Advertisement
ಕಾಪು – ಶಿರ್ವ ರಸ್ತೆಯಿಂದ ಬಡಗರಗುತ್ತು – ಜಾಮಿಯಾ ಮಸೀದಿ ರಸ್ತೆಯ ಪ್ರಾರಂಭದ 300 ಮೀಟರ್‌ನಲ್ಲಿ ಡಾಮರ್ ಹೋಗಿದೆ. ಉಳಿದ ಭಾಗಕ್ಕೆ ಕಾಂಕ್ರೀಟ್ ರಸ್ತೆ ಇದೆ. ಹಾಳಾದ ಡಾಮರು ರಸ್ತೆಯನ್ನು ಹಾಗೆಯೇ ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಸರಿಪಡಿಸುವಂತೆ ಸ್ಥಳೀಯರು ಕಾಪು ಪುರಸಭೆಗೆ ಮನವಿ ನೀಡಿದ್ದಾರೆ.
ಬಡಗರುಗುತ್ತು ವಾರ್ಡ್‌ನ 60ರಿಂದ 70ರಷ್ಟು ಮನೆಯವರಿಗೆ ಇದೇ ಪ್ರಮುಖ ಸಂಪರ್ಕ ರಸ್ತೆ. ದೈನಂದಿನ ಕೆಲಸಗಳಿಗೆ ಇದರಲ್ಲೇ ಸಾಗಬೇಕು. ಅಲ್ಲಲ್ಲಿ ಹೊಂಡಗಳು ಬಿದ್ದಿರುವುದರಿಂದ ದ್ವಿಚಕ್ರ ವಾಹನ, ರಿಕ್ಷಾ, ಕಾರು, ಜೀಪು ಸಹಿತ ಯಾವುದೇ ವಾಹನ ಗಳನ್ನೂ ಚಲಾಯಿಸುವುದು ಕಷ್ಟವಾಗಿದೆ. ಭರವಸೆಗೆ ಮಾತ್ರ ಸೀಮಿತ
ರಸ್ತೆ ಹಾಳಾಗಿರುವ ಬಗ್ಗೆ ಪುರಸಭೆಗೆ ಹಲವು ಬಾರಿ ಮನವಿ ಮಾಡಲಾಗಿದೆ. ಕಳೆದ 2 ವರ್ಷಗಳಿಂದಲೂ ಈ ರಸ್ತೆ ಸರಿಪಡಿಸಿ ಕೊಡುತ್ತೇವೆ ಎಂದು ಮುಖ್ಯಾಧಿಕಾರಿ ಸಹಿತ ಎಲ್ಲರೂ ಭರವಸೆ ನೀಡಿದ್ದಾರೆ. ಆದರೆ ಇನ್ನೂ ತೇಪೆ ಹಚ್ಚುವ
ಕೆಲಸವೂ ನಡೆದಿಲ್ಲ.
– ಅನ್ವರ್ ಆಲಿ
ಮಾಜಿ ಸದಸ್ಯ, ಮಲ್ಲಾರು ಗ್ರಾಮ ಪಂಚಾಯತ್
Related Articles
ಬಡಗರಗುತ್ತು ವಾರ್ಡ್‌ನ ರಸ್ತೆ ದುರವಸ್ಥೆಯ ಬಗ್ಗೆ ಈಗಾಗಲೇ ಸ್ಥಳೀಯ ನಿವಾಸಿಗಳು ಮನವಿ ನೀಡಿದ್ದಾರೆ. ಕಾಂಕ್ರೀಟ್ ಹಾಕುವ ವೇಳೆ ಇಷ್ಟು ಭಾಗ ಮಾತ್ರ ಉಳಿಸಿ ಯಾಕಾಗಿ ಕಾಮಗಾರಿ ನಡೆಸಿದ್ದಾರೆ ಎನ್ನುವುದು ತಿಳಿದಿಲ್ಲ. ಕಳೆದ ವರ್ಷದ ಬಜೆಟ್‌ನಲ್ಲಿ ಅದನ್ನು ಸೇರಿಸಲು ಅಸಾಧ್ಯವಾಗಿದ್ದು ಈ ಬಾರಿ ಅದಕ್ಕೆ ವಿಶೇಷ ಅನುದಾನ ಜೋಡಿಸಿ ಮಳೆಗಾಲ ಮುಗಿದ ತತ್‌ಕ್ಷಣ ದುರಸ್ತಿ ಮಾಡಿಕೊಡಲಾಗುವುದು .
– ರಾಯಪ್ಪ ,ಮುಖ್ಯಾಧಿಕಾರಿ,ಕಾಪು ಪುರಸಭೆ
Advertisement