದ್ದಾರೆ ಇಂತಹ ಸಂದರ್ಭದಲ್ಲಿ ಹಿರಿಯ ನಾಯಕರು ರಾಜೀನಾಮೆ ಕೊಡುವುದು ಸರಿಯಲ್ಲ ಎಂದರು.

ಇದು ಬಿಜೆಪಿ, ಆರ್ ಎಸ್ ಎಸ್ ವಿರುದ್ಧದ ಹೋರಾಟ ಈ ಸಮಯದಲ್ಲಿ ಗುಲಂನಬಿ ಅಜಾದ್ ರಾಜೀನಾಮೆ ನೋಡಿದ್ರೆ ಬಿಜೆಪಿ, ಆರ್ ಎಸ್ ಎಸ್ ಗೆ ಹೆದರಿಕೊಂಡು ರಾಜೀನಾಮೆ ಕೊಟ್ಟಿದ್ದಾರೆ ಎಂದೆನಿಸುತ್ತದೆ ಎಂದರು.

ಅಲ್ಲದೆ ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡುವಾಗ ವೇಳೆ ಜಮ್ಮು ಕಾಶ್ಮೀರದಲ್ಲಿ ಪಕ್ಷ ಕಟ್ತಿನಿ ಅದು ಸ್ವರ್ಗ ಎಂದು ಹೇಳಿದ್ದರು, ಈಗ ಸ್ವರ್ಗ ಅಂದ್ರೆ ಏನು ಅಂತ ಅವರೇ ಹೇಳಬೇಕು ಎಂದರು.

ಇದನ್ನೂ ಓದಿ : ನಾಯಕತ್ವ ಬದಲಾವಣೆಗೆ ಪಟ್ಟು; ಗುಲಾಂ ನಬಿ, ಸಿಬಲ್ ಆಯ್ತು..ರಾಜೀನಾಮೆ ಮುಂದಿನ ಸರದಿ ಯಾರದ್ದು?

Advertisement

ಜಮ್ಮು ಕಾಶ್ಮೀರ ಸ್ವರ್ಗ ಅಂತ ಅಜಾದ್ ಹೇಳಿಕೆ ವ್ಯಂಗ್ಯವಾಡಿದ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಅವರಿಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಆಗಲ್ಲ ಹಾಗಾಗಿ ನಾವು ಗೆದ್ದ ರಾಜ್ಯಗಳಲ್ಲಿ ಆಪರೇಷನ್ ಮಾಡಿ ಅಧಿಕಾರಕ್ಕೆ ಬರುತ್ತಿದ್ದಾರೆ, ಮಹಾರಾಷ್ಟ್ರ,ಗೋವಾ, ಜಮ್ಮು ಕಾಶ್ಮೀರ, ಈಗ ದೆಹಲಿ ಸೇರಿದಂತೆ ಎಲ್ಲ ಕಡೆ ಆಪರೇಷನ್ ಮಾಡಿ ಅಧಿಕಾರಕ್ಕೆ ಬರುತ್ತಿದ್ದಾರೆ, ಮೊದಲು ಹಣದ ಆಫರ್ ಮಾಡ್ತಾರೆ. ಅದು ಆಗಲಿಲ್ಲ ಅಂದ್ರೆ ಕೇಂದ್ರದ ತನಿಖಾ ಸಂಸ್ಥೆಗಳನ್ನ ಬಳಸಿಕೊಂಡು ಹೆದರಿಸಿ ಅಧಿಕಾರಕ್ಕೆ ಬರುತ್ತಿದ್ದಾರೆ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next