Advertisement

ನೌಕರರ ಪ್ರತಿಭಟನೆ ತಾತ್ಕಾಲಿಕ ಹಿಂದಕ್ಕೆ

11:49 AM Jan 15, 2020 | Naveen |

ಮಲೇಬೆನ್ನೂರು: ಕಳೆದ ನಾಲ್ಕು ತಿಂಗಳ ಸಂಬಳ ಪಾವತಿಗೆ ಆಗ್ರಹಿಸಿ ಕಳೆದ 9
ದಿನಗಳಿಂದ ನೀರಾವರಿ ಇಲಾಖೆ ಎದುರು ಹೊರಗುತ್ತಿಗೆ ನೌಕರರು ಕುಟುಂಬ ಸಮೇತ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಧಿಕಾರಿಗಳ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

Advertisement

ಬಸವಾಪಟ್ಟಣ, ಸಾಸ್ವೆಹಳ್ಳಿ ವಿಭಾಗದ ನೀರು ನಿರ್ವಹಣೆ ಮಾಡುವ ಸೌಡಿಗಳಿಗೆ ಮೂರು ತಿಂಗಳ ಮತ್ತು ಮಲೇಬೆನ್ನೂರು ಭಾಗದ ಸೌಡಿಗಳಿಗೆ ನಾಲ್ಕು ತಿಂಗಳಿಂದ ಗುತ್ತಿಗೆದಾರರು ಸಂಬಳ ನೀಡಿಲ್ಲ. ನಮ್ಮಿಂದ ಕೆಲಸ ಮಾಡಿಸಿಕೊಳ್ಳುತ್ತೀರಿ. ಆದರೆ ಸಂಬಳ ಕೊಡುವಾಗ ಮಾತ್ರ ನಾವು ನಮಗೆ ಸಂಬಂಧವಿಲ್ಲ ಎಂದು ಹೇಳುತ್ತೀರಿ ಎಂದು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎ.ಕೆ. ಆಂಜನೇಯ ಇಇ ಶೆಟ್ಟರ್‌ ರಾಜಶೇಖರ್‌ ಆಬಣ್ಣರೊಂದಿಗೆ ವಾಗ್ವಾದ ನಡೆಸಿದರು.

ಗುತ್ತಿಗೆದಾರರು ನೌಕರರಿಗೆ ಸಂಬಳ ನೀಡಬೇಕು. ನಂತರ ಅವರ ಪಿ.ಎಫ್‌ ಭರಿಸಿ ಅದರ ರಸೀದಿಯನ್ನು ಇಇ ಅವರಲ್ಲಿ ಕೊಟ್ಟ ಮೇಲೆ ಅವರಿಗೆ ದುಡ್ಡು ಬರುತ್ತೆ. ಆದರೆ ಗುತ್ತಿಗೆದಾರರು ನಿಮ್ಮ ಸಂಬಳದ ಹಣ ಪಡೆದು ನಿಮಗೆ ನೀಡುತ್ತಿಲ್ಲ ಎಂದು ಇಇ ಶೆಟ್ಟರ್‌ ರಾಜಶೇಖರ್‌ ಆಬಣ್ಣ ತಿಳಿಸಿದರು.

ಸ್ಥಳಕ್ಕೆ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್‌ ಆಗಮಿಸಿ ನೌಕರರ ಸಮಸ್ಯೆ ಆಲಿಸಿದರು. ಕೇವಲ ಪ್ರತಿಭಟನೆ ಮಾಡುತ್ತಾ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ನೌಕರರು, ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಒಟ್ಟಿಗೆ ಕುಳಿತು ಒಂದು ತೀರ್ಮಾನಕ್ಕೆ ಬರಬೇಕಿದೆ. ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.

ಪ್ರತಿಭಟನಾಕಾರರು ಸ್ಥಳಕ್ಕೆ ಸೆಕ್ಷನ್‌ ಆಫೀಸರ್‌ ರವಿಚಂದ್ರ ಬರಬೇಕು ಎಂದು
ಪಟ್ಟು ಹಿಡಿದರು. ಆಗ ರವಿಚಂದ್ರ ಅವರೊಂದಿಗೆ ತೇಜಸ್ವಿ ಪಟೇಲ್‌ ದೂರವಾಣಿ ಮೂಲಕ ಮಾತನಾಡಿ ಸೌಡಿಗಳ ಸಮಸ್ಯೆ ತಿಳಿಸಿದರು. ಇನ್ನೆರಡು ದಿನಗಳೊಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ರವಿಚಂದ್ರ ಭರವಸೆ ನೀಡಿದರು. ಶುಕ್ರವಾರದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಶನಿವಾರದಿಂದ ತಾವೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತೇಜಸ್ವಿ ಪಟೇಲ್‌ ತಿಳಿಸಿದರು.

Advertisement

ನೌಕರರ ಸಂಘದ ಅಧ್ಯಕ್ಷ ಎ.ಕೆ. ಆಂಜನೇಯ ಮಾತನಾಡಿ, ತೇಜಸ್ವಿ ಪಟೇಲ್‌
ತಿಳಿಸಿದಂತೆ ಇನ್ನೆರಡು ದಿನ ಕಾಯೋಣ. ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಅವರು ಹೇಳಿದಂತೆ ಪ್ರತಿಭಟನೆ ನಡೆಸೋಣ ಎಂದಾಗ ಎಲ್ಲರೂ ಒಪ್ಪಿ ಶುಕ್ರವಾರದವರೆಗೆ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆಯಲಾಯಿತು.
ಮಕ್ಕಳಿಗೆ ಪರೀಕ್ಷೆ ಪ್ರಾರಂಭವಾಗಿದೆ. ಶಾಲೆ ಫೀ ಕಟ್ಟಿಲ್ಲ ಎಂದು ಮಕ್ಕಳನ್ನು ಪರೀಕ್ಷೆಗೆ ಕುಳಿತುಕೊಳ್ಳಲು ಬಿಡುತ್ತಿಲ್ಲ. ಹಾಲ್‌ ಟಿಕೆಟ್‌ ಸಹ ಕೊಡುತ್ತಿಲ್ಲ. ಕರೆಂಟ್‌ ಬಿಲ್‌ ಕಟ್ಟಿಲ್ಲ ಎಂದು ವಿದ್ಯುತ್‌ ಕಡಿತ ಮಾಡಲಾಗಿದೆ. ಮಕ್ಕಳು ಹೇಗೆ ಓದಬೇಕು ಎಂದು ನೌಕರ ಮಹಮ್ಮದ್‌ ಅಲಿ ಸಮಸ್ಯೆ ತೋಡಿಕೊಂಡರು.

ನಮ್ಮ ಇಎಸ್‌ಐ ಕಟ್ಟಿಲ್ಲ ಎಂದು ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ, ಔಷ ಧಿ ನೀಡುತ್ತಿಲ್ಲ. ಬೇರೆಡೆಯಿಂದ ಔಷ ಧಿ ತರಲೂ ಹಣ ಇಲ್ಲ. ಊರಿಗೆ ಹೋಗಲೂ ಕಾಸು ಇಲ್ಲ. ರೇಷನ್‌ ಅಂಗಡಿಯಲ್ಲಿ ಬಾಕಿ ಇರುವುದರಿಂದ ಅವರೂ ರೇಷನ್‌ ಕೊಡುತ್ತಿಲ್ಲ. ಧರ್ಮಸ್ಥಳ ಸಂಘದಿಂದ ಸಾಲ ತಂದು ಮನೆ ನಡೆಸುತ್ತಿದ್ದೇವೆ. ಸಂಘಗಳಿಗೆ ಈಗ ಹಣ ಕಟ್ಟಬೇಕಿದೆ. ಅವರು ಮನೆಬಾಗಿಲಿಗೆ ಬಂದು ಹೋಗುತ್ತಿದ್ದಾರೆ ಎಂದು ಮಹಿಳೆಯರು ಕಣ್ಣೀರಿಟ್ಟರು.

ಪ್ರತಿಭಟನೆ ನಡೆಸಿದ ದಿನಗಳ ಸಂಬಳವನ್ನು ಯಾವ ಕಾರಣಕ್ಕೂ ಕಡಿತ
ಮಾಡಿಕೊಳ್ಳುವಂತಿಲ್ಲ. ನಮಗೆ ನಾಲ್ಕು ತಿಂಗಳ ಸಂಬಳ ಕೂಡಲೇ ಕೊಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ನೌಕರರ ಸಂಘದ ಉಪಾಧ್ಯಕ್ಷ ಬಿ. ಶಿವಣ್ಣ, ಲಕ್ಕಪ್ಪ, ಯಶವಂತರಾಜ್‌, ಎಚ್‌.
ಆಂಜನೇಯ, ರೇವಣಸಿದ್ದಪ್ಪ, ಬಸವರಾಜ, ಕುಬೇರ, ಸುರೇಶ್‌, ನಾರಂದ, ಎಸ್‌.
ಎನ್‌. ಶಿವಕುಮಾರ, ಕವಿತ, ಲತಾ, ಸುಮಾ, ಸುಭದ್ರಮ್ಮ, ಸುಧಾ, ಮಂಜಮ್ಮ, ಅನಸೂಯಮ್ಮ, ಬಂದಮ್ಮ, ರಹಮತ್‌ ಉನ್ನಿಸಾ, ಗೀತಮ್ಮ, ಮಂಜುಳ, ಶಾಂತಮ್ಮ, ಅನ್ನಪೂರ್ಣಮ್ಮ, ಆಶಾ, ಪಾರ್ವತಮ್ಮ, ಲೀಲಾಬಾಯಿ,ಕವಿತ, ಮಂಜುಳಾ ಬಾಯಿ, ಬಸವಾಪಟ್ಟಣ, ಸಾಸ್ವೆಹಳ್ಳಿ ಮತ್ತು ಮಲೇಬೆನ್ನೂರು ವಿಭಾಗದ ಎಲ್ಲಾ ಹೊರಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next