Advertisement

ಪಡಿತರ ಅಕ್ಕಿ -ಗೋಧಿ ಪ್ರಮಾಣ ಹೆಚ್ಚಿಸಿ: ಶಾಸಕ ರಾಮಪ್ಪ

11:22 AM Apr 22, 2020 | Naveen |

ಮಲೇಬೆನ್ನೂರು: ಶಾಸಕ ಎಸ್‌. ರಾಮಪ್ಪ ಅವರು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆ, ಆರಕ್ಷಕ ಇಲಾಖೆ, ಕಂದಾಯ ಇಲಾಖೆ ಮತ್ತು ಪುರಸಭೆ ಇಲಾಖೆಗಳು ಕೋವಿಡ್  ನಿಯಂತ್ರಣದ ಬಗ್ಗೆ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನಮ್ಮ ಜಿಲ್ಲೆಯಲ್ಲಿ ಮೂವರು ಕ್ವಾರಂಟೈನ್‌ನಲ್ಲಿದ್ದರು. ಅವರೆಲ್ಲಾ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸ್ಥಳೀಯ ಸಂಘ ಸಂಸ್ಥೆಗಳು ನಿರ್ಗತಿಕರನ್ನು ಗುರುತಿಸಿ ವಿವಿಧ ರೀತಿಯ ಸೌಲಭ್ಯಗಳ ಕಿಟ್‌ ನೀಡುತ್ತಿವೆ. ಸರ್ಕಾರದಿಂದ ಯಾವುದೇ ಸಹಾಯ ಸಿಗುತ್ತಿಲ್ಲ. ಸರ್ಕಾರ ಪಡಿತರ ಅಕ್ಕಿ ಮತ್ತು ಗೋಧಿ  ಯನ್ನು ಕಡಿಮೆ ಕೊಡುತ್ತಿದೆ. ಈ ಸಮಯದಲ್ಲಿ ಈ ರೀತಿ ಮಾಡಬಾರದಿತ್ತು ಎಂದರು.

ಸರ್ಕಾರದ ಆದೇಶದ ಮೇರೆಗೆ ಭದ್ರಾ ಜಲಾಶಯದಿಂದ ನಾಲೆಗೆ ಮೇ 6 ರಂದು ನೀರು ನಿಲುಗಡೆಯಾಗುತ್ತದೆ ಆದರೆ ಕೊನೆ ಭಾಗದ ಜಮೀನುಗಳಿಗೆ ನೀರು ತಡವಾಗಿ ಸಿಕ್ಕಿದ್ದು ಇನ್ನೂ ನೀರು ಬೇಕು ಎಂದು ರೈತರು ಬೇಡಿಕೆ ಮುಂದಿಟ್ಟಿದ್ದಾರೆ. ಆದ್ದರಿಂದ ಮೇ 30ರ ವರೆಗೆ ನೀರು ಹರಿಸುವಂತೆ ಜಲ ಸಂಪನ್ಮೂಲ ಇಲಾಖೆಗೆ ಮತ್ತು ಕಾಡಾ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ ಎಂದರು.

ಕೃಷಿಗೆ ಸಂಬಂಧಿಸಿದ ಆಟೋಮೊಬೈಲ್‌ ಅಂಗಡಿ ಮತ್ತು ಗ್ಯಾರೇಜ್‌ಗಳನ್ನು ಓಪನ್‌ ಮಾಡಿಸುವಂತೆ ಪುರಸಭೆ ಸದಸ್ಯ ಬಿ. ಸುರೇಶ್‌ ಶಾಸಕರಲ್ಲಿ ಮನವಿ ಮಾಡಿದರು. ಡಾ| ಬಿ. ಚಂದ್ರಶೇಖರ್‌ ಮಾತನಾಡಿ, ಯಾವುದೇ ಅಂಜಿಕೆಯಿಲ್ಲದೆ ರಸಎತಗಳಲ್ಲಿ ಐದಾರು ಜನ ಗುಂಪು ಸೇರುತ್ತಾರೆ. ದ್ವಿಚಕ್ರ ವಾಹನದಲ್ಲಿ ಮಾಸ್ಕ್ ಹಾಕಿಕೊಳ್ಳದೆ ಹೆಲ್ಮೆಟ್‌ ಧರಿಸದೆ 3 ಜನ ಪ್ರಯಾಣಿಸುತ್ತಾರೆ. ಪೊಲೀಸ್‌ ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕು ಎಂದರು. ಪಟ್ಟಣದಲ್ಲೂ ಸಹ ಪ್ರತಿಯೊಂದು ವಾರ್ಡ್‌ನ ಸದಸ್ಯರು, ಆಶಾ ಕಾರ್ಯಕರ್ತೆ, ಪೊಲೀಸ್‌, ಆರೋಗ್ಯ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿಯನ್ನೊಳಗೊಂಡ ಟಾಸ್ಕ್ ಫೋರ್ಸ್
ರಚನೆ ಮಾಡಬೇಕು ಆಗ ಕೊರೊನಾ ವೈರಸ್‌ ನಿಯಂತ್ರಣ ಸುಭವಾಗುತ್ತದೆ ಎಂದು ಸಲಹೆ ನೀಡಿದರು.

ಮಲೇಬೆನ್ನೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇದುವರೆಗೆ ಸುಮಾರು 327 ಜನರನ್ನು ಪರೀಕ್ಷಿಸಿ ಕ್ವಾರಂಟೈನ್‌ ಮಾಡಲಾಗಿತ್ತು ಅವರಲ್ಲಿ 310 ಜನ ಬಿಡುಗಡೆಯಾಗಿದ್ದು ಇನ್ನುಳಿದ 27 ಜನರು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ| ಲಕ್ಷ್ಮೀದೇವಿ ತಿಳಿಸಿದರು.

Advertisement

ಪರಸ್ಥಳದಿಂದ ಬಂದವರು ಕಡ್ಡಾಯವಾಗಿ ಆಸ್ಪತ್ರೆಗೆ ಬಂದು ಪರೀಕ್ಷೆಗೊಳಪಡಬೇಕು. ನಿರ್ಗತಿಕರ, ಅಲೆಮಾರಿ ಕುಟುಂಬಗಳ ಮನೆಗಳಿಗೆ ಹೋಗಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿ ಬರುತ್ತಿದ್ದೇವೆ. ಅಗ್ನಿಶಾಮಕ ದಳದವರ ಸಹಾಯದಿಂದ ಪಟ್ಟಣದಲ್ಲಿ ಔಷ ಧ ಸಿಂಪಡಣೆ ಮಾಡಿಸಿದ್ದೇವೆ. ಸುಡುಗಾಡು ಸಿದ್ಧರು ಹಾಗೂ ನಿರ್ಗತಿಕರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಹಾಲು ಹಾಗೂ ಆಹಾರದ ಕಿಟ್‌ ವಿತರಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್‌, ಉಪತಹಶೀಲ್ದಾರ್‌ ರವಿ, ಪಿಎಸ್‌ಐ ಕಿರಣ್‌ಕುಮಾರ್‌, ನೀರಾವರಿ ಇಲಾಖೆ ಎಇಇ ರವಿಕುಮಾರ್‌, ಎಪಿಎಂಸಿ ಸದಸ್ಯ ಮಂಜುನಾಥ ಪಟೇಲ್‌, ಎಸ್‌.ಕೆ. ಅಲ್ತಾಫ್‌, ಪುರಸಭೆ ಸಿಬ್ಬಂದಿ ಗುರುಪ್ರಸಾದ್‌, ಉಮೇಶ್‌, ನವೀನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next