Advertisement

ಶ್ರೀಲಂಕಾ ತಂಡಕ್ಕೆ ಮಾಲಿಂಗ ನಾಯಕ

06:00 AM Dec 16, 2018 | Team Udayavani |

ಕೊಲಂಬೊ: ಕ್ರಿಕೆಟ್‌ ಬದುಕು ಮುಗಿದೇ ಹೋಯಿತು ಎಂಬ ಹಂತದಲ್ಲಿ ಶ್ರೀಲಂಕಾ ಬೌಲರ್‌ ಲಸಿತ ಮಾಲಿಂಗ ಅವರಿಗೆ ರಾಷ್ಟ್ರೀಯ ತಂಡದ ನಾಯಕತ್ವದ ಯೋಗ ಒಲಿದು ಬಂದಿದೆ. ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಆಡಲಾಗುವ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಯ ವೇಳೆ ಮಾಲಿಂಗ ನೇತೃತ್ವದಲ್ಲಿ ತಂಡ ಕಣಕ್ಕಿಳಿಯಲಿದೆ.

Advertisement

ಈ ವರ್ಷ ಅತ್ಯಂತ ಕಳಪೆ ಫಾರ್ಮ್ನಲ್ಲಿರುವ ಶ್ರೀಲಂಕಾ ತವರಿನಲ್ಲೇ ಸಾಲು ಸಾಲು ಸೋಲು ಅನುಭವಿಸುತ್ತಲೇ ಬಂದಿತ್ತು. ಜಿಂಬಾಬ್ವೆ ಕೂಡ ಸಿಂಹಳೀಯರನ್ನು ಮಣಿಸಿ ಸುದ್ದಿಯಾಗಿತ್ತು. ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಆಡಲಾದ ಕೊನೆಯ ಮುಖಾಮುಖೀಯಲ್ಲಿ ಲಂಕಾ ಎಲ್ಲ 3 ಮಾದರಿಗಳ ಸರಣಿಯಲ್ಲೂ ಸೋಲನುಭವಿಸಿತ್ತು. ಆಗ ಏಕದಿನಕ್ಕೆ ದಿನೇಶ್‌ ಚಂಡಿಮಾಲ್‌, ಟಿ ಟ್ವೆಂಟಿಗೆ ತಿಸರ ಪೆರೆರ ನಾಯಕರಾಗಿದ್ದರು. ಮುಂದಿನ ವರ್ಷದ ವಿಶ್ವಕಪ್‌ ಒಳಗಾಗಿ ತಂಡ ಫಾರ್ಮ್ಗೆ ಮರಳಬೇಕಾದ ಅನಿವಾರ್ಯತೆ ಇರುವುದರಿಂದ “ಶ್ರೀಲಂಕಾ ಕ್ರಿಕೆಟ್‌ ಮಂಡಳಿ’ ನಾನಾ ಪ್ರಯೋಗಗಳಿಗೆ ಮುಂದಾಗುತ್ತಿದೆ. ಮಾಲಿಂಗ ಅವರಿಗೆ ಮರಳಿ ನಾಯಕತ್ವ ವಹಿಸಿದ್ದು ಕೂಡ ಈ ಪ್ರಯೋಗದ ಒಂದು ಭಾಗವೇ ಆಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್‌ ಉರುಳಿಸಿರುವ 35ರ ಹರೆಯದ ಲಸಿತ ಮಾಲಿಂಗ ಲಂಕಾ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲಲ್ಲ. 10 ಟಿ20 ಪಂದ್ಯಗಳಲ್ಲಿ ಅವರು ತಂಡದ ನೇತೃತ್ವ ವಹಿಸಿ ಏಳರಲ್ಲಿ ಗೆಲುವು ಸಾಧಿಸಿದ್ದಾರೆ.

ಶ್ರೀಲಂಕಾ ತಂಡ: ಲಸಿತ ಮಾಲಿಂಗ (ನಾಯಕ), ನಿರೋಷನ್‌ ಡಿಕ್ವೆಲ್ಲ (ಉಪನಾಯಕ), ಏಂಜೆಲೊ ಮ್ಯಾಥ್ಯೂಸ್‌, ಕುಸಲ್‌ ಪೆರೆರ, ದಿನೇಶ್‌ ಚಂಡಿಮಾಲ್‌, ಕುಸಲ್‌ ಮೆಂಡಿಸ್‌, ಧನಂಜಯ ಡಿ’ಸಿಲ್ವ, ತಿಸರ ಪೆರೆರ, ಸಿಕ್ಕುಗೆ ಪ್ರಸನ್ನ, ನುವಾನ್‌ ಪ್ರದೀಪ್‌, ಲಕ್ಷಣ ಸಂದಕನ್‌, ದಸುನ್‌ ಶಣಕ, ದನುಷ್ಕ ಗುಣತಿಲಕ, ದುಷ್ಮಂತ ಚಮೀರ, ಕಸುನ್‌ ರಜಿತ, ಲಹಿರು ಕುಮಾರ, ಅಸೇಲ ಗುಣರತೆ¾.

Advertisement

Udayavani is now on Telegram. Click here to join our channel and stay updated with the latest news.

Next