ಮುಂಬೈ: ವಾಣಿಜ್ಯ ನಗರಿ ಮುಂಬೈನ ಧಾರಾವಿ ಕೊಳಗೇರಿ ನಿವಾಸಿ ಮಲೀಶಾ ಖರ್ವಾ (14ವರ್ಷ) ಇದೀಗ ಜನಪ್ರಿಯ ಬ್ಯೂಟಿ ಬ್ರ್ಯಾಂಡ್ ಫಾರೆಸ್ಟ್ ಎಸ್ಸೆನ್ಶಿಯಲ್ಸ್ ನ ನೂತನ “ದ ಯುವತಿ ಕಲೆಕ್ಷನ್” ಎಂಬ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನಸೆಳೆದಿದ್ದಾಳೆ.
ಇದನ್ನೂ ಓದಿ:“ಹೆಣ್ಣು ಮಗು ಹುಟ್ಟಿತೆಂದು ತಂದೆ ನನ್ನ ಮುಖವನ್ನೇ ನೋಡಿಲ್ಲ..” ನಟಿ Karishma Tanna
2020ರಲ್ಲಿ ಹಾಲಿವುಡ್ ನಟ ರಾಬರ್ಟ್ ಹಾಫ್ ಮನ್ ಮುಂಬೈಗೆ ಆಗಮಿಸಿದ್ದ ವೇಳೆ ಮಲೀಶಾಳನ್ನು ಗುರುತಿಸಿದ್ದರು. ನಂತರ ಮಲೀಶಾಳ ಹೆಸರಿನಲ್ಲಿ ಗೋ ಫಂಡ್ ಮೀ ಪೇಜ್ ಖಾತೆಯನ್ನು ತೆರೆದು ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದರು.
ಇಂದು 14ವರ್ಷದ ಮಲೀಶಾ ಖರ್ವಾ Instagram ಪೇಜ್ ನಲ್ಲಿ 2,25,000ಕ್ಕೂ ಅಧಿಕ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
Related Articles
“ಲೈವ್ ಯುವರ್ ಫೇರ್ ಟೇಲ್” ಕಿರು ಚಿತ್ರದಲ್ಲಿ ಮಲೀಶಾ ನಟಿಸಿದ್ದಾರೆ. ಇದೀಗ ಫಾರೆಸ್ಟ್ ಎಸ್ಸೆನ್ಶಿಯಲ್ಸ್ ನ ಹೊಸ ಅಭಿಯಾನದ “ಯುವತಿ ಸೆಲೆಕ್ಷನ್” ಹೆಸರಿನ ಜಾಹೀರಾತಿನಲ್ಲಿಕಾಣಿಸಿಕೊಂಡಿದ್ದು, ಇದು ಯುವ ಮನಸ್ಸುಗಳನ್ನು ಸಶಕ್ತಗೊಳಿಸುವ ಸಾಮಾಜಿಕ ಕಾಳಜಿಯನ್ನು ಹೊಂದಿರುವುದಾಗಿ ವರದಿ ತಿಳಿಸಿದೆ.
ತಮ್ಮ ಬ್ರ್ಯಾಂಡ್ ನಲ್ಲಿ ಮಲೀಶಾ ಖರ್ವಾ ಕಾಣಿಸಿಕೊಂಡಿರುವುದಕ್ಕೆ ಫಾರೆಸ್ಟ್ ಎಸ್ಸೆನ್ಶಿಯಲ್ಸ್ ಸಂತಸ ವ್ಯಕ್ತಪಡಿಸಿ, ಇನ್ಸ್ ಟಾಗ್ರಾಮ್ ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಆಕೆ ಕಂಡ ಕನಸು ಕಣ್ಣೆದುರೇ ನನಸಾಗಿರುವುದಕ್ಕೆ ಸಂತಸಗೊಂಡಿದ್ದು, ಆಕೆಯ ಕಣ್ಣುಗಳೇ ಅದಕ್ಕೆ ಸಾಕ್ಷಿಯಾಗಿದೆ. ಕನಸು ನನಸಾಗಲಿ ಎಂಬ ಧ್ಯೇಯಕ್ಕೆ ಮನೀಶಾ ಜೀವನಗಾಥೆ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದೆ.